ಗರ್ಭಿಣಿಯರ ಮಾದಕ ವ್ಯಸನದಿಂದ ಹುಟ್ಟುವ ಮಕ್ಕಳಲ್ಲಿ ಉಂಟಾಗುವ ಸಮಸ್ಯೆಗಳೇನು?

ಬೆಂಗಳೂರು, ಏಪ್ರಿಲ್ 18 : ಇತ್ತೀಚೆಗೆ ಮಹಿಳೆಯರು ಮಾದಕ ವ್ಯಸನಕ್ಕೆ ಹೆಚ್ಚು ಒಳಗಾಗುತ್ತಿದ್ದು, ಅದರಿಂದ ಹೊರಗೆ ಬರಲಾಗದೇ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಹೀಗಾಗಿ ನಿಮಾನ್ಸ್‌ನ ವ್ಯಸನ ಮುಕ್ತ ಕೇಂದ್ರದ ಮಹಿಳಾ ವಿಭಾಗಕ್ಕೆ ಹೆಚ್ಚಿನ ಮಹಿಳೆಯರು ದಾಖಲಾಗುತ್ತಿದ್ದು, ವ್ಯಸನದಿಂದ ಹೊರಗೆ ಬರಲು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿಮಾನ್ಸ್‌ ವ್ಯಸನ ಮುಕ್ತ ಕೇಂದ್ರದ ಮಹಿಳಾ ವಿಭಾಗದ ಮುಖ್ಯಸ್ಥರಾದ ಡಾ. ವಿವೇಕ್ ಬೆನೆಗಲ್, ''ಮಹಿಳೆಯರು ಹೆಚ್ಚಾಗಿ ಮದ್ಯಪಾನ ,ಧೂಮಪಾನ ಒಳಗಾಗುವುದು ಇತ್ತೀಚೆಗೆ ಹೆಚ್ಚಾಗಿದೆ. ಅದರಲ್ಲೂ ಯುವತಿಯರು ಹೆಚ್ಚಾಗಿ ಕೆಲಸದ ಒತ್ತಡ ಅಥವಾ ಇನ್ನಿತರ ನಕರಾತ್ಮಕ ಮನಸ್ಥಿತಿಯಿಂದ ಹೊರಗೆ ಬರಲು ಮದ್ಯಪಾನ ಅಥವಾ ಡ್ರಗ್ಸ್‌ ತೆಗೆದುಕೊಳ್ಳುತ್ತಿದ್ದಾರೆ'' ಎಂದು ತಿಳಿಸಿದ್ದಾರೆ.

''ಕೇವಲ ವಯಸ್ಕರಿಗೆ ಅಷ್ಟೇ ಈ ಸಮಸ್ಯೆ ಅಲ್ಲ. ವಯಸ್ಸಾದ ಮಹಿಳೆಯರು ತಮ್ಮ ಕಾಯಿಲೆಗೆ ಸಂಬಂಧಿಸಿದ ನೋವಿನಿಂದ ಹೊರಗೆ ಬರಲು ಮಾತ್ರೆಗಳ ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಇನ್ನು ಗರ್ಭಿಣಿಯರು ಸಹ ಮಾದಕ ವಸ್ತು ಅಥವಾ ಮದ್ಯಪಾನ ಸೇವಿಸುವುದರಿಂದ ಹುಟ್ಟುವ ಮಗುವಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣಿಸುವ ಸಾಧ್ಯತೆ ಇರುತ್ತದೆ. ಉದಾಹರಣೆಗೆ ಮಗುವಿನ ನಡುವಳಿಕೆಯಲ್ಲಿ ಬದಲಾವಣೆಯಾಗಬಹುದು, ಗ್ರಹಿಕೆ ಕುಂಠಿತ, ವಿದ್ಯಾಭ್ಯಾಸದಲ್ಲಿ ಹಿಂದುಳಿಯುವುದು ಇನ್ನಿತರ ಹಲವು ಸಮಸ್ಯೆಗಳಿಗೆ ತುತ್ತಾಗಬಹುದು'' ಎಂದು ಡಾ. ವಿವೇಕ್‌ ಬೆನೆಗಲ್ ವಿವರಿಸಿದ್ದಾರೆ.

