ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೂತನ ಖಾಸಗಿ ಸ್ಟೇಜ್ ಕ್ಯಾರೇಜ್ ಬಸ್‌ಗೆ ಅನುಮತಿ ಇಲ್ಲ

|
Google Oneindia Kannada News

ಬೆಂಗಳೂರು, ಮಾರ್ಚ್ 28: ಸಾರಿಗೆ ಇಲಾಖೆಯು ರಾಜ್ಯಾದ್ಯಂತ ಹೊಸ ಖಾಸಗಿ ಸ್ಟೇಜ್ ಕ್ಯಾರೇಜ್ ಬಸ್ ಗಳ ಸಂಚಾರಕ್ಕೆ ಕಡಿವಾಣ ಹಾಕಲು ಮುಂದಾಗಿದೆ.

ಈ ಕುರಿತು ಸಮಗ್ರ ಪ್ರದೇಶ ಯೋಜನೆ ಕರಡು ರಚಿಸಿರುವ ಇಲಾಖೆ, 2014 ಪೂರ್ವ ರಹದಾರಿ ಪಡೆದ ಸ್ಟೇಜ್ ಕ್ಯಾರೇಜ್ ಹೊರತುಪಡಿಸಿ ಹೊಸ ಪರ್ಮಿಟ್ ನೀಡದಿರಲು ನಿರ್ಧರಿಸಿದೆ.

ಕರಡು ಅಧಿಸೂಚನೆ ಆಕ್ಷೇಪಣೆ ಸಲ್ಲಿಸಲು 30ದಿನಗಳ ಕಾಲಾವಕಾಶ ನೀಡಲಾಗಿದೆ. ಅಂತಿಮ ಅಧಿಸೂಚನೆ ಹೊರಬಂದರೆ ಸ್ಟೇಜ್ ಕ್ಯಾರೇಜ್ ಬಸ್ ಅರಂಭಿಸಲು ಖಾಸಗಿಯವರಿಗೆ ಹೊಸ ಪರ್ಮಿಟ್ ನೀಡಲಾಗುವುದಿಲ್ಲ. ಬದಲಾಗಿ ಕೆಎಸ್ಆರ್ಟಿಸಿ, ಬಿಎಂಟಿಸಿ, ಈಶಾನ್ಯ ಮತ್ತು ವಾಯುವ್ಯ ರಸ್ತೆ ಸಾರಿಗೆ ನಿಗಮಗಳಿಗೆ ಮಾತ್ರ ಕಾರ್ಯಾಚರಣೆ ನಡೆಸಲು ರಹದಾರಿ ಸಿಗಲಿದೆ.

No stage carriage permission for private buses now onwards

2016 ಡಿಸೆಂಬರ್ ನಲ್ಲಿ ಕಾಂಪ್ರಹೆನ್ಸಿಲ್ ಏರಿಯಾ ಸ್ಕೀಮ್ ನ ಮೊದಲ ಕರಡನ್ನು ಇಲಾಖೆ ಹೊರಡಿಸಿತ್ತು. ಇದರ ವಿರುದ್ಧ ಖಾಸಗಿ ಬಸ್ ಮಾಲೀಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಸಂದರ್ಭದಲ್ಲಿ ಹೊಸ ಕರಡು ಪ್ರಕಟಿಸಿ ಸಲ್ಲಿಸುವುದಾಗಿ ಭರವಸೆ ನೀಡಿತ್ತು. ಅದರಂತೆ ಹೊಸ ಕರಡು ಇದ್ಧಪಡಿಸಿ ಆಕ್ಷೇಪಣೆಗಳನ್ನು ಇಲಾಖೆ ಆಹ್ವಾನಿಸಿದೆ.

ರಾಜ್ಯದಲ್ಲಿ ಸಮರ್ಥ, ಸಮರ್ಪಕ ಮತ್ತು ಕೈಗೆಟುಕುವ ದರದ ಪ್ಯಾಸೆಂಜರ್ ಸಾರಿಗೆ ಸೇವೆ ನೀಡಲು ಸಾರ್ವಜನಿಕ ದೃಷ್ಟಿಯಿಂದ ರಾಜ್ಯಾದ್ಯಂತ ರಸ್ತೆ ಸಾರಿಗೆ ನಿಗಮಗಳ ಬಸ್ ಕಾರ್ಯಾಚರಣೆ ನಡೆಸುವುದು ಅಗತ್ಯ. ಈ ಹಿನ್ನೆಲೆಯಲ್ಲಿ ಮೋಟಾರು ವಾಹನ ಕಾಯ್ದೆ 1988ರ ಕಲಂ 99 ಮತ್ತು 100ರಡಿ ನೀಡಿರುವ ಅಧಿಕಾರ ಬಳಸಿಕೊಂಡು ಕರ್ನಾಟಕ ರಾಜ್ಯಕ್ಕೆ ಕಾಂಪ್ರಹೆನ್ಸಿವ್ ಎರಿಯಾ ಸ್ಕೀಮ್ ರಚಿಸಲಾಗಿದೆ ಎಂದು ಕರಡು ಅಧಿಸೂಚನೆಯಲ್ಲಿ ಇಲಾಖೆ ಉಲ್ಲೇಖಿಸಿದೆ.

English summary
Department of transport has decided to not to be given new stage carriage permit for private buses around 42,000buses have been given permit upto 2014. The department has prepared a comprehensive area scheme(CAS) to identify the existing permits in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X