ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರಿ ವ್ಯವಹಾರ, ಪ್ರಮಾಣಪತ್ರದಲ್ಲಿ 'ದಲಿತ' ಪದ ನಿಷೇಧ

|
Google Oneindia Kannada News

ಬೆಂಗಳೂರು, ಮಾರ್ಚ್ 29: ಪರಿಶಿಷ್ಟ ಜಾತಿಗೆ ಸೇರಿದವರು ಇನ್ನುಮುಂದೆ ಯಾವುದೇ ಸರ್ಕಾರದ ವ್ಯವಹಾರ ಹಾಗೂ ಪ್ರಮಾಣ ಪತ್ರದಲ್ಲಿ 'ದಲಿತ' ಎಂಬ ಪದ ಬಳಸುವಂತಿಲ್ಲ.

ಸಾಂವಿಧಾನಿಕವಾಗಿ ಮನ್ನಣೆ ಪಡೆದ ಪರಿಶೀಷ್ಟ ಜಾತಿ ಎಂದೇ ಬಳಸುವಂತೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದೆ. ಈ ಹಿಂದೆ ಚಾಲ್ತಿಯಲ್ಲಿದ್ದ 'ಹರಿಜನ' ಪದ ಬಳಕೆಯನ್ನು 1982ರಿಂದ ನಿಷೇಧಿಸಲಾಗಿದೆ. ಈಗ ಹರಿಜನ ಜತೆಗೆ ದಲಿತ ಪದವೂ ಸರ್ಕಾರದ ದಾಖಲೆಗಳಲ್ಲಿ ಇತಿಹಾಸ ಪುಟ ಸೇರಿದೆ.

ವಿಜಯಪುರ ದಲಿತ ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ 4 ಜನರ ಬಂಧನ ವಿಜಯಪುರ ದಲಿತ ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ 4 ಜನರ ಬಂಧನ

ಕೇಂದ್ರ ಸಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ ಆದೇಶದಂತೆ ದೇಶದ ಎಲ್ಲ ರಾಜ್ಯಗಳ ಇಲಾಖೆಗಳು ದಲಿತ ಪದದ ಬದಲು ಪರಿಶಿಷ್ಟ ಜಾತಿ ಎಂದೇ ಕಡ್ಡಾಯವಾಗಿ ಬಳಸಬೇಕಿದೆ. ಸರ್ಕಾರದ ವಿವಿಧ ಇಲಾಖೆಗಳು ತಮ್ಮ ಪ್ರಮಾಣ ಪತ್ರ, ವ್ಯವಹಾರ ಸೇರಿ ಇನ್ನಿತರೆ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯವರನ್ನು ಗುರುತಿಸಲು ದಲಿತ ಎಂಬ ಪದ ಬಳಸುವುದು ರೂಢಿಯಲ್ಲಿತ್ತು.

No Dalit word usage in Government affairs

ಇಂತಹ ಪದ ಬಳಕೆಗೆ ಕೇಂದ್ರ ಸರ್ಕಾರ ಕಡಿವಾಣ ಹಾಕಿದೆ. ಇನ್ನುಮುಂದೆ ದೇಶದ ಪ್ರತಿಯೊಂದಯ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಯಾವುದೇ ಇಲಾಖೆಯಲ್ಲಿಯೂ ಆಯಾ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

English summary
Ministry of social justice and empowerment has issued an order barring use of word Dalit in government affairs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X