Kannada vs Hindi: ಬೆಂಗಳೂರಲ್ಲಿ ಶೇ.70 ಹಿಂದಿಯವರಿದ್ದಾರೆ, ನಾವ್ ಕನ್ನಡ ಮಾತಾಡಲ್ಲ: ವಿಡಿಯೋ ವೈರಲ್
ಕರ್ನಾಟಕದಲ್ಲಿ ಎಲ್ಲರೂ ಕನ್ನಡದಲ್ಲಿ ವ್ಯವಹರಿಸಬೇಕು. ನಾಮಫಲಕಗಳಲ್ಲಿ ಶೇಕಡಾ 60ರಷ್ಟು ಆಡಳಿತ ಭಾಷೆ ಕನ್ನಡ ಕಡ್ಡಾಯಗೊಳಿಸಿದ ಮೇಲೂ ಕನ್ನಡಿಗರ ಮೇಲೆ, ಕನ್ನಡ ಭಾಷೆ ಮೇಲೆ ಪರಭಾಷಿಗರ ದೌರ್ಜನ್ಯ ಮುಂದುವರಿದಿದೆ. ಸ್ವತಃ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಬಳಿಕವೂ ಹಿಂದಿವಾಲಾಗಳು ಮನಬಂದಂತೆ ಈ ನೆಲದ ಭಾಷೆ ಅಗೌರವ ತೋರಿದ ಘಟನೆ ನಡೆದಿದೆ. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸದ್ಯ ವೈರಲ್ ಆಗುತ್ತಿರುವ ವಿಡಿಯೋ ವರ್ತೂರು ಪ್ರೆಸ್ಟೀಜ್ ಲೇಕ್ ಸೈಡ್ ಅಪಾರ್ಟ್‌ಮೆಂಟ್ ಬಳಿ ನಡೆದಿದೆ. ಇದೇ ಅಪಾರ್ಟ್‌ಮೆಂಟ್ ಭದ್ರತಾ ಸಿಬ್ಬಂದಿಗೆ ಕನ್ನಡಿಗರು ಪ್ರಶ್ನೆ ಮಾಡಿದ್ದಾರೆ. ಆ ಇಬ್ಬರು ಸಿಬ್ಬಂದಿ ಹಿಂದಿ ಭಾಷಿಗರಾಗರಾಗಿದ್ದು, ಕನ್ನಡದಲ್ಲಿ ಮಾತನಾಡಲ್ಲ ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ನೀವು ಜನರನ್ನು ಇದೇ ರೀತಿಯ ಉಪಚರಿಸುತ್ತೀರಾ? ಅವರು ಆ ಬಗ್ಗೆ ಒಪ್ಪುತ್ತಿಲ್ಲ. ಇಲ್ಲಿ ಶೇಕಡಾ 70ರಷ್ಟು ಹಿಂದಿ ಭಾಷಿಗರಿದ್ದಾರೆ. ನಾವು ಕನ್ನಡ ಮಾತನಾಡಲ್ಲ. ನೀವು ಹಿಂದಿ ಮಾತನಾಡಿ. ನೀವು ಬೆಂಗಳೂರು, ನಾವಲ್ಲ. ಇಲ್ಲಿ ಅಧಿಕ ಮಂದಿ ಹಿಂದಿಯವರು ಇದ್ದಾರೆ ಎಂದು ಅಪಾರ್ಟ್ ಮೆಂಟ್ ಸಿಬ್ಬಂದಿ ಹೇಳಿದ್ದಾರೆ.

ಕನ್ನಡ ಮಾತನಾಡು ಎಂದವರಿಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಒಂದು ರೀತಿ ಕನ್ನಡ ಭಾಷೆ ಮತ್ತು ಕನ್ನಡಿಗರಿಗೆ ಬೆದರಿಕೆ ಹಾಕಿದಂತೆ ಕೈ ತೋರಿಸಿಕೊಂಡು ಮಾತನಾಡಿದ್ದು ವಿಡಿಯೋದಲ್ಲಿ ಸೆರೆಯಾಗಿದೆ. ಇದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಇವರದ್ದು ನೋಡಿ ಇಲ್ಲಿ ದುರಹಂಕಾರ. ನಾವು ಕನ್ನಡದಲ್ಲಿ ಉತ್ತರಿಸುವಂತೆ ಕೇಳಿದವರೆಲ್ಲರು ಈ ರೀತಿಯ ನಿಂದನೆಯನ್ನು ಎದುರಿಸಿದ್ದಾರೆ. ಇಂತಹವರಿ ನಾಲ್ಕು ಬಾರಿಸಬೇಕು ಅನ್ನಿಸುತ್ತೆ' ನೆಟ್ಟಿಗರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಅನ್ಯಭಾಷಿಗರಿಗೆ ಇಲ್ಲಿ ಎಲ್ಲವು ಸಿಗುತ್ತಿದೆ. ಆದರೆ ಆದರೆ ಅವರು ಕನ್ನಡ ಭಾಷೆ ಕಲಿಯದೇ ದರ್ಪ ಮೆರೆಯುತ್ತಾರೆ. ನಮ್ಮ ಭಾಷೆಯೋದು ಅಂದರೆ ಇವರಿಗೆ ಅಸಡ್ಡೆ. ಆಯ್ಕೊಂಡು ತಿನ್ನೊಕೆ ಬೆಂಗಳೂರಿಗೆ ಬರ್ತಾರೆ. ಆದ್ರೂ ಅವರ ದುರಹಂಕಾರ ನೋಡಿ ಕರ್ಮ, ಇದಕ್ಕೆ ಅಲ್ವ ಉರಿಯೋದು' ಎಂದು ಮತ್ತೊಬ್ಬರು ಕಿಡಿ ಕಾರಿದ್ದಾರೆ.
'ಬೆಂಗಳೂರಿನಲ್ಲಿ ಹಿಂದಿ ವಲಸಿಗರ ಜಾಸ್ತಿ ಆಗಿದ್ದಾರೆ. ಬೆಂಗಳೂರು ವಲಸಿಗರ ಕೊಂಪೆಯಾಗದಂತೆ ತಡೆಯಬೇಕಿದೆ' ಎಂದು ಕನ್ನಡಿಗರು ಸಿಎಂ ಸಿದ್ದರಾಮಯ್ಯ ಹಾಗೂ ಬೆಂಗಳೂರು ನಗರ ಪೊಲೀಸರಿಗೆ ಟ್ಯಾಗ್ ಮಾಡಿ ಅಸಮಾಧಾನ ಹೊರ ಹಾಕಿದ್ದಾರೆ.
ಶೇಕಡಾ 70% ರಷ್ಟು ಹಿಂದಿ ಅವರು ಇದ್ದಾರಂತೆ ಅದುಕ್ಕೆ ಇವರು ಕನ್ನಡ ಮಾತನಾಡುವುದಿಲ್ಲವಂತೆ...#Varthur #pretigelakeside #apartment pic.twitter.com/xmndCCzmTW
— ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥 (@VKkarthik169) November 25, 2025
ಕನ್ನಡದಲ್ಲೇ ವ್ಯವಹರಿಸಬೇಕು: ಸಿಎಂ ಸಿದ್ದರಾಮಯ್ಯ
ಸದ್ಯ ನಾವು ನವೆಂಬರ್ ಆರಂಭದಲ್ಲಿ (ನ.1) 70ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಸಿಎಂ ಸಿದ್ದರಾಮಯ್ಯ ಅವರು, ಕನ್ನಡ ಮಣ್ಣಿನಲ್ಲೇ ಹುಟ್ಟಿ ಬೆಳೆದವರು, ಹೊರರಾಜ್ಯದಿಂದ ಬಂದು ಇಲ್ಲಿ ಬದುಕು ಕಟ್ಟಿಕೊಂಡವರು ಕನ್ನಡ ಭಾಷೆಯಲ್ಲೇ ವ್ಯವಹರಿಸಬೇಕು ಎಂಬುದು ನಮ್ಮ ಆಶಯ ಎಂದು ಹೇಳಿದ್ದರು.
ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಇರುವ ಎಲ್ಲಾ ಕಚೇರಿಗಳು, ಅಂಗಡಿ - ಮುಂಗಟ್ಟುಗಳು, ವಿವಿಧ ವಾಣಿಜ್ಯೋದ್ಯಮ ಸಂಸ್ಥೆಗಳ ನಾಮಫಲಕಗಳಲ್ಲಿ ಶೇಕಡಾ 60 ರಷ್ಟು ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು ಎಂಬ ಆದೇಶವನ್ನು ಹೊರಡಿಸಿದ್ದೇವೆ. ಬೇರೆ ಭಾಷೆಗಳನ್ನು ಗೌರವಿಸೋಣ. ನೆಲದ ಭಾಷೆ ಕನ್ನಡವನ್ನು ಪ್ರೀತಿಸೋಣ ಎಂದು ಕರೆ ನೀಡಿದರು.
-
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ












Click it and Unblock the Notifications