• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಲ್ಲಿ ಏಕಾಏಕಿ ಕಂದಾಯ ಸೈಟ್ ನೋಂದಣಿ ಸ್ಥಗಿತ

|

ಬೆಂಗಳೂರು, ಫೆಬ್ರವರಿ 4: ಇಡೀ ರಾಜ್ಯಾದ್ಯಂತ ಕಂದಾಯ ಸೈಟ್ ನೋಂದಣಿ ಏಕಾಏಕಿ ಸ್ಥಗಿತಗೊಳಿಸಳಾಗಿದೆ.

ಕಂದಾಯ ನಿವೇಶನ,ಇ-ಸ್ವತ್ತು ಖಾತಾ ಹೊಂದಿರದ ಪಂಚಾಯ್ತಿ ನಿವೇಶನ ಹಾಗೂ ಬಿಬಿಎಂಪಿ ಬಿ ಖಾತಾ ಹೊಂದಿರುವ ನಿವೇಶನಗಳ ಸಕ್ರಮಕ್ಕೆ ಸರ್ಕಾರ ಪರಿಹಾರ ಕಂಡುಕೊಳ್ಳದ ಕಾರಣ ನೋಂದಣಿ ಸ್ಥಗಿತಗೊಂಡಿದೆ.

ಬೆಂಗಳೂರಿನಲ್ಲಿ ಉದ್ದಿಮೆ ಆರಂಭಿಸುವುದು ಮೊದಲಿಗಿಂತ ಬಲು ಸುಲಭ

ಹೀಗಿದ್ದರೂ ಏಕಾಏಕಿ 2013ಕ್ಕಿಂತ ಮೊದಲು ಇ-ಸ್ವತ್ತು ಖಾತಾ ಪಡೆಯದ ಕಂದಾಯ, ಪಂಚಾಯ್ತಿ ಹಾಗೂ ಬಿಬಿಎಂಪಿ ಬಿ-ಖಾತಾ ನಿವೇಶನಗಳ ನೋಂದಣಿ ನಿಲ್ಲಿಸಲಾಗಿದೆ.

 ಕರ್ನಾಟಕದಲ್ಲಿ ಶೇ.80ರಷ್ಟು ಇ-ಸ್ವತ್ತು ಹೊಂದಿರದ ನಿವೇಶನಗಳು

ಕರ್ನಾಟಕದಲ್ಲಿ ಶೇ.80ರಷ್ಟು ಇ-ಸ್ವತ್ತು ಹೊಂದಿರದ ನಿವೇಶನಗಳು

ರಾಜ್ಯಾದ್ಯಂತ ಶೇ.60-80ರಷ್ಟು ಇ-ಸ್ವತ್ತು ಹೊಂದಿರದ ಪಂಚಾಯ್ತಿ ನಿವೇಶನಗಳಿವೆ. ಇದೀಗ ಏಕಾಏಕಿ ನೋಂದಣಿ ಸ್ಥಗಿತಗೊಳಿಸಿರುವುದರಿಂದ ಆರ್ಥಿಕ ಸಂಕಷ್ಟದಿಂದಾಗಿ ನಿವೇಶನ ಮಾರಾಟಕ್ಕೆ ಮುಂದಾಗಿರುವವರು ಕಷ್ಟಕ್ಕೆ ಸಿಲುಕಲಿದ್ದಾರೆ.

 ಬಿ-ಖಾತಾ ಪಡೆದವರು ಬಿಬಿಎಂಪಿ ನಿವೇಶನ ನೋಂದಣಿಗೆ ಯತ್ನಿಸಬಹುದು

ಬಿ-ಖಾತಾ ಪಡೆದವರು ಬಿಬಿಎಂಪಿ ನಿವೇಶನ ನೋಂದಣಿಗೆ ಯತ್ನಿಸಬಹುದು

ಬಿಬಿಎಂಪಿ ಹೊರ ವಲಯದಲ್ಲಿ ಕೆಲವರು ನಿಯಮ ಉಲ್ಲಂಘನೆ ಮಾಡಿ 2013ರ ಬಳಿಕ ಬಿ-ಖಾತಾ ಪಡೆದಿರುವ ಬಿಬಿಎಂಪಿ ನಿವೇಶನ ನೋಂದಣಿ ಮಾಡಲು ಯತ್ನಿಸಬಹುದು. ಹೀಗಾಗಿ ಕಾವೇರಿ ತಂತ್ರಾಂಶದ ಮೇಲೆ ಕಣ್ಗಾವಲು ಇರಿಸಲಾಗುತ್ತಿದೆ.

