ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ನು ಕೋವಿಡ್ ಸೋಂಕಿತರ ಮನೆ ಸೀಲ್ ಡೌನ್ ಇಲ್ಲ?

|
Google Oneindia Kannada News

ಬೆಂಗಳೂರು, ಆಗಸ್ಟ್ 10: ಬೆಂಗಳೂರು ನಗರದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 74,185ಕ್ಕೆ ಏರಿಕೆಯಾಗಿದೆ.

Recommended Video

BSY Discharged : ಒಂದೇ ವಾರದಲ್ಲಿ ಆಸ್ಪತ್ರೆಯಿಂದ ಹೊರಬಂದ ಯಡಿಯೂರಪ್ಪ | Oneindia Kannada

ಯಾವುದೇ ಮನೆಯಲ್ಲಿ ಒಬ್ಬ ವ್ಯಕ್ತಿಗೆ ಕೋವಿಡ್ ಸೋಂಕು ಕಂಡು ಬಂದರೆ ಮನೆಯನ್ನು ಸೀಲ್ ಡೌನ್ ಮಾಡಲಾಗುತ್ತಿದೆ. ಆದರೆ ಬಿಬಿಎಂಪಿ ಇನ್ನು ಮುಂದೆ ಸೋಂಕಿತರ ಮನೆಯನ್ನು ಸೀಲ್ ಡೌನ್ ಮಾಡದಿರಲು ತೀರ್ಮಾನಿಸಿದೆ.

ಬೆಂಗಳೂರಿಗರಿಗೆ ಕೊಟ್ಟ ಮಾತು ಉಳಿಸಿಕೊಂಡ ಯಡಿಯೂರಪ್ಪ ಬೆಂಗಳೂರಿಗರಿಗೆ ಕೊಟ್ಟ ಮಾತು ಉಳಿಸಿಕೊಂಡ ಯಡಿಯೂರಪ್ಪ

ಸೋಂಕಿತ ವ್ಯಕ್ತಿಯ ಮನೆಯವರು ಹೊರಗೆ ಬಾರದಂತೆ ಕಬ್ಬಿಣದ ಗ್ರಿಲ್, ಶೀಟ್‌ಗಳನ್ನು ಹಾಕಿ ಮನೆಯನ್ನು ಸೀಲ್ ಡೌನ್ ಮಾಡಲಾಗುತ್ತಿದೆ. ಮನೆಯ ಮುಂದೆ ಕೋವಿಡ್ ಸೋಂಕಿತರು ಇರುವ ಮನೆ ಎಂದು ಬ್ಯಾನರ್ ಹಾಕಲಾಗುತ್ತಿದೆ.

ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸ ಸೀಲ್ ಡೌನ್‌ ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸ ಸೀಲ್ ಡೌನ್‌

No Seal Down For COVID 19 Patient House

ಆದರೆ ಈಗ ಜನರಿಗೆ ಕೋವಿಡ್ ಸೋಂಕಿನ ಬಗ್ಗೆ ಜಾಗೃತಿ ಬಂದಿದೆ. ಅಲ್ಲದೇ ಮನೆಯ ಮುಂದೆ ಶೀಟ್‌ಗಳನ್ನು ಹಾಕಿ ಸೀಲ್ ಡೌನ್ ಮಾಡುವುದು ಜನರಿಗೆ ಮುಜುಗರ ಉಂಟು ಮಾಡುತ್ತಿದೆ. ಸೀಲ್ ಡೌನ್ ಮಾಡುವ ಪದ್ಧತಿ ಕೈ ಬಿಡಿ ಎಂದು ಬಿಬಿಎಂಪಿಗೆ ಮನವಿಗಳು ಬಂದಿವೆ.

ಬೆಂಗಳೂರಿನ ವಾಣಿಜ್ಯ ಮಳಿಗೆಗಳಿಗೆ ಬಿಬಿಎಂಪಿ ಮಾರ್ಗಸೂಚಿ ಬೆಂಗಳೂರಿನ ವಾಣಿಜ್ಯ ಮಳಿಗೆಗಳಿಗೆ ಬಿಬಿಎಂಪಿ ಮಾರ್ಗಸೂಚಿ

ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಈ ಕುರಿತು ಮಾತನಾಡಿದ್ದು, "ಮನೆಗಳನ್ನು ಸೀಲ್ ಡೌನ್ ಮಾಡುವ ಬಗ್ಗೆ ಹಲವಾರು ದೂರುಗಳು ಬಂದಿವೆ. ಇದು ಸರಿಯಲ್ಲ ಎಂದು ಜನರು ಹೇಳುತ್ತಿದ್ದಾರೆ" ಎಂದು ತಿಳಿಸಿದ್ದಾರೆ.

"ಜನರು ಮಾಡಿದ ಮನವಿಯನ್ನು ನಾವು ರಾಜ್ಯ ಸರ್ಕಾರದ ಮುಂದೆ ಇಡುತ್ತೇವೆ. ಸರ್ಕಾರ ಕೈಗೊಳ್ಳುವ ತೀರ್ಮಾನದಂತೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ" ಎಂದು ಆಯುಕ್ತರು ಹೇಳಿದ್ದಾರೆ.

ಬಿಬಿಎಂಪಿ ಕೋವಿಡ್ ಸೋಂಕಿತರು ಇರುವ ಮನೆಯನ್ನು ತಡಗಿನಿಂದ ಸಂಪೂರ್ಣವಾಗಿ ಬಂದ್ ಮಾಡಿದ್ದ ಪ್ರಕರಣದ ಬಗ್ಗೆ ಕೆಲವು ದಿನಗಳ ಹಿಂದೆ ಭಾರಿ ಚರ್ಚೆ ನಡೆದಿತ್ತು. ಬಳಿಕ ಶೀಟ್‌ಗಳನ್ನು ತೆಗೆದುಹಾಕಲಾಗಿತ್ತು.

English summary
Bruhat Bengaluru Mahanagara Palike (BBMP) will not seal down COVID 19 patient house. BBMP yet to get nod for this from Karnataka government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X