• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಈರುಳ್ಳಿ ಆಯ್ತು ಈಗ ಎಲ್ಲಾ ತರಕಾರಿ ಬೆಲೆ ದುಬಾರಿ

|

ಬೆಂಗಳೂರು, ಡಿಸೆಂಬರ್ 16: ಕೇವಲ ಈರುಳ್ಳಿ ಮಾತ್ರವಲ್ಲ ಎಲ್ಲಾ ತರಕಾರಿ ಬೆಲೆಯೂ ದುಬಾರಿಯಾಗಿದೆ.

ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

ಬಡಾಣಿ, ಟೊಮೆಟೋ ಮಾತ್ರ ಅಗ್ಗವಾಗಿದೆ. ನಗರದ ಮಾರುಕಟ್ಟೆಯಲ್ಲಿ ಬಟಾಣಿ ಮತ್ತು ಟೊಮೆಟೋ ಹೊರತುಪಡಿಸಿದರೆ ಬೆಂಡೆಕಾಯಿ , ತೊಂಡೆಕಾಯಿ, ಬೀನ್ಸ್, ಕ್ಯಾರೆಟ್, ಗೋರಿಕಾಯಿ, ಬೀಟ್‌ರೂಟ್, ಈರುಳ್ಳಿ, ಬೆಳ್ಳುಳ್ಳಿ , ಆಲೂಗಡ್ಡೆ ಸೇರಿದಂತೆ ಬಹುತೇಕ ತರಕಾರಿಗಳ ದರದಲ್ಲಿ ಏರಿಕೆಯಾಗಿದೆ.

ಹುಬ್ಬಳ್ಳಿ ಎಪಿಎಂಸಿಗೆ ಬಂತು ಟರ್ಕಿ ಈರುಳ್ಳಿ

200ರ ಗಡಿ ತಲುಪಿದ್ದ ಈರುಳ್ಳಿ ಬೆಲೆ ಇದೀಗ ಕೊಂಚ ಕಡಿಮೆಯಾಗಿದ್ದು 120 ರೂಗೆ ಲಭ್ಯವಾಗುತ್ತಿದೆ. ಒಂದು ಮೊಟ್ಟೆ ಬೆಲೆ ಕೂಡ 6 ರೂ. ಗೆ ತಲುಪಿದೆ.

 ತರಕಾರಿಗಳ ಬೆಲೆ ಎಷ್ಟು?

ತರಕಾರಿಗಳ ಬೆಲೆ ಎಷ್ಟು?

ಬಟಾಣಿ ಮಾತ್ರ ಕೆಜಿಗೆ 40-50 ರೂ. ಟೊಮೆಟೋ ಕೆಜಿ 20 ರೂ.ಗೆ ಖರೀದಿಯಾಗುತ್ತಿವೆ. ಕೆಲ ದಿನಗಳಿಂದ ಬಹುಬೇಡಿಕೆ ಇದ್ದ ಈರುಳ್ಳಿ ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 60ರೂ.ನಿಂದ 100 ರೂ. ನಿಗದಿಯಾಗಿದೆ. ವಿವಿಧ ಸೊಪ್ಪುಗಳ ದರದಲ್ಲಿ ಇಳಿಕೆಯಾಗಿದ್ದರೆ, ಸಬ್ಬಕ್ಕಿ ಸೊಪ್ಪು ಪೂರೈಕೆ ಇಲ್ಲದೆ ಬೆಲೆ ಗಗನಕ್ಕೇರಿದೆ.

