Get Updates
Get notified of breaking news, exclusive insights, and must-see stories!

Terror Attack: ಬಿಜೆಪಿ ವೈಫಲ್ಯತೆ ಅಂದಿಲ್ಲ, ರಾಜಕೀಯ ಬಿಟ್ಟು ನಾವೆಲ್ಲರು ಒಂದಾಗಬೇಕು: ಜಿ.ಪರಮೇಶ್ವರ

ಬೆಂಗಳೂರು, ಏಪ್ರಿಲ್ 23: ಜಮ್ಮು ಮತ್ತು ಕಾಶ್ಮೀರ ಕಣಿವೆಯಲ್ಲಿ ನಡೆದ ಭಯೋತ್ಪಾದಕರ ದಾಳಿಯನ್ನು ಖಂಡನೀಯ. ಬಹಳ ಪರಿಣಾಮಕಾರಿಯಾದ ಶಕ್ತಿಯುತವಾದ ಮಿಲಿಟರಿ ಇಂಟಲಿಜೆನ್ಸ್ ದೇಶದಲ್ಲಿದೆ ಎಂದು ಭಾವಿಸಿದ್ದೇವೆ. ಅನೇಕ ಸಂದರ್ಭದಲ್ಲಿ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ‌. ಯಾಕೆ ಇಂಟಲಿಜೆನ್ಸ್ ಫೇಲ್ಯೂವರ್ ಆಗಿದೆ?. ಉಗಗ್ರಾಮಿಗಳು ಎಲ್ಲಿಂದ, ಹೇಗೆ ಬಂದರು? ಎಂಬುದು ಅತಿದೊಡ್ಡ ಪ್ರಶ್ನೆಯಾಗಿದೆ ಎಂದು ಡಾ.ಜಿ.ಪರಮೇಶ್ವರ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಇದೊಂದು ಕೃತ್ಯ ಹೇಯವಾಗಿದ್ದು, ಪ್ರಾಣ ಕಳೆದುಕೊಂಡಿರುವ 27 ಜನರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಕುಟುಂಬ ವರ್ಗದವರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಹಿಂದೂಗಳನ್ನೇ ಹುಡುಕಿ ಹತ್ಯೆ ಮಾಡಲಾಗಿದೆ. ಕರ್ನಾಟಕದ ಇಬ್ಬರು ಮೃತಪಟ್ಟಿದ್ದು, ಅವರು ಕುಟುಂಬಕ್ಕೆ ನನ್ನ ಸಂತಾಪವಿದೆ ಎಂದು ಹೇಳಿದರು.

No Politics Over Pahalgam Terror Attack We All Stay United G Parameshwara

ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಪುಲ್ವಾಮಾ ದಾಳಿ ನಂತರ ಈವರೆಗೆ ಇಂತಹ ಘಟನೆಗಳು ನಡೆದಿರಲಿಲ್ಲ. ಅಲ್ಲೊಂದು, ಇಲ್ಲೊಂದು ಸಣ್ಣಪುಟ್ಟ ಘಟನೆಗಳಾಗುತ್ತಿದ್ದವು. ಒಬ್ಬರು-ಇಬ್ಬರು ನಮ್ಮ ಸೈನಿಕರು ಹುತಾತ್ಮರಾಗುತ್ತಿದ್ದರು. ಆದರೆ, ಇಂತಹ ದೊಡ್ಡ ಘಟನೆ ನಡೆದಿರಲಿಲ್ಲ.

ಮುಲ್ಲಾಜಿಲ್ಲದೇ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಿ..

ಹಿಂದುಗಳನ್ನು ಗುರಿ ಮಾಡಿಕೊಂಡು ನೀನು ಹಿಂದು ಅದಕ್ಕಾಗಿ ಕೊಲ್ಲುತ್ತಿದ್ದೇವೆ ಎಂದು ಹೇಳಿಕೊಂಡಿರುವುದು ನಿಜಕ್ಕು ಆತಂಕಕಾರಿ ವಿಚಾರ. ಇದು ಹೊಸದು ಅಲ್ಲ ಅನ್ನಿಸುತ್ತದೆ. ದಾಳಿ ಮಾಡುವಾಗ ಅನೇಕ ಸಂದರ್ಭದಲ್ಲಿ ಆ ಮಾತುಗಳನ್ನು ಹೇಳಿದ್ದಾರೆ. ಈ ದಾಳಿ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸೂಕ್ತವಾದ ಕ್ರಮವನ್ನು ಮುಲಾಜಿಲ್ಲದೆ ತೆಗೆದುಕೊಳ್ಳಬೇಕು.

ಈ ಘಟನೆ ಬೆನ್ನಲ್ಲೆ ಕೆಲವು ಉಗ್ರ ಸಂಘಟನೆಗಳು ತಾವೇ ಇದೆಲ್ಲ ಮಾಡಿರುವುದಾಗಿ ಹೇಳಿಕೊಂಡಿವೆ. ಆ ಸಂಘಟನೆ ಎಲ್ಲಿವೆ. ಅವರ ಮೇಲೆ ಕ್ರಮ ತೆಗೆದುಕೊಳ್ಳಲೇಬೇಕು. ಇಂಟಲಿಜೆನ್ಸ್ ಲ್ಯಾಪ್ಸ್ ಆದ ಮೇಲೆ ಸೆಕ್ಯೂರಿಟಿ ಲ್ಯಾಪ್ಸ್ ಆಗಲೇಬೇಕು. ಮಿಲಿಟರಿ ಇಂಟಲಿಜೆನ್ಸ್ ಕಣ್ತಪ್ಪಿಸಿ ಬಂದಿದ್ದಾರೆ. ಜನರನ್ನು ಕರೆದು, ಬಟ್ಟೆ ತೆಗೆಸಿ ಬಹಳ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಗಂಭೀರವಾದ ನಿರ್ಧಾರಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ವಿವರಿಸಿದರು.

No Politics Over Pahalgam Terror Attack We All Stay United G Parameshwara

ಸ್ಥಳೀಯರ ಸಹಕಾರ ಇದ್ದುಕೊಂಡೇ ಆಗಿರಲಿ ಅಥವಾ ಸ್ಥಳೀಯರ ಸಹಕಾರ ಇಲ್ಲದೆಯೂ ಆಗಿರಲಿ. ನಮ್ಮ ಫೋರ್ಸ್ ಒಳಗಡೆ ಯಾರಾದರು ಸಹಕಾರ ಮಾಡಿದವರು ಇದ್ದರು ಸಹ ಅದನ್ನೆಲ್ಲ ಪತ್ತೆಹಚ್ಚಿ, ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು. ದೇಶದ ಪ್ರಶ್ನೆಯಾಗಿರುವ ಕಾರಣ ಹೆಚ್ಚಿನ ರೀತಿಯಲ್ಲಿ ಕ್ರಮಕ್ಕೆ ಮುಂಗಾಗಬೇಕು ಎಂದು ಸಚಿವರು ಆಗ್ರಹಿಸಿದರು.

ಬಿಜೆಪಿ ಫೆಲ್ಯೂರ್ ಅಂದಿಲ್ಲ: ನಾವೆಲ್ಲ ಒಟ್ಟಾಗಿ ನಿಲ್ಲಬೇಕು

ಕಾಶ್ಮೀರದಲ್ಲಿ ಭದ್ರತೆ ಕಡಿಮೆಯಾಗಿತ್ತು. ಶಾಂತಿ ನೆಲೆಸಿದ್ದರಿಂದ ಸೆಕ್ಯೂರಿಟಿಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಿತ್ತು ಎಂಬುದರ ಬಗ್ಗೆ ನಮಗೆ ನಿರ್ಧಿಷ್ಟವಾದ ಮಾಹಿತಿಗಳು ಗೊತ್ತಿಲ್ಲ. ಊಹಾಪೋಹಗಳ ಮಾತನಾಡಲು ಆಗುವುದಿಲ್ಲ. ಸೆಕ್ಯೂರಿಟಿ ದೃಷ್ಟಿಯಲ್ಲಿ ಸರ್ಕಾರ ವಿಫಲವಾಗಿದೆ. ಆದ್ದರಿದ ಕಾಶ್ಮೀರದಲ್ಲಿ ಸೂಕ್ತ ಭದ್ರತಾ ಕ್ರಮ ಕೈಗೊಳ್ಳಬೇಕು ಎಂದರು.

Take a Poll

ಕಾಂಗ್ರೆಸ್, ಬಿಜೆಪಿ ಎಂಬುದು ಇಲ್ಲಿ ಮುಖ್ಯವಲ್ಲ. ಇದು ದೇಶದ, ನಮ್ಮ ಸಮುದಾಯಗಳ ಪ್ರಶ್ನೆ. ಈ ವಿಚಾರದಲ್ಲಿ ನಾವು ಯಾಕೆ ರಾಜಕಾರಣ ಮಾಡಬೇಕು. ಪಕ್ಷಗಳ ಹೆಸರೇ ಹೇಳಬಾರದು. ನಾನು ಕೇಂದ್ರ ಸರ್ಕಾರ ಎಂದು ಹೇಳಿದ್ದೇನೆ. ಬಿಜೆಪಿ ಎಂದು ಹೇಳಿದ್ದೆನೆಯೇ? ಬಿಜೆಪಿ ಫೆಲ್ಯೂರ್ ಅಂತ ನನಗೆ ಹೇಳಲು ಆಗುವುದಿಲ್ಲವೇ? ಇಂತಹ ಸಂದರ್ಭದಲ್ಲಿ ನಾವು ಪಕ್ಷ, ಬೇದವನ್ನು ಮೀರಿ ಒಟ್ಟಾಗಿ ನಿಲ್ಲಬೇಕು ಎಂದು ಅವರು ತಿಳಿಸಿದರು.

ದುಡ್ಡು ಉಳಿಸಲು ಸೈನಿಕರ ವಾಪಾಸ್ ಆರೋಪ..

ಕೋವಿಡ್ ಸಂದರ್ಭದಲ್ಲಿ 1 ಲಕ್ಷ ಸೈನಿಕರನ್ನು ದುಡ್ಡು ಉಳಿಸಲು ವಾಪಸ್ ಕರೆಸಿಕೊಂಡರು ಎಂಬ ಆರೋಪಗಳ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು ಏನುಬೇಕಾದರು ಊಹಿಸಬಹುದು. ಅದು ಬರೀ ವ್ಯಾಖ್ಯಾನ ಅಷ್ಟೆ ಆಗುತ್ತವೆ. ಯಾಕಾಯ್ತು ಅಂತ ವಿಶ್ಲೇಷಣೆ ಮಾಡೋಣ. ಇಷ್ಟು ದಿನ ಶಾಂತಿ ನೆಲೆಸಿತ್ತು ಎಂಬ ಕಾರಣದಿಂದ ಎಲ್ಲವು ಸರಿಹೋಯ್ತು ಎಂದು ವಿಶ್ರಾಮ ಪಡೆದಿರಬಹುದು. ಇದೆಲ್ಲದ್ದಕ್ಕು ಮುಂದೆ ಬರಲಿರುವ ವರದಿಯಿಂದ ತಿಳಿದು ಬರಲಿದೆ.

ಇನ್ನೂ ಕರ್ನಾಟಕದಿಂದ ರಾಜ್ಯ ಸರ್ಕಾರದಿಂದ ಮಾನ್ಯ ಮುಖ್ಯಮಂತ್ರಿಯವರು ವಿಶೇಷ ತಂಡವನ್ನು ಕಾಶ್ಮೀರಕ್ಕೆ ಕಳಿಸಿದ್ದಾರೆ. ಸಚಿವರಾದ ಸಂತೋಷ್ ಲಾಡ್ ಅವರು ಸ್ಥಳಕ್ಕೆ ಹೋಗಿ ಮಾಹಿತಿ ತೆಗೆದುಕೊಂಡ ಮೇಲೆ ಕನ್ನಡಿಗರ ಮಾಹಿತಿ ಸಿಗುತ್ತದೆ.

ರಾಜ್ಯ ಸರ್ಕಾರವು ತನ್ನ ಅಭಿಪ್ರಾಯವನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಲಿದೆ ಎಂದು ಅವರು ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+