ರಾಷ್ಟ್ರೀಯ ಕಾನೂನು ವಿವಿ ಮೂರು ವರ್ಷದ ಬಿಎ ಕೋರ್ಸ್, ಅರ್ಹತೆಗಳು
ಬೆಂಗಳೂರು, ಡಿಸೆಂಬರ್ 12: ಬೆಂಗಳೂರಿನಲ್ಲಿರುವ ಭಾರತದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ (ಎನ್‌ಎಲ್‌ಎಸ್‌ಐಯು) ಹೊಸ ಮೂರು ವರ್ಷದ ಬಿಎ (ಹಾನರ್ಸ್) ಕಾರ್ಯಕ್ರಮವನ್ನು ಘೋಷಣೆ ಮಾಡಿದೆ. 4 ವರ್ಷಗಳಿಗೆ ವಿಸ್ತರಣೆ ಮಾಡಬಹುದಾದ ಈ ಕಾರ್ಯಕ್ರಮದ ತರಗತಿಗಳು 2025ರ ಜುಲೈನಲ್ಲಿ ಆರಂಭವಾಗಲಿದೆ. ಈ ಹೊಸ ಕೋರ್ಸ್‌ನ ವಿವರಗಳು ಇಲ್ಲಿವೆ.
ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಈ ಕುರಿತು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಉಪ ಕುಲಪತಿ ಸುಧೀರ್ ಕೃಷ್ಣಸ್ವಾಮಿ ಘೋಷಣೆ ಮಾಡಿದರು. ಹೊಸ ಕೋರ್ಸ್‌ನ ವಿವರ, ವಿಶೇಷತೆಗಳನ್ನು ಸಹ ತಿಳಿಸಿಕೊಟ್ಟರು.

ಕೋರ್ಸ್‌ನ ವಿವರಗಳು: ಭಾರತೀಯ ಕಾನೂನು ಶಿಕ್ಷಣದಲ್ಲಿ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಬೆಂಗಳೂರಿನ ಭಾರತದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ 5 ವರ್ಷಗಳ ಬಿಎ ಎಲ್‌ಎಲ್‌ಬಿ (ಹಾನರ್ಸ್) ಪದವಿಯನ್ನು ಅಭಿವೃದ್ಧಿಗೊಳಿಸಿ, ಪರಿಚಯಿಸುತ್ತಿದೆ. ಈಗಾಗಲೇ ಎನ್‌ಎಲ್‌ಎಸ್‌ನಲ್ಲಿ ಹಲವಾರು ವಿದ್ಯಾರ್ಥಿಗಳು ಮಾನವಶಾಸ್ತ್ರ, ಸಾಮಾಜಿಕ ವಿಜ್ಞಾನ ಮತ್ತು ವ್ಯವಹಾರ ವಿಷಯದಲ್ಲಿ ಪದವಿಗಳನ್ನು ಪಡೆದಿದ್ದಾರೆ ಮತ್ತು ಅವರ ಕ್ಷೇತ್ರಗಳಲ್ಲಿ ಅತ್ಯಂತ ಯಶಸ್ವಿಯಾದ ವೃತ್ತಿ ಜೀವನ ನಡೆಸುತ್ತಿದ್ದಾರೆ.
ರಾಷ್ಟ್ರೀಯ ಮತ್ತು ರಾಜ್ಯ ಶಿಕ್ಷಣ ನೀತಿಗಳ ಮಾರ್ಗದಲ್ಲಿ ಅಭಿವೃದ್ಧಿಗೊಳಿಸಿರುವ 5 ವರ್ಷದ ಬಿಎ ಎಲ್‌ಎಲ್‌ಬಿ ಕಾರ್ಯಕ್ರಮವನ್ನು ಸದ್ಯ ಲಭ್ಯವಿರುವ ಉಪನ್ಯಾಸರ ಮೂಲಕವೇ ನಡೆಸಲಾಗುತ್ತದೆ. ಹೊಸ ಸಿಬ್ಬಂದಿ ನೇಮಕ ಮಾಡಬೇಕಾದ ಅಗತ್ಯವಿಲ್ಲ. ಈ ಕಾರ್ಯಕ್ರಮದಲ್ಲಿ ಮುಖ್ಯ ವಿಷಯಗಳು ಮತ್ತು ಉಪ ವಿಷಯಗಳನ್ನು ಸದ್ಯ ಲಭ್ಯವಿರುವ ಉಪನ್ಯಾಸಕರು ಮುಂದಿನ ಕೆಲವು ವರ್ಷಗಳ ಕಾಲ ಮುನ್ನಡೆಸಲಿದ್ದಾರೆ.
