ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಿಂಗಳ ಎರಡನೇ ಶನಿವಾರ ಸಿಎಂ ಜನತಾದರ್ಶನ ಇಲ್ಲ

By Nayana
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 6: ಇನ್ನುಮುಂದೆ ತಿಂಗಳ ಎರಡನೇ ಶನಿವಾರ ಸಿಎಂ ಜನತಾ ದರ್ಶನ ಇರುವುದಿಲ್ಲ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕಚೇರಿ ಮೂಲಗಳು ತಿಳಿಸಿವೆ.

ಜೆಪಿನಗರದಲ್ಲಿರುವ ಸಿಎಂ ಅಧಿಕೃತ ನಿವಾಸದಲ್ಲಿ ಮನೆಮುಂದೆ ಸಿಎಂ ಭೇಟಿ ಮಾಡಲು ಬರುವುದನ್ನು ತಪ್ಪಿಸಲು ಪ್ರತಿ ಶನಿವಾರ ಗೃಹಕಚೇರಿ ಕೃಷ್ಣಾದಲ್ಲಿ ಜನತಾ ದರ್ಶನ ನಡೆಯುವುದಾಗಿ ತಿಳಿಸಲಾಗಿತ್ತು. ಅದರಂತೆ ಸೆಪ್ಟೆಂಬರ್ 1ರಂದು ಸಾವಿರಾರು ಮಂದಿ ಬಂದು ತಮ್ಮ ಅಹವಾಲುಗಳನ್ನು ನೀಡಿದರು.

ಸೆಪ್ಟೆಂಬರ್ 8ರಂದು ಎರಡನೇ ಶನಿವಾರ ಜನತಾ ದರ್ಶನ ಇರುವುದಿಲ್ಲ, ಇನ್ನುಮುಂದೆ ತಿಂಗಳ ಎರಡನೇ ಶನಿವಾರ ಜನತಾ ದರ್ಶನ ಇರುವುದಿಲ್ಲ, ಅದರ ಜತೆಗೆ ಮುಂದಿನ ಜನತಾ ದರ್ಶನ ದಿನಾಂಕವನ್ನೂ ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 ಕೇವಲ 24 ಗಂಟೆಯಲ್ಲಿ ಮಹಿಳೆಗೆ ನ್ಯಾಯ ದೊರಕಿಸಿಕೊಟ್ಟ ಕುಮಾರಸ್ವಾಮಿ ಕೇವಲ 24 ಗಂಟೆಯಲ್ಲಿ ಮಹಿಳೆಗೆ ನ್ಯಾಯ ದೊರಕಿಸಿಕೊಟ್ಟ ಕುಮಾರಸ್ವಾಮಿ

ಕಳೆದ ಮೂರು ತಿಂಗಳ ಅವಧಿಯಲ್ಲಿ ಪ್ರತಿದಿನ ಎಚ್‌ಡಿ ಕುಮಾರಸ್ವಾಮಿ ಜನತಾ ದರ್ಶನ ನಡೆಸುವರೆಂದು ರಾಜ್ಯದ ನಾನಾ ಕಡೆಗಳಿಂದ ಸಾವಿರಾರು ಜನರು ಬರುತ್ತಿದ್ದರು. 2006ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕುಮಾರಸ್ವಾಮಿ ಜನತಾ ದರ್ಶನ ಆರಂಭಿಸಿದ್ದರು.

No Janatha Darshan on 2nd Saturday

 'ಜನತಾ' ನಸುಕಲ್ಲಿ ಬಂದರೂ ಮಧ್ಯಾಹ್ನವೇ ದೊರೆ 'ದರ್ಶನ' 'ಜನತಾ' ನಸುಕಲ್ಲಿ ಬಂದರೂ ಮಧ್ಯಾಹ್ನವೇ ದೊರೆ 'ದರ್ಶನ'

ಹೀಗಾಗಿ ಜನತಾ ದರ್ಶನಕ್ಕೆ ಹೆಸರಾದ ಕುಮಾರಸ್ವಾಮಿ ಆಡಳಿತ ನಡೆಸಲು ಕಷ್ಟವಾಗುವಷ್ಟರ ಮಟ್ಟಿಗೆ ನಿತ್ಯ ಜನ ಹರಿದುಬರುತ್ತಿದ್ದರು. ಇನ್ನು ಮುಂದೆ ಶನಿವಾರ ಬೆಳಿಗ್ಗೆ 11 ರಿಂದ ಸಂಜೆ 4:30ರ ವರವರೆಗೆ ಮಾತ್ರ ಸಿಎಂ ಅವರು ಸಾರ್ವಜನಿಕರನ್ನು ಭೇಟಿ ಆಗಲಿದ್ದಾರೆ.

English summary
There will be no Janatha Darshan on September 8, as second Saturday is general holiday. The date for next Janatha Darshan will be announced later., said a Press release by Chief Minister's Office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X