ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ನಿಕಾನ್ ಇಂಡಿಯಾದಿಂದ ಎಕ್ಸ್‌ಪಿರಿಯೆನ್ಸ್ ಜೋನ್ ಆರಂಭ

|
Google Oneindia Kannada News

ಬೆಂಗಳೂರು, ಜುಲೈ 8: ನಿಕಾನ್ ಕಾರ್ಪೊರೇಷನ್‍ನ ಶೇ.100 ಅಧೀನ ಸಂಸ್ಥೆ ನಿಕಾನ್ ಇಂಡಿಯಾ ಬೆಂಗಳೂರಿನಲ್ಲಿ ಹೊಸ ಎಕ್ಸ್‌ಪಿರಿಯೆನ್ಸ್ ಜೋನ್ ಅನ್ನು ಆರಂಭಿಸಿದೆ. ಇಮೇಜಿಂಗ್ ತಂತ್ರಜ್ಞಾನದ ಮುಂಚೂಣಿಯಲ್ಲಿರುವ ನಿಕಾನ್, ಎಸ್.ಸಿ.ರಸ್ತೆಯ ಬ್ರಿಗೇಡ್ ಪ್ಲಾಜಾದ ಫೊಟೊ ಸರ್ಕಲ್‍ನಲ್ಲಿಕೇಂದ್ರ ಉದ್ಘಾಟನೆ ಮಾಡಲಾಗಿದೆ.

ಈ ಜೋನ್ ಅನ್ನು ನಿಕಾನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಕುಮಾರ್ ಮತ್ತು ನಿಕಾನ್ ಇಂಡಿಯಾದ ಕಾರ್ಪೊರೇಟ್ ಪ್ಲಾನಿಂಗ್ ಜನರಲ್ ಮ್ಯಾನೇಜರ್ ಓಹ್ಬಾ ಯೊಜಿ ಉದ್ಘಾಟಿಸಿದರು. ದಕ್ಷಿಣದಲ್ಲಿ ಈ 33ನೇ ಎಕ್ಸ್‌ಪಿರಿಯೆನ್ಸ್ ಜೋನ್ ಪ್ರಾರಂಭದ ಮೂಲಕ ಛಾಯಾಗ್ರಾಹಕ ಸಮುದಾಯಕ್ಕೆ ತನ್ನ ಬದ್ಧತೆ ಮತ್ತು ಬೆಂಬಲವನ್ನು ಎತ್ತಿ ತೋರಿಸಿದ್ದು ಇದು ವಿಶಿಷ್ಟ ಉತ್ಪನ್ನದ ಪೋರ್ಟ್‍ಫೋಲಿಯೊ ಗ್ರಾಹಕರಿಗೆ ಸುಲಭವಾಗಿ ಲಭ್ಯವಿರುವಂತೆ ಮಾಡುತ್ತದೆ.

ಬೆಂಗಳೂರಿನ ಈ ಹೊಸ ಎಕ್ಸ್‌ಪಿರಿಯೆನ್ಸ್ ಜೋನ್ನ್ ಫೋಟೋಗ್ರಫಿ ಉತ್ಸಾಹಿಗಳು, ವೃತ್ತಿಪರರು, ಹವ್ಯಾಸಿಗಳು ಮತ್ತು ಕಲಾವಿದರ ವಿಸ್ತಾರ ಜಾಲ ತಲುಪಲು ಸನ್ನದ್ಧವಾಗಿಸುತ್ತದೆ ಅಲ್ಲದೆ ಇದು ಸಂಪೂರ್ಣ ಶ್ರೇಣಿಯ ನಿಕಾನ್ ಉತ್ಪನ್ನಗಳು, ಮಿರರ್‍ಲೆಸ್ ಸೀರೀಸ್, ಡಿಎಸ್‍ಎಲ್‍ಆರ್ ಕ್ಯಾಮರಾಗಳು, ಕೂಲ್‍ಪಿಕ್ಸ್ ರೇಂಜ್, ಲೆನ್ಸ್‌ಗಳು, ಅಕ್ಸೆಸರಿಗಳು ಮತ್ತು ಸ್ಪೋರ್ಟ್ ಆಪ್ಟಿಕ್ಸ್ ರೇಂಜ್ ಅನ್ನು ಒನ್-ಸ್ಟಾಪ್-ಶಾಪ್‍ನಲ್ಲಿ ದೊರೆಯುತ್ತದೆ. ಈ ಜೋನ್‍ಗಳು ಎಲ್ಲ ವೃತ್ತಿಪರ ಛಾಯಾಗ್ರಾಹಕರಿಗೆ ವಿಶೇಷ ತಾಂತ್ರಿಕ ಬೆಂಬಲವನ್ನೂ ನೀಡುತ್ತವೆ.