2023ರ ಆಗಸ್ಟ್‌ನಲ್ಲಿ ಎನ್‌ಎಲ್‌ಎಸ್‌ಬಿಎ (ಹಾನರ್ಸ್) ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದ ಅಧ್ಯಾಪಕರ ತಂಡಗಳಿಂದಲೇ ಅಭಿವೃದ್ಧಿಗೊಳಿಸಲಾಯಿತು ಮತ್ತು 2024ರ ಆರಂಭದಲ್ಲಿ ಆಡಳಿತ ಮಂಡಳಿಗಳಿಂದ ಇದಕ್ಕೆ ಅನುಮೋದನೆ ಪಡೆಯಲಾಯಿತು. ಇತ್ತೀಚೆಗೆ ವಿಶ್ವವಿದ್ಯಾಲಯದ ಅಕಾಡೆಮಿಕ್ ಮತ್ತು ತಜ್ಞರೊಂದಿಗೆ ಸಮಾಲೋಚನೆಯನ್ನು ನಡೆಸಿ ಪಠ್ಯಕ್ರಮದ ಕುರಿತು ಅವರ ಸಲಹೆಗಳನ್ನು ಪಡೆಯಲಾಗಿದೆ.
ಅರ್ಹತೆಗಳು: 5 ವರ್ಷಗಳ ಬಿಎ ಎಲ್‌ಎಲ್‌ಬಿ (ಹಾನರ್ಸ್) ಪದವಿಗೆ 10+2 ತತ್ಸಮಾನ ವಿದ್ಯಾರ್ಹತೆ ಪೂರ್ಣಗೊಳಿಸಿದ ಎಲ್ಲರಿಗೂ ಅವಕಾಶವಿದೆ. ಶೈಕ್ಷಣಿಕ ಅಗತ್ಯಗಳನ್ನು ಅಭ್ಯರ್ಥಿ ಪಾಲಿಸಬೇಕಾಗುತ್ತದೆ.
* ಸಾಮಾನ್ಯ ವರ್ಗದವರಿಗೆ ಕನಿಷ್ಠ ಶೇ 55ರಷ್ಟು ಅಂಕ
* ಎಸ್‌ಸಿ/ ಎಸ್‌ಟಿ ವರ್ಗದವರಿಗೆ ಕನಿಷ್ಠ ಶೇ 45ರಷ್ಟು ಅಂಕ
* ಕೋರ್ಸ್ ಪ್ರಾರಂಭವಾಗುವಾಗ ಪ್ರಮಾಣ ಪತ್ರ ಸಿಗುವಂತೆಇದ್ದರೆ 10+2 ಕೊನೆಯ ಹಂತದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು.
ಕೋರ್ಸ್‌ನ ವೈಶಿಷ್ಯತೆಗಳು
* ಸಾಮಾನ್ಯ ಮೂಲಭೂತ ಕೋರ್ಸ್‌ಗಳು. ಬಿಎ ಅಥವಾ ಬಿಎ ಎಲ್ಎಲ್‌ಬಿ ಕೋರ್ಸ್‌ಗೆ ದಾಖಲಾಗುವ ಎಲ್ಲಾ ಮೊದಲ ವರ್ಷದ ವಿದ್ಯಾರ್ಥಿಗಳು, ಕೋರ್ಸ್‌ನ ಮೂಲ ಅಗತ್ಯಗಳನ್ನು ತಿಳಿದುಕೊಳ್ಳಲು ಶಕ್ತಿಯುತ ಶೈಕ್ಷಣಿಕ ಆಧಾರ ಪಡೆದುಕೊಳ್ಳುತ್ತಾರೆ.
* ಎಲ್ಲಾ ವಿದ್ಯಾರ್ಥಿಗಳು ಮುಖ್ಯ ಮತ್ತು ಉಪ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ಆಯ್ಕೆ ಇರುತ್ತದೆ. ಪ್ರತಿ ವಿದ್ಯಾರ್ಥಿ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸುವ ಸಮಯದಲ್ಲಿಯೇ ಮೊದಲ ಮುಖ್ಯ ಆಯ್ಕೆಗಳ ರ‍್ಯಾಂಕ್ ಪಟ್ಟಿಯನ್ನು ನೀಡಲಾಗುತ್ತದೆ. ವಿದ್ಯಾರ್ಥಿ ಮೊದಲ ವರ್ಷದ ಅಂತ್ಯದಲ್ಲಿ ಉಪ ವಿಷಯ ಅಥವಾ ಎರಡನೇ ಮುಖ್ಯ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು.
