ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

PWD ಇಂಜಿನಿಯರ್ ಪರೀಕ್ಷೆಯಲ್ಲಿ ಅಕ್ರಮ ನಡೆದಿಲ್ಲ; ಸಚಿವ ಸಿ.ಸಿ. ಪಾಟೀಲ್

|
Google Oneindia Kannada News

ಬೆಂಗಳೂರು, ಏಪ್ರಿಲ್ 25: ಲೋಕೋಪಯೋಗಿ ಇಲಾಖೆಯಲ್ಲಿ ಇತ್ತೀಚೆಗೆ ನಡೆದಿದ್ದ ಜೂನಿಯರ್ ಇಂಜಿನಿಯರ್ (ಜೆಇ) ಆಯ್ಕೆ ಪರೀಕ್ಷೆಯಲ್ಲಿ ಆಕ್ರಮ ನಡೆದಿರುವ ಆರೋಪ ವಿಚಾರವಾಗಿ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಿ.ಸಿ. ಪಾಟೀಲ್, ನನ್ನ ಇಲಾಖೆಯ ಜೆಇ ಪರೀಕ್ಷೆ ಅಚ್ಚುಕಟ್ಟಾಗಿ ನಡೆದಿದೆ. ಯಾವುದೇ ಆಕ್ರಮದ ವಾಸನೆ ಇಲ್ಲ. 900 ಹುದ್ದೆಗಳ ನೇಮಕಾತಿ ವಿಚಾರ ಕೋರ್ಟ್‌ನಲ್ಲಿ ಇತ್ತು. ಬಳಿಕ ಕೆಪಿಎಸ್‌ಸಿ ಪರೀಕ್ಷೆ ಮೂಲಕ ನೇಮಕಾತಿಗೆ ತೀರ್ಮಾನ ಮಾಡಲಾಯಿತು ಎಂದರು.

ಸೆಂಟ್ ಜಾನ್ಸ್ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಅಕ್ರಮ ನಡೆದಿದೆ ಎಂದು ಆರೋಪ ಕೇಳಿಬಂದಿದೆ. ಸೆಂಟ್ ಡಾನ್ಸ್ ಕಾಲೇಜು ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದಕ್ಕೂ PWD ಇಲಾಖೆಗೂ ಯಾವುದೇ ಸಂಬಂಧ ಇಲ್ಲ. ಇದರಲ್ಲಿ ಇಲಾಖೆಯ ಯಾವುದೇ ಪಾತ್ರ ಇಲ್ಲವೆಂದು ಸಿ.ಸಿ. ಪಾಟೀಲ್ ಬೆಂಗಳೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.

No Illegal In Public Work Department Junior Engineer Exams Says Minister CC Patil

ಲೋಕೋಪಯೋಗಿ ಇಲಾಖೆ ಪರೀಕ್ಷೆಯಲ್ಲಿ ಅಕ್ರಮ ವಿಚಾರವಾಗಿ ಮಾತು ಮುಂದುವರೆಸಿದ ಸಚಿವ ಸಿ.ಸಿ. ಪಾಟೀಲ್, ಮಾಧ್ಯಮಗಳು ತಪ್ಪು ಮಾಹಿತಿ ಇಟ್ಟುಕೊಳ್ಳಬಾರದು. ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ 900 ಹುದ್ದೆ ನೇಮಕಾತಿ ವಿಚಾರ ಕೋರ್ಟ್‌ನಲ್ಲಿ ಇತ್ತು. ಆ ಬಳಿಕ ಕೆಪಿಎಸ್‌ಸಿ ಪರೀಕ್ಷೆ ಮೂಲಕ ನೇಮಕಾತಿ ಮಾಡಲು ತೀರ್ಮಾನ ಆಗಿತ್ತು ಅಚ್ಚುಕಟ್ಟಾಗಿ ಪರೀಕ್ಷೆ ಆಗಿದೆ.