Bengaluru: Nimhans Centre Receiving More Number of Women Patients Taking Alcohol & Drugs, Seek Help

ಇದೇ ವಿಚಾರವಾಗಿ ಖ್ಯಾತ ಮಕ್ಕಳ ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ಮಾತನಾಡಿದ್ದು, "ಬಾಲ್ಟಿಮೊರ್ ಅಧ್ಯಯನದ ಪ್ರಕಾರ ಜೀವನ ಶೈಲಿಯ ಬದಲಾವಣೆಯಿಂದಾಗಿ ಇತ್ತೀಚಿಗೆ ಮಹಿಳೆಯರು, ಮದ್ಯಪಾನ, ಧೂಮಪಾನದ ವ್ಯಸನಿಗಳಾಗುತ್ತಿದ್ದಾರೆ. ಅದರಲ್ಲೂ ಗರ್ಭಿಣಿಯರು ಸಹ ಡ್ರಗ್ಸ್‌ ತೆಗೆದುಕೊಳ್ಳುತ್ತಿರುವುರಿಂದ ಇದು ಹುಟ್ಟುವ ಮಗುವಿನ ಮೇಲೆ ಪರಿಣಾಮ ಬೀರಲಿದ್ದು, ಮೊದಲ ಮೂರು ತಿಂಗಳ ಅವಧಿಯಲ್ಲಿ ನವಜಾತ ಶಿಶುವಿನ ಹೃದಯಕ್ಕೆ ಹಾನಿಯಾಗಲು ಕಾರಣವಾಗಬಹುದು'' ಎಂದು ಎಚ್ಚರಿಸಿದ್ದಾರೆ.

Bengaluru: Nimhans Centre Receiving More Number of Women Patients Taking Alcohol & Drugs, Seek Help

"ಗರ್ಭಿಣಿಯರು ಧೂಮಪಾನ ಹೆಚ್ಚಾಗಿ ಮಾಡುತ್ತಿದ್ದರೆ ಮಗುವಿನ ಹೃದಯದ ಬಲಭಾಗದ ಕಡೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇನ್ನು ಮದ್ಯವಸ್ಯನಿಗಳಾಗಿದ್ದಾರೆ ನವಜಾತ ಶಿಶುವಿನ ಹೃದಯದಲ್ಲಿ ರಂಧ್ರ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಅಂತ ಬಾಲ್ಟಿಮೋರ್ ಅಧ್ಯಯನದ ವರದಿ ತಿಳಿಸಿದೆ. ಇದರ ಜೊತೆಗೆ ತಡವಾಗಿ ಮದುವೆಯಾಗುವ ಮಹಿಳೆಯರು ಮತ್ತು ತಡವಾಗಿ ಮಕ್ಕಳು ಮಾಡಿಕೊಳ್ಳುವವರ ನವಜಾತ ಶಿಶುಗಳಲ್ಲಿ ಜೆನಿಟಿಕಲಿ ಸಿಂಡ್ರೋಮ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಮಾದಕ ವ್ಯಸನಿಗಳಾಗಿರುವ ಮಹಿಳೆಯರು ಗರ್ಭಾವಸ್ಥೆಗೂ ಮುನ್ನವೇ ಫೋಲೀಕ್ ಆಕ್ಸಿಡ್‌ನ್ನ ತೆಗೆದುಕೊಳ್ಳುವುದರಿಂದ ನವಜಾತ ಶಿಶುವಿನಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಯನ್ನ ಕಡಿಮೆ ಮಾಡಬಹುದಾಗಿದೆ,'' ಅಂತ ಡಾ. ವಿಜಯಲಕ್ಷ್ಮೀ ತಿಳಿಸಿದ್ದಾರೆ.

Recommended Video

      ಭಾರತೀಯರೇ ಎಚ್ಚರ!!!ಚೀನಾದಲ್ಲಿ ಕೊರೊನಾ ಸಾವು-ನೋವು ಮತ್ತೆ ಸ್ಟಾರ್ಟ್ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+