ಬೆಂಗಳೂರು; ವಿವಿಧ ಬಡಾವಣೆಗಳಲ್ಲಿ ಜು.30, 31ರಂದು ಪವರ್ ಕಟ್
ಬೆಂಗಳೂರು, ಜುಲೈ 30; ಬೆಂಗಳೂರು ನಗರದ ವಿವಿಧ ಪ್ರದೇಶದಲ್ಲಿ ಜುಲೈ 30 ಮತ್ತು 31ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ನಿರ್ವಹಣಾ ಕಾರ್ಯ ಇರುವುದರಿಂದ ಜನರು ಸಹಕರಿಸಬೇಕು ಎಂದು ಬೆಸ್ಕಾಂ ಮನವಿ ಮಾಡಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಈ ಕುರಿತು ಪ್ರಕಟಣೆ ಹೊರಡಿಸಿದೆ. ಶುಕ್ರವಾರ ಮತ್ತು ಶನಿವಾರ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯ ತನಕ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಜುಲೈ 30ರ ಶುಕ್ರವಾರ; ಎಲೆಕ್ಟ್ರಾನಿಕ್ ಸಿಟಿ ಒಂದನೇ ಹಂತ, ದೊಡ್ಡತೋಗೂರು, ಬೊಮ್ಮನಹಳ್ಳಿ, ಎನ್. ಜೆ. ಆರ್. ಬಡಾವಣೆ, ಚಿಕ್ಕತೋಗೂರು, ಹೊಂಗಸಂದ್ರ, ಕೋನಪ್ಪನ ಅಗ್ರಹಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ಜುಲೈ 31ರ ಶನಿವಾರ; ಎಲೆಕ್ಟ್ರಾನಿಕ್ ಸಿಟಿ 2ನೇ ಹಂತ, ವೀರಸಂದ್ರ, ದೊಡ್ಡನಾಗಮಂಗಲ, ಅನಂತನಗರ, ಶಾಂತಿಪುರ, ಬಯೋಕಾನ್, ಟೆಕ್ ಮಹೀಂದ್ರ, ಚೊಕ್ಕಸಂದ್ರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ನಿರ್ವಹಣಾ ಕಾರ್ಯ ಕೈಗೊಳ್ಳುತ್ತಿರುವುದರಿಂದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಜನರು ಬೆಸ್ಕಾಂ ಟ್ವಿಟರ್, ಫೇಸ್ ಬುಕ್ ಖಾತೆಯನ್ನು ನೋಡಬಹುದಾಗಿದೆ. ವಿದ್ಯುತ್ ವ್ಯತ್ಯಯದ ಬಗ್ಗೆ ಅಲ್ಲಿ ಅಪ್ ಡೇಟ್ ಮಾಡಲಾಗುತ್ತದೆ.












Click it and Unblock the Notifications