ಆದರೆ ಸೆಂಟ್ ಜಾನ್ಸ್ ಕೇಂದ್ರದಲ್ಲಿ ಅಕ್ರಮ ಆಗಿದೆ ಅಂತ ಒಂದು ಆರೋಪ ಕೇಳಿ ಬಂದಿತ್ತು. ಅದರ ಮೇಲೆ ಎಫ್ಐಆರ್ ಆಗಿದೆ. ಇದಕ್ಕೂ ಇಲಾಖೆಗೂ ಸಂಬಂಧ ಇಲ್ಲ ಇಲಾಖೆಯ ಯಾವುದೇ ಪಾತ್ರ ಇದರಲ್ಲಿ ಇರುವುದಿಲ್ಲ ಎಂದು ಅವರು ಪುನರುಚ್ಚರಿಸಿದರು.

ಇನ್ನು ಗೃಹ ಸಚಿವರಿಗೆ ನೋಟಿಸ್ ನೀಡಿ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಸಿ.ಸಿ. ಪಾಟೀಲ್, ಜತೆಯಲ್ಲಿ ಫೋಟೋ ಇದ್ದ ಮಾತ್ರಕ್ಕೆ ಆರೋಪ ಸರಿಯಲ್ಲ. ವಿಧಾನಸೌಧದಲ್ಲಿ ಮೀಟಿಂಗ್ ಮುಗಿಸಿ ಬರುವಾಗ ನಮ್ಮ ಜೊತೆಯೂ ಯಾರು ಯಾರೋ ಸೆಲ್ಫಿ ತೆಗೆದುಕೊಳ್ಳುತ್ತಾರೆ.

No Illegal In Public Work Department Junior Engineer Exams Says Minister CC Patil

ಫೋಟೋ ಇದ್ದವರ ಜೊತೆ ಹೋಗಿ ಮೋಜು ಮಸ್ತಿ ಮಾಡಿದ್ದರೆ ಅದನ್ನು ವೆಸ್ಟೆಡ್ ಇಂಟರೆಸ್ಟ್ ಎನ್ನಬಹುದು. ಇಲ್ಲದಿದ್ದರೆ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಗೃಹ ಸಚಿವರು ಯಾರ ಮನೆಗೆ ಹೋಗಿದ್ದರು ಎಂಬುದು ನನಗಂತೂ ಮಾಹಿತಿ ಇಲ್ಲ ಎಂದು ವಿಧಾನಸೌಧದಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಮಾರ್ಮಿಕವಾಗಿ ಉತ್ತರಿಸಿದರು.

ಗುತ್ತಿಗೆದಾರರ ಸಂಘದಿಂದ ಸಿಎಂ ಭೇಟಿ; PWD ಸಚಿವ ಪಾಟೀಲ್‌ಗೆ ಸಿಎಂ ಬುಲಾವ್
ಲೋಕೋಪಯೋಗಿ ಇಲಾಖೆಯಲ್ಲಿ ಭ್ರಷ್ಟಾಚಾರ ಮತ್ತು ಕಮಿಷನ್ ವಿಚಾರವಾಗಿ ಕುತೂಹಲಕಾರಿ ಬೆಳವಣಿಗೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಗುತ್ತಿಗೆದಾರರ ಸಂಘದವರು ಇಂದು ಸಿಎಂ ಬೊಮ್ಮಾಯಿ ಆಮಂತ್ರಣದ ಮೇರೆಗೆ ಅವರನ್ನು ಭೇಟಿಯಾದರು.

ಗುತ್ತಿಗೆದಾರರ ಸಂಘದ ಭೇಟಿ ವೇಳೆ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್‌ರನ್ನು ಸಿಎಂ ಬೊಮ್ಮಾಯಿ ಕರೆಸಿದ್ದರು. ಇತ್ತೀಚೆಗೆ ಲೋಕೋಪಯೋಗಿ ಇಲಾಖೆ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಲಾಗಿತ್ತು.

Recommended Video

KL ರಾಹುಲ್ IPL ಪ್ರಶಸ್ತಿ ಗೆಲ್ಲೋದು ಇದೇ ಕಾರಣಕ್ಕೆ!.ಗೊತ್ತಾದ್ರೆ ನಿಮ್ಗೆ ಶಾಕ್ ಗ್ಯಾರೆಂಟಿ | Oneindia Kannada

English summary
No Illegal In Junior Engineer (JE) examination in the Public Work Department, Minister CC Patil Said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X