 2013ಕ್ಕಿಂತ ಮೊದಲು ಇ-ಖಾತಾ ಹೊಂದಿರುವವರಿಗೆ ತೊಂದರೆ ಇಲ್ಲ

2013ಕ್ಕಿಂತ ಮೊದಲು ಇ-ಖಾತಾ ಹೊಂದಿರುವವರಿಗೆ ತೊಂದರೆ ಇಲ್ಲ

ಪಂಚಾಯ್ತಿ ವ್ಯಾಪ್ತಿಗಳಲ್ಲಿ ಹಸಿರು ವಲಯ ಹೊರತುಪಡಿಸಿ ಉಳಿದ ಕಡೆ ಕಂದಾಯ ನಿವೇಶನ ಹಾಗೂ ಕಟ್ಟಡಗಳಿಗೆ 2013ಕ್ಕಿಂತಲೂ ಮೊದಲು ಇ-ಖಾತಾ ಪಡೆದಿರುವವರಿಗೆ ನೋಂದಣಿ ಸಮಸ್ಯೆ ಇಲ್ಲ. ಅಂದರೆ 2013ರ ಜೂನ್‌ಗೆ ಮೊದಲು ಒಂದಕ್ಕಿಂತ ಹೆಚ್ಚು ಬಾರಿ ಮಾರಾಟವಾಗಿರುವ ಹಾಗೂ 2013ರ ಜೂನ್ ಒಳಗೆ ಕಟ್ಟಡ ನಿರ್ಮಾಣವಾಗಿರುವ ಆಡು ತಿಂಗಳು ಮೊದಲು ಯಾವುದಾದರೂ ವಿದ್ಯುಚ್ಛಕ್ತಿ ಬಿಲ್ ಒದಗಿಸಿದರೆ ನಮೂನೆ -11 ಬಿ ಇದ್ದರೆ ಪಂಚಾಯ್ತಿ ಇ-ಸ್ವತ್ತು ಖಾತಾ ದೊರೆಯಲಿದೆ.

 ಬಿಬಿಎಂಪಿ ವ್ಯಾಪ್ತಿಯ ಸೈಟುಗಳ ನೋಂದಣಿ

ಬಿಬಿಎಂಪಿ ವ್ಯಾಪ್ತಿಯ ಸೈಟುಗಳ ನೋಂದಣಿ

ಬಿಬಿಎಂಪಿ ವ್ಯಾಪ್ತಿಯ ನಿವೇಶನ ನೋಂದಣಿ ಮಾಡಲು ಸಕ್ಷಮ ಪ್ರಾಧಿಕಾರಗಳಿಂದ ನೀಡುವ ಎ ಖಾತಾ ಹಾಗೂ ತೆರಿಗೆ ನಿರ್ಧರಣೆ ರಿಜಿಸ್ಟರ್ ಹೊಂದಿರಬೇಕು. ಅಥವಾ 2013ರ ಡಿ.31 ಕ್ಕಿಂತ ಹಿಂದೆ ಸೃಜಿಸಿರುವ ಬಿ-ಖಾತಾ ಹಾಗೂ 2013ರ ಡಿಸೆಂಬರ್ 31ಕ್ಕಿಂತ ಹಿಂದಿನ ಅವಧಿಯಲ್ಲಿ ಒಂದು ಅಥವಾ ಹೆಚ್ಚಿನ ಬಾರಿ ಆಸ್ತಿ ಮಾರಾಟವಾಗಿರಬೇಕು.

English summary
In a move that would spell trouble for thousands of revenue site owners, the government has stopped registering sites with no khata.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X