ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

''ಮಾಸ್ಕ್ ಮಾತ್ರವಲ್ಲ, ಹೆಲ್ಮೆಟ್ ಧರಿಸಿಬೇಕು''- ಬೆಂಗಳೂರು ಡಿಜಿಪಿ ಟ್ವೀಟ್

|
Google Oneindia Kannada News

ಬೆಂಗಳೂರು, ಮಾರ್ಚ್ 4: ಕೊರೊನಾ ವೈರಸ್ ನಿಂದ ದೂರ ಇರಲು ಅನೇಕರು ಮಾಸ್ಕ್ ಮೊರೆ ಹೋಗಿದ್ದಾರೆ. ಆದರೆ, ಜನರು ಮಾಸ್ಕ್ ಮಾತ್ರವಲ್ಲ, ಹೆಲ್ಮೆಟ್ ಸಹ ಧರಿಸಿಬೇಕು ಎಂದು ಬೆಂಗಳೂರು ಡಿಜಿಪಿ ಪ್ರವೀಣ್ ಸೂದ್ ಟ್ವೀಟ್ ಮಾಡಿದ್ದಾರೆ.

''ವಿಶ್ವದಲ್ಲಿ 3 ಸಾವಿರಕ್ಕೂ ಅಧಿಕ ಜನರು ಕೊರೊನಾ ವೈರಸ್ ನಿಂದ ಮರಣ ಹೊಂದಿದ್ದಾರೆ. ಇದರಿಂದ ಇಡೀ ಪ್ರಪಂಚ ಮಾಸ್ಕ್ ಧರಿಸುತ್ತಿದೆ. ಸುಮಾರು 1.35 ಮಿಲಿಯನ್ ಜನರು ಪ್ರತಿ ವರ್ಷ ರಸ್ತೆ ಅಪಘಾತದಲ್ಲಿ ಸಾಯುತ್ತಿದ್ದಾರೆ. ಆದರೆ, ಯಾರೂ ಕೂಡ ಹೆಲ್ಮೆಟ್ ಧರಿಸಲು ಇಷ್ಟಪಡುವುದಿಲ್ಲ'' ಎಂದು ಪ್ರವೀಣ್ ಸೂದ್ ಟ್ವೀಟ್ ಮಾಡಿದ್ದಾರೆ.

Not Only Mask wear Helmet DCP Praveen Sood Tweets

ಕೊರಾನಾವೈರಸ್ ಭೀತಿಯಲ್ಲಿದ್ದರೆ ಈ ಸಹಾಯವಾಣಿಗೆ ಕರೆ ಮಾಡಿಕೊರಾನಾವೈರಸ್ ಭೀತಿಯಲ್ಲಿದ್ದರೆ ಈ ಸಹಾಯವಾಣಿಗೆ ಕರೆ ಮಾಡಿ

ಕೊರೊನಾ ವೈರಸ್ ಭೀತಿಯಿಂದ, ಅದರಿಂದ ಸುರಕ್ಷಿತವಾಗಿ ಇರುವ ಸಾಕಷ್ಟು ಜನರು ಮಾಸ್ಕ್ ಧರಿಸುತ್ತಿದ್ದಾರೆ. ಮಾಸ್ಕ್ ನಷ್ಟೇ ಹೆಲ್ಮೆಟ್ ಸಹ ಮುಖ್ಯ ಎಂದು ಪ್ರವೀಣ್ ಸೂದ್ ಈ ಮೂಲಕ ತಿಳಿಸಿದ್ದಾರೆ. ಕೊರೊನಾ ವೈರಸ್ ಸಮಯವನ್ನು ಬಳಸಿಕೊಂಡು ಹೆಲ್ಮೆಟ್ ಪ್ರಾಮುಖ್ಯತೆ ತಿಳಿಸಿದ್ದಾರೆ.

ನೂತನ ಡಿಜಿ & ಐಜಿಪಿಯಾಗಿ ಪ್ರವೀಣ್ ಸೂದ್ ಅಧಿಕಾರ ಸ್ವೀಕಾರನೂತನ ಡಿಜಿ & ಐಜಿಪಿಯಾಗಿ ಪ್ರವೀಣ್ ಸೂದ್ ಅಧಿಕಾರ ಸ್ವೀಕಾರ

ಪ್ರವೀಣ್ ಸೂದ್ ಟ್ವೀಟ್ ಗೆ ದೊಡ್ಡ ಬೆಂಬಲ ಸಿಕ್ಕಿದೆ. 3 ಸಾವಿರಕ್ಕೂ ಅಧಿಕ ಜನರು ರೀಟ್ವೀಟ್ ಮಾಡಿದ್ದಾರೆ. 12 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಇನ್ನು ಕೆಲವರು ಹೆಲ್ಮೆಟ್ ಮಾತ್ರವಲ್ಲ ಕೆಟ್ಟ ರಸ್ತೆಗಳು ಸಹ ಅಪಘಾತಕ್ಕೆ ಕಾರಣ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

English summary
Coronavirus Scare: Bengaluru DCP Praveen Sood tweets about road safety and helmets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X