* ಈ ಮುಖ್ಯ ಮತ್ತು ಉಪ ವಿಷಯಗಳು ಈಗಾಗಲೇ ಬಿಎ ಎಲ್‌ಎಲ್‌ಬಿ (ಹಾನರ್ಸ್) ಕೋರ್ಸ್‌ನಲ್ಲಿ ಕಲಿಸುವ ಕ್ಷೇತ್ರ/ ವಿಷಯಗಳನ್ನು ಒಳಗೊಂಡಿರುತ್ತದೆ. ಈ ವಿಷಯಗಳು ಇತಿಹಾಸ, ಸಮಾಜಶಾಸ್ತ್ರ ಮತ್ತು ಮಾನವಶಾಸ್ತ್ರ, ಅರ್ಥಶಾಸ್ತ್ರ ಮತ್ತು ರಾಜಕೀಯ. ಬಳಿಕ ತತ್ವಶಾಸ್ತ್ರ, ಸಾಹಿತ್ಯ, ಪರಿಸರ ಅಧ್ಯಯನಗಳು, ಡೇಟಾ ವಿಶ್ಲೇಷಣೆ ವಿಷಯಗಳನ್ನು ಮುಖ್ಯ ಮತ್ತು ಉಪ ವಿಷಯಗಳಾಗಿ ಪರಿಚಯಿಸಲಾಗುತ್ತದೆ.
* ಈ ಕೋರ್ಸ್‌ನ ಪಠ್ಯಗಳ ಅವಿಭಾಜ್ಯ ಭಾಗವೆಂದರೆ ಕೆಲವು ಭಾರತೀಯ ಭಾಷೆಗಳನ್ನು ಕಲಿಯುವ ಅವಕಾಶವಿದೆ.
* ಕೋರ್ಸ್‌ನ 4ನೇ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಅಭ್ಯಾಸ ಕೋರ್ಸ್ ಇರುತ್ತದೆ. ಎಐ & ಮೆಷಿನ್ ಲರ್ನಿಂಗ್, ಚಲನಚಿತ್ರ ನಿರ್ಮಾಣ, ವ್ಯವಹಾರ ಸಲಹೆಗಾರಿಕೆ, ಬಳಕೆದಾರ ಅನುಭವ ಸಂಶೋಧನೆ, ಡಿಜಿಟಲ್ ಪತ್ರಿಕೋದ್ಯಮ, ಸೃಜನಾತ್ಮಕ ಬರವಣಿಗೆ ಮುಂತಾದ ಕ್ಷೇತ್ರಗಳಲ್ಲಿ ಅಭ್ಯಾಸ ಕೋರ್ಸ್‌ಗಳು ಇರುತ್ತದೆ. ವಿದ್ಯಾರ್ಥಿ ಪ್ರತಿ ವರ್ಷದಲ್ಲಿ ಕನಿಷ್ಠ ಒಂದು ತಿಂಗಳ ಅವಧಿಯ ಇಂಟರ್ನ್‌ಶಿಪ್ ಪೂರ್ಣಗೊಳಿಸಬೇಕು.
ಪ್ರವೇಶ ಪ್ರಕ್ರಿಯೆ ವಿವರ: 2025-26ನೇ ಸಾಲಿನ ಎನ್‌ಎಲ್‌ಎಸ್ ಬಿಎ (ಹಾನರ್ಸ್) ಕೋರ್ಸ್‌ಗೆ 60 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ. ಅಖಿಲ ಭಾರತೀಯ ಪ್ರವೇಶ ಪರೀಕ್ಷೆ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಪರೀಕ್ಷೆಯು 2 ಹಂತಗಳಲ್ಲಿ 75 ಅಂಕಗಳಿಗೆ ನಡೆಯಲಿದೆ. ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ. ಪ್ರವೇಶಾತಿಯಲ್ಲಿ ಮೀಸಲಾತಿಯನ್ನು ಸಹ ಪಾಲಿಸಲಾಗುತ್ತದೆ.
ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಲು ಡಿಸೆಂಬರ್ 10, 2024ರಿಂದ ಅವಕಾಶವಿದೆ. 2025ರ ಜನವರಿ ಮೊದಲ ವಾರದ ತನಕ ನೋಂದಣಿ ಮಾಡಿಕೊಳ್ಳಬಹುದು. ಮಾರ್ಚ್ 23, 2025 ಅರ್ಜಿ ಸಲ್ಲಿಕೆಗೆ ಕೊನೆಯ ದಿನ. ಏಪ್ರಿಲ್ 25ರಂದು ಪರೀಕ್ಷೆಗಳು ನಡೆಯಲಿವೆ. ಅಂತಿಮ ಪ್ರವೇಶ ಪಟ್ಟಿಯನ್ನು ಮೇ 2025ರಂದು ಬಿಡುಗಡೆ ಮಾಡಲಾಗುತ್ತದೆ. ಜುಲೈ 1ರಿಂದ ತರಗತಿಗಳು ಪ್ರಾರಂಭವಾಗುತ್ತದೆ.
ಕೋರ್ಸ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ ವಿಳಾಸ https://www.nls.ac.in/
-
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ಹೆಚ್ಚು ಜನ ಮಾತನಾಡುವ ಭಾಷೆ, ವಿದ್ಯಾರ್ಥಿಗಳು ಎಲ್ಲ ಭಾಷೆ ಕಲಿಯಬೇಕು: ಶ್ರೀರಾಮುಲು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್












Click it and Unblock the Notifications