Nikon India Opens New Experience Center in Bengaluru

''ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರಿನಲ್ಲಿ ನಮ್ಮ ಮೌಲಿಕ ಗ್ರಾಹಕರಿಗೆ ಮತ್ತೊಂದು ಫ್ಲಾಗ್‍ಶಿಪ್ ಎಕ್ಸ್‌ಪಿರಿಯೆನ್ಸ್ ಜೋನ್ ಪ್ರಾರಂಭಿಸಲು ನಾವು ಬಹಳ ಸಂತೋಷ ಹೊಂದಿದ್ದೇವೆ. ಈ ಹೊಸ ನಿಕಾನ್ ಎಕ್ಸ್‌ಪಿರಿಯೆನ್ಸ್ ಜೋನ್ ಛಾಯಾಗ್ರಹಣದ ಉತ್ಸಾಹಿಗಳಿಗೆ ನಮ್ಮ ಅತ್ಯಾಧುನಿಕ ಉತ್ಪನ್ನಗಳ ಲಭ್ಯತೆಯನ್ನು ಉತ್ತೇಜಿಸುವ ಗುರಿ ಹೊಂದಿದೆ. ಬೆಂಗಳೂರು ಗಮನಾರ್ಹ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದೆ ಮತ್ತು ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೆಟ್ರೋಪಾಲಿಟನ್ ನಗರವಾಗಿದೆ. ಇಂದಿನ ಪ್ರಕಟಣೆಯೊಂದಿಗೆ ಗ್ರಾಹಕರು ಈಗ ನಿಕಾನ್ ಸಾಧನದ ಶ್ರೇಣಿ ಕಂಡುಕೊಳ್ಳಬಹುದು ಅದು ವಿಶ್ವದಾದ್ಯಂತ ಛಾಯಾಗ್ರಹಣದ ಸ್ಪೆಕ್ಟ್ರಂ ಅನ್ನು ಬದಲಾಯಿಸಲಿದೆ. ನಮ್ಮ ಗುರಿ ಭಾರತದಾದ್ಯಂತ ನಮ್ಮ ಬ್ರಾಂಡ್ ಅಸ್ತಿತ್ವವನ್ನು ವಿಸ್ತರಿಸುವುದಾಗಿದ್ದು ಛಾಯಾಗ್ರಹಣದಲ್ಲಿ ಆನಂದದಾಯಕ ಮತ್ತು ತಲ್ಲೀನಗೊಳಿಸುವ ಅನುಭವ ನೀಡುತ್ತದೆ'' ಎಂದು ನಿಕಾನ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಕುಮಾರ್ ಹೇಳಿದರು.

ಭಾರತದ ದಕ್ಷಿಣ ಮಾರುಕಟ್ಟೆಯು ಸಾಂಸ್ಕತಿಕವಾಗಿ ಪ್ರಗತಿಪರವಾಗಿದ್ದು ಅದು ವಿಸ್ತಾರ ಛಾಯಾಗ್ರಹಣ ಉತ್ಸಾಹಿಗಳು ಮತ್ತು ಕಲಾವಿದರೊಂದಿಗೆ ಸಂಪರ್ಕಕ್ಕೆ ಕಾರ್ಯತಂತ್ರೀಯ ತಾಣವಾಗಿದೆ. ನಿಕಾನ್ ಎಕ್ಸ್‌ಪಿರಿಯೆನ್ಸ್ ಜೋನ್‍ಗಳೊಂದಿಗೆ ಕಂಪನಿಯು ಭಾರತದಾದ್ಯಂತ ಗ್ರಾಹಕರಿಗೆ ವಿಶಿಷ್ಟವಾದ 'ಟಚ್ ಅಂಡ್ ಫೀಲ್' ಅನುಭವ ನೀಡುವ ಗುರಿ ಹೊಂದಿದೆ ಮತ್ತು ಯುವ ಮಿಲೆನಿಯಲ್‍ಗಳೊಂದಿಗೆ ಸಂಪರ್ಕದಲ್ಲಿರಲು ಹಾಗೂ ಆವಿಷ್ಕಾರ ಮತ್ತು ಕಲ್ಪನೆಯ ಸೃಜನಶೀಲ ಅವಕಾಶಗಳನ್ನು ಹುಡುಕಾಟ ನಡೆಸಲು ಸನ್ನದ್ಧವಾಗಿಸುತ್ತದೆ ಎಂದು ಸಂಸ್ಥೆ ಹೇಳಿದೆ.

Recommended Video

ತನ್ನ ವಿಶೇಷವಾದ ಬ್ಯಾಟಿಂಗ್ ಶೈಲಿಯಿಂದ ದಾಖಲೆ ಮಾಡಿದ ಸೂರ್ಯ ಕುಮಾರ್ | *Cricket | OneIndia Kannada

English summary
Nikon India opens new experience center in Bengaluru. Jayesh Mehta-Foto Circle,Sajjan Kumar-MD-Nikon India,Yuji Ohba-GM-Corporate Planning-Nikon India visited the center.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X