 ಚಳಿಗಾಲಿದಲ್ಲಿ ತರಕಾರಿ ಇಳುವರಿ ಕಡಿಮೆ

ಚಳಿಗಾಲಿದಲ್ಲಿ ತರಕಾರಿ ಇಳುವರಿ ಕಡಿಮೆ

ಚಳಿಗಾಲದಲ್ಲಿ ತರಕಾರಿ ಇಳುವರಿ ಕಡಿಮೆ . ಈವರೆಗೆ ಮದುವೆ, ಗೃಹಪ್ರವೇಶದಂತಹ ಶುಭ ಕಾರ್ಯಗಳು ಹೆಚ್ಚಾಗಿದ್ದವು. ಹೀಗಾಗಿ ತರಕಾರಿಗಳಿಗೆ ಬೇಡಿಕೆ ಹೆಚ್ಚಾಗಿ ಬೆಲೆಗಳು ದುಬಾರಿಯಾಗಿವೆ. ಡಿ.17ರಿಂದ ಧನುರ್ಮಾಸ. ಈ ಮಾಸದಲ್ಲಿ ಶುಭ ಕಾರ್ಯಗಳು ನಡೆಯುವುದು ಕಡಿಮೆ. ಹೀಗಾಗಿ ಮುಂದಿನ ದಿನಗಳಲ್ಲಿ ತರಕಾರಿಗಳ ದರ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

 ನುಗ್ಗೆಕಾಯಿ ಕೆಜಿಗೆ 440 ರೂ.

ನುಗ್ಗೆಕಾಯಿ ಕೆಜಿಗೆ 440 ರೂ.

ನುಗ್ಗೆಕಾಯಿ ಒಂದು ಕೆಜಿಗೆ 440 ರೂ. ಏರಿಕೆಯಾಗಿದೆ. ಪೂರೈಕೆ ಕೊರತೆಯಿಂದ ಕೆಲ ದಿನಗಳಿಂದ ಬೆಲೆ ಹೆಚ್ಚಾಗಿದ್ದ ನುಗ್ಗೆಕಾಯಿಗೆ ಬಹುಬೇಡಿಕೆ ಕುದುರಿದೆ. ಮಾರುಕಟ್ಟೆಯಲ್ಲಿ ಹುಡುಕಿದರೂ ನುಗ್ಗೆಕಾಯಿ ಸಿಗುತ್ತಿಲ್ಲ. ಹೀಗಾಗಿ ದರ ದಾಖಳೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ತಿಂಗಳು ಹಾಪ್‌ಕಾಮ್ಸ್‌ನಲ್ಲಿ ನುಗ್ಗೆಕಾಯಿ ಕೆಜಿಗೆ 299 ರೂ. ಇದ್ದಿದ್ದು, 440 ರೂ. ಆಗಿದೆ. ಒಂದು ನುಗ್ಗೆಕಾಯಿ 35 ರೂ. ರಿಂದ 40 ರೂಗೆ ಮಾರಾಟವಾಗುತ್ತದೆ. ತಮಿಳುನಾಡು, ಆಂಧ್ರ ಮತ್ತಿತರೆ ಪ್ರದೇಶಗಳಲ್ಲಿ ಮಳೆಗೆ ನುಗ್ಗೆ ಮರದ ಹೂಗಳು ನೆಲ ಕಚ್ಚಿವೆ.

 ತರಕಾರಿ ಬೆಲೆ

ತರಕಾರಿ ಬೆಲೆ

ಈರುಳ್ಳಿ-139 ರೂ.

ಸಬ್ಬಕ್ಕಿ ಸೊಪ್ಪು-115 ರೂ.

ಬೆಳ್ಳುಳ್ಳಿ-208 ರೂ.

ಗೋರಿಕಾಯಿ-61 ರೂ.

ಟೊಮೆಟೋ-24 ರೂ.

ಊಟಿ ಕ್ಯಾರೆಟ್-92ರೂ.

ಬೆಂಡೆಕಾಯಿ-54 ರೂ.

ಕೊತ್ತಂಬರಿ ಸೊಪ್ಪು-65 ರೂ.

ಬೋಟ್‌ರೂಟ್ -67 ರೂ.

ಮೂಲಂಗಿ-39 ರೂ.

ಪಾಲಕ್ ಸೊಪ್ಪು-52 ರೂ.

English summary
Not only onions but all vegetable prices are expensive in market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X