ಏ.9, 10 ರಂದು ಅರ್ಧ ಬೆಂಗಳೂರಲ್ಲಿ ನೀರು ಬರೋಲ್ಲ

ಬೆಂಗಳೂರು, ಏ. 2 : ಬೆಂಗಳೂರಿನಲ್ಲಿ ಏ.9 ಮತ್ತು 10 ರಂದು ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಕಾವೇರಿ 1, 2 ಹಾಗೂ 3ನೇ ಹಂತದ ಯೋಜನೆಗಳ ನಿರ್ವಹಣೆಗಾಗಿ ಜಲಮಂಡಳಿ ನೀರಿನ ಪೂರೈಕೆ ಸ್ಥಗಿತಗೊಳಿಸಲಿದೆ.

ಏ.9ರ ಗುರುವಾರ ಬೆಳಗ್ಗೆ 10 ರಿಂದ ರಾತ್ರಿ 10 ಮತ್ತು ಏ.10ರ ಶುಕ್ರವಾರ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯ ತನಕ ನೀರಿನ ಸರಬರಾಜು ಸ್ಥಗಿತಗೊಳ್ಳಲಿದೆ. ಜಲಮಂಡಳಿ ಕಾವೇರಿ ವಿಭಾಗದಿಂದ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಆದ್ದರಿಂದ, ನೀರಿನ ಸರಬರಾಜಿಗೆ ಅಡಚಣೆ ಉಂಟಾಗಲಿದೆ. [ಬೆಂಗಳೂರು ಬಿಟ್ಟು ಬೇರೆ ಜಿಲ್ಲೆಯವರು ಈ ಸುದ್ದಿ ಓದಿ]

Water

ಯಾವ ಬಡಾವಣೆಯಲ್ಲಿ ನೀರಿಲ್ಲ : ಕುಮಾರಸ್ವಾಮಿ ಲೇಔಟ್‌, ಬನಶಂಕರಿ 1, 2ನೇ ಹಂತ, ಬಸವನಗುಡಿ, ಚಾಮರಾಜಪೇಟೆ, ಕತ್ರಿಗುಪ್ಪೆ, ಮೌಂಟ್‌ಜಾಯ್‌ ಪ್ರದೇಶ, ಜಯನಗರ, ಡೈರಿ ವೃತ್ತ, ಕೋರಮಂಗಲ, ಆಡುಗೋಡಿ, ಜಗಜೀವನ್ ರಾಮ್‌ ನಗರ, ಮೈಸೂರು ರಸ್ತೆ, ಮಡಿವಾಳ, ಮಾರುತಿನಗರ, ಜಾನ್ಸನ್‌ ಮಾರುಕಟ್ಟೆ, ಶಾಂತಿನಗರ, ಆನೆಪಾಳ್ಯ, ಅಲಸೂರು, ಕೇಂಬ್ರಿಜ್‌ ಲೇಔಟ್‌. [ನೀರಿನ ಬೆಲೆ ಏರಿದೆ, ವಿವರಗಳು ಇಲ್ಲಿದೆ]

ಈ ಪ್ರದೇಶಗಳಲ್ಲಿ ನೀರು ಪೂರೈಕೆ ವ್ಯತ್ಯಯ : ದೊಮ್ಮಲೂರು, ಜೆ.ಪಿ. ನಗರ, ಯಡಿಯೂರು, ಕಸ್ತೂರ್ ಬಾ ನಗರ, ಕಲಾಸಿಪಾಳ್ಯ, ಪಾರ್ವತಿಪುರ, ಶಂಕರಪುರ, ಚಿಕ್ಕಲಾಲ್‌ಬಾಗ್‌, ಲಕ್ಕಸಂದ್ರ, ವಿಲ್ಸನ್‌ ಗಾರ್ಡನ್‌, ಬನ್ನಪ್ಪಪಾರ್ಕ್‌, ಗಾಂಧಿನಗರ, ಕಾಟನ್‌ಪೇಟೆ, ಮಾಧವನಗರ, ಶಿವಾಜಿ ನಗರದ ಹಲವು ಪ್ರದೇಶಗಳು.

ಫ್ರೇಜರ್‌ ಟೌನ್‌, ಪಿಳ್ಳಣ್ಣ ಗಾರ್ಡನ್‌, ಜೀವನಹಳ್ಳಿ, ಕುಮಾರ ಪಾರ್ಕ್‌ ವೆಸ್ಟ್‌, ವಸಂತನಗರ, ಸದಾಶಿವ ನಗರ, ವೈಯಾಲಿಕಾವಲ್‌, ಪ್ಯಾಲೇಸ್‌ ಗುಟ್ಟಹಳ್ಳಿ, ಶೇಷಾದ್ರಿಪುರಂ, ಜಯಮಹಲ್‌, ನಂದಿದುರ್ಗ ರಸ್ತೆ, ಮುನಿರೆಡ್ಡಿಪಾಳ್ಯ, ಗಂಗೇನಹಳ್ಳಿ, ಕಾವಲ್‌ ಭೈರಸಂದ್ರ, ಚೋಳನಾಯ್ಕನಹಳ್ಳಿ, ಮನೋರಾಯನಪಾಳ್ಯ, ಎಲ್‌ಆರ್‌ಬಂಡೆ.

ಮಂಜುನಾಥ ಬಡಾವಣೆ, ಎಚ್‌ಎಂಟಿ ಬಡಾವಣೆ, ಎಂಎಲ್‌ಎ ಬಡಾವಣೆ, ಸಂಜಯನಗರದ ಕೆಲ ಪ್ರದೇಶ, ಮಲ್ಲೇಶ್ವರಂ, ಶ್ರೀರಾಮಪುರ, ಗಾಯತ್ರಿನಗರ, ಯಶವಂತಪುರ ಸೇವಾಠಾಣೆ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+