ಹೋಟೆಲ್, ಬಾರ್‌ನಲ್ಲಿ ಧಮ್ ಹೊಡೆಯಂಗಿಲ್ಲ: ಸ್ಮೋಕ್ ಝೋನ್ ಕಡ್ಡಾಯ

Recommended Video

      ಬಾರ್, ಹೋಟೆಲ್ ಗಳಲ್ಲಿ ಧೂಮಪಾನ ನಿಷೇಧ | ಸ್ಮೋಕಿಂಗ್ ಝೋನ್ ನಿರ್ಮಿಸುವುದು ಕಡ್ಡಾಯ | Oneindia Kannada

      ಬೆಂಗಳೂರು, ಆಗಸ್ಟ್ 30: ನಗರದಲ್ಲಿರುವ ಹೋಟೆಲ್, ಬಾರ್, ರೆಸ್ಟೋರೆಂಟ್, ಕ್ಲಬ್ ಗಳಲ್ಲಿ ಇನ್ನುಮುಂದೆ ಸ್ಮೋಕಿಂಗ್ ಝೋನ್ ನಿರ್ಮಿಸುವುದು ಕಡ್ಡಾಯವಾಗಲಿದೆ.

      ಒಂದೊಮ್ಮೆ ಸ್ಮೋಕಿಂಗ್ ಝೋನ್ ಹೊರತುಪಡಿಸಿ ಬೇರೆಡೆ ಧೂಮಪಾನ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಬಿಬಿಎಂಪಿ ಖಡಕ್ ಆದೇಶ ನೀಡಿದೆ.

      ಧೂಮಪಾನ ವಲಯದಲ್ಲಿ ಯಾವುದೇ ರೀತಿಯ ತಿಂಡಿ, ಊಟ, ಮದ್ಯ, ಸಿಗರೇಟು , ನೀಡು, ಟೀ, ಕಾಫಿ ಇತ್ಯಾದಿಗಳನ್ನು ಸತರಬರಾಜು ಮಾಡಬಾರದು, ಕೋಪ್ಟಾ ಕಾಯಿದೆ ಅನ್ವಯ 30ಕ್ಕೂ ಹೆಚ್ಚು ಆಸನಗಳಿರುವ ಬಾರ್ ಅಂಡ್ ರೆಸ್ಟೋರೆಂಟ್, ಹೋಟೆಲ್, ಪಬ್, ಬಾರ್ಕ್ಲಬ್ ಗಳಲ್ಲಿ ಧೂಮಪಾನ ವಲಯವನ್ನು ಸ್ಥಾಪಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

      No smoking in bar and restaurant and mandating smoking zone

      ಅಪ್ರಾಪ್ತರು ಮತ್ತು ಧೂಮಪಾನ ಮಾಡದ ಸಾರ್ವಜನಿಕರಿಗೆ ಧೂಮಪಾನ ವಲಯಕ್ಕೆ ಪ್ರವೇಶ ನೀಡಬಾರದು. ಅಲ್ಲಿ ಕುರ್ಚಿ, ಬೆಂಕಿಪೊಟ್ಟಣ, ಆಶ್ ಟ್ರೇ ಇತ್ಯಾದಿ ಧೂಮಪಾನ ಪ್ರಚೋದನಕಾರಿ ವಸ್ತುಗಳನ್ನು ಗ್ರಾಹಕರಿಗೆ ಒದಗಿಸಬಾರದು. ಈ ನಿಯಮಗಳನ್ನು ಉಲ್ಲಂಘಿಸಿದರೆ ಪರವಾನಗಿ ರದ್ದುಮಾಡಲಾಗುವುದು ಎಂದು ತಿಳಿಸಿದೆ.

      ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿದರೆ ಆಗಬಹುದಾದ ಬೆಂಕಿ ಅವಗಢದಿಂದ ಸಾರ್ವಜನಿಕರನ್ನು ರಕ್ಷಿಸಬಹುದು ಎಂದು ಕರ್ನಾಟಕ ಅಗ್ನಿ ಶಾಮಕ ಹಾಗೂ ತುರ್ತು ಸೇವೆಗಳು ಕೂಡ ತಿಳಿಸಿವೆ.
      ಧೂಮಪಾನ ಪ್ರದೇಶಗಳಲ್ಲಿ ಅನುಸರಿಸಬೇಕಾದ ನಿಯಮಗಳೇನು?

      1) ಅಪ್ರಾಪ್ತರು ಹಾಗೂ ಧೂಮಪಾನ ಮಾಡದಿರುವವರಿಗೆ ಧೂಮಪಾನ ಪ್ರದೇಶದೊಳಗೆ ಅವಕಾಶ ನೀಡಬಾರದು

      2) ಧೂಮಪಾನ ವಲಯದಲ್ಲಿ ತಿಂಡಿ, ಊಟ, ಮದ್ಯ, ನೀರು, ಟೀ, ಕಾಫಿ ಸರಬರಾಜು ಮಾಡಬಾರದು

      3) ಕುರ್ಚಿ, ಟೇಬಲ್, ಬೆಂಕಿಪೊಟ್ಟಣ, ಆಶ್ ಟ್ರೇ ಒದಗಿಸುವಂತಿಲ್ಲ

      4) ಧೂಮಪಾನ ಪ್ರದೇಶ ಹೊಂದಲು ಪಾಲಿಕೆ ತಂಬಾಕು ನಿಯಂತ್ರಣ ಕೋಶದಿಂದ ಅನುಮತಿ ಕಡ್ಡಾಯವಾಗಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+