Channapatna BY Election: ಚನ್ನಪಟ್ಟಣದಲ್ಲಿ ಡಿಕೆ ಬ್ರದರ್ಸ್ ಭರ್ಜರಿ ಗೆಲುವು, ನಿಖಿಲ್ ಕುಮಾರಸ್ವಾಮಿ ಸೋಲು...

ಚನ್ನಪಟ್ಟಣ ಉಪಚುನಾವಣೆ ನಿಖಿಲ್ ಕುಮಾರಸ್ವಾಮಿ ಅವರಿಗೆ ಭೀಕರ ಆಘಾತ ನೀಡಿದ್ದು ಜೆಡಿಎಸ್ ನಾಯಕರು ಫಲಿತಾಂಶದ ತೀವ್ರತೆ ನೋಡಿ ಬೆಚ್ಚಿಬಿದ್ದಿದ್ದಾರೆ. ಅಂದಹಾಗೆ ಸಿಪಿವೈ ಅಂದ್ರೆ ಸಿಪಿ ಯೋಗೇಶ್ವರ್ & ನಿಖಿಲ್ ಚನ್ನಪಟ್ಟಣ ಉಪಚುನಾವಣೆ ಅಖಾಡದಲ್ಲಿ ತೊಡೆತಟ್ಟಿ, ಗೆಲುವಿಗಾಗಿ ಮುಂದೆ ನುಗ