ಟಿಪ್ಪು ಸುಲ್ತಾನ್ ವಿವಿ ರಾಜ್ಯದಲ್ಲೆಲ್ಲೂ ಸ್ಥಾಪಿಸುವಂತಿಲ್ಲ
ಬೆಂಗಳೂರು, ಮೇ12: ಟಿಪ್ಪು ಸುಲ್ತಾನ್ ಹೆಸರಿನಲ್ಲಿ ರಾಜ್ಯದ ಯಾವ ಭಾಗದಲ್ಲೂ ವಿಶ್ವವಿದ್ಯಾಲಯ ಸ್ಥಾಪಿಸಬಾರದು ಎಂದು ಹಿರಿಯ ಸಂಶೋಧಕ ಡಾ. ಎಂ ಚಿದಾನಂದ ಮೂರ್ತಿ ಅವರು ಪುನಃ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಟಿಪ್ಪು ಹೆಸರಿನಲ್ಲಿ ಕೋಲಾರದಲ್ಲಿ ವಿವಿ ಸ್ಥಾಪಿಸುವುದಾಗಿ ಕೇಂದ್ರ ಸಚಿವ ರೆಹಮಾನ್ ಖಾನ್ ಹೇಳಿದ್ದಾರೆ. ಜತೆಗೆ ತಲಕಾಡು ಚಿಕ್ಕರಂಗೇ ಗೌಡ ಅವರು ಟಿಪ್ಪು ಉದಾರವಾದಿ ಎಂದು ಕರೆದಿದ್ದು ಆತನಿಂದಲೇ ಹಿಂದು ಧರ್ಮ ಉಳಿದಿದೆ. ಕೂಡಲೇ ಟಿಪ್ಪು ವಿಶ್ವವಿದ್ಯಾಲಯ ಸ್ಥಾಪಿಸಿ ಎಂದೂ ಒತ್ತಾಯಿಸಿದ್ದಾರೆ. ಆದರೆ ಇದು ಸಂಜಸವಲ್ಲ. ಹಾಗಾಗಿ ರಾಜ್ಯದಲ್ಲೆಲ್ಲೂ ಅವರ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸುವಂತಿಲ್ಲ ಎಂದು ಚಿಮೂ ಹೇಳಿದ್ದಾರೆ.
ಗಮನಾರ್ಹವೆಂದರೆ ಶ್ರೀರಂಗಪಟ್ಟಣದಲ್ಲಿ ಅಲ್ಪಸಂಖ್ಯಾತರ ಹೆಸರಿನಲ್ಲಿ ಟಿಪ್ಪು ವಿವಿ ಸ್ಥಾಪಿಸಬೇಕೆಂಬ ಪ್ರಸ್ತಾವನೆಗೆ ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿ ಅಧ್ಯಕ್ಷ ಪ್ರೊ. ಸುಖ್ ದೇವ್ ಥೋರಟ್ ನೇತೃತ್ವದ ತಜ್ಞರ ಸಮಿತಿ ರೆಡ್ ಸಿಗ್ನಲ್ ತೋರಿದೆ. ಸಂವಿಧಾನ ಮತ್ತು ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ಸಮಿತಿ ಈಗಾಗಲೇ ಸ್ಪಷ್ಟಪಡಿಸಿದೆ. (ಶ್ರೀರಂಗಪಟ್ಟಣದಲ್ಲಿ ಟಿಪ್ಪು ವಿವಿ ಸ್ಥಾಪನೆ ಕನಸು ಭಗ್ನ)

ಈ ಹಿನ್ನೆಲೆಯಲ್ಲಿ ಟಿಪ್ಪುವಿನ ನೈಜ ಧೋರಣೆಗಳನ್ನು ಮನದಟ್ಟು ಪಡಿಸಲು ಚಿಮೂ ಇಂದು ಸುದ್ದಿಗೋಷ್ಠಿ ನಡೆಸಿದರು. ಟಿಪ್ಪು ಸುಲ್ತಾನ್ ಮತಾಂಧನಾಗಿದ್ದು, ಆತ ಅತ್ಯಂತ ಕ್ರೂರ ಮತ್ತು ನಿರ್ದಯಿ. ಶ್ರೀರಂಗಪಟ್ಟಣದ ಕೋಟೆ ಬಾಗಿಲಿನ ಪ್ರದೇಶದಲ್ಲಿದ್ದ ಆಂಜನೇಯ ದೇವಾಲಯ ಹಾಳು ಮಾಡಿ ಮಸೀದಿ ಕಟ್ಟಿಸಲಾಗಿದೆ. ಅಲ್ಲಿದ್ದ ಆಂಜನೇಯ ಮೂರ್ತಿಯನ್ನು ಅದೇ ಗ್ರಾಮದ ಬೇರೊಂದು ದೇವಸ್ಥಾನಕ್ಕೆ ಸ್ಥಳಾಂತರಿಸಲಾಗಿದೆ. ಇಂತಹ ಹಲವಾರು ಉದಾಹರಣೆಗಳಿವೆ ಎಂದು ಅವರು ವಿವರಿಸಿದರು.
ಶಿಶುನಾಳ ಷರೀಫ್ ಅಥವಾ ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ವಿವಿ ಸ್ಥಾಪಿಸಲು ತಮ್ಮ ಆಕ್ಷೇಪವಿಲ್ಲ ಎಂದು ತಿಳಿಸಿದರು. ಕಾಶ್ಮೀರದ ಆದಿ ಶಂಕರಾಚಾರ್ಯರ ತಪೋ ಭೂಮಿ, ಬೆಟ್ಟವನ್ನು ರಾಜ್ಯದ ಪುರಾತತ್ವ ಇಲಾಖೆ ತಕ್ಕಯಿ ಸುಲೇಮಾನ್ ಎಂದು ಬದಲಾಯಿಸಿದೆ. ಟಿಪ್ಪು ಹೆಸರಿನ ವಿವಿ ಸ್ಥಾಪನೆಗೆ ತಮ್ಮ ವಿರೋಧವಿದ್ದು, ಯಾವುದೇ ಭಾಗದಲ್ಲಿ ಟಿಪ್ಪು ಹೆಸರಿನಲ್ಲಿ ವಿವಿ ಸ್ಥಾಪಿಸಿದರೂ ಹೋರಾಟಕ್ಕಿಳಿಯುವುದಾಗಿ ಅವರು ಸ್ಪಷ್ಟಪಡಿಸಿದರು.
ಟಿಪ್ಪು ಸುಲ್ತಾನ್ ರಾಜ್ಯದಲ್ಲಿದ್ದ ಎಲ್ಲ ಹಿಂದೂ ದೇವಾಲಯಗಳನ್ನು ಹಾಳು ಮಾಡಲು ಆದೇಶಿಸಿದ್ದ. ತಮ್ಮ ಬಳಿ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದ ಅಧಿಕಾರಿ ಶಿಫಾರಸ್ಸು ಮಾಡಿದ್ದ ಹಿಂದೂ ದೇವಾಲಯಗಳನ್ನು ಮಾತ್ರ ನಾಶಪಡಿಸಿಲ್ಲ. ತನ್ನ ಕಾಲಾವಧಿಯಲ್ಲಿ ಟಿಪ್ಪು ಒಂದು ಲಕ್ಷ ಹಿಂದೂಗಳು, 70 ಲಕ್ಷ ಕ್ರಿಶ್ಚಿಯನ್ನರನ್ನು ಮತಾಂತರಗೊಳಿಸಿದ್ದ ಎಂದು 1855 ರಲ್ಲಿ ಟಿಪ್ಪುವಿನ ಮಗ ಗುಲ್ಲಾಂ ಮಹಮದ್ ರಚಿಸಿರುವ ಕೃತಿಯಲ್ಲಿ ಮಾಹಿತಿ ಇದೆ.
ಆತನ ಆಡಳಿತದಲ್ಲಿ ಇತರ ಧರ್ಮದವರ ಮುಂದೆ ಕುರಾನ್ ಅಥವಾ ಖಡ್ಗ ಎಂಬ ಎರಡು ಆಯ್ಕೆಗಳಿದ್ದು, ಕುರಾನ್ ಆಯ್ಕೆ ಮಾಡಿಕೊಳ್ಳದವರನ್ನು ಕಾಫಿರ್ ಗಳನ್ನು ಕಳುಹಿಸಿ ಕೊಲ್ಲುವುದು ಅವನ ಗುರಿಯಾಗಿತ್ತು. ಕೇರಳದ ಮುಸ್ಲಿಂ ಸೇವಾಧಿಕಾರಿಗೆ ಬರೆದ ಪತ್ರದಲ್ಲಿ ಈ ವಿಚಾರ ಸ್ಪಷ್ಟವಾಗಿದೆ.
ಶೃಂಗೇರಿ ಮಠಕ್ಕೆ, ಮೇಲುಕೋಟೆಗೆ, ನಂಜನಗೂಡು ದೇವಾಲಯಕ್ಕೆ ದತ್ತಿ ಕೊಟ್ಟಿದ್ದಾನೆ ಎಂದರೆ ಅದು ತನ್ನ ಬಳಿ ಇದ್ದ ಹಿಂದೂ ಅಧಿಕಾರಿಗಳನ್ನು ತೃಪ್ತಿಪಡಿಸುವ ತಂತ್ರವಾಗಿತ್ತು ಎಂದು ಚಿಮೂ ಆರೋಪಿಸಿದರು.
ಇಸ್ಲಾಂ ಬಿಟ್ಟು ಎಲ್ಲಾ ಧರ್ಮಗಳನ್ನು ನಾಶಪಡಿಸುವುದು ಅವನ ಉದ್ದೇಶವಾಗಿತ್ತು. ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದು ರಾಜ್ಯ ಉಳಿಸಲಿಕ್ಕಾಗಿ ಮಾತ್ರ. ಸ್ವಾತಂತ್ರ್ಯಕ್ಕಾಗಿ ಅಲ್ಲ ಎಂದ ಅವರು, ಗಾಂಧಿ ಹೋರಾಡಿದ್ದು ದೇಶದ ಸ್ವಾತಂತ್ರಕ್ಕಾಗಿ ಎಂದು ಹೋಲಿಕೆ ಮಾಡಿ ಹೇಳಿದರು.
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?












Click it and Unblock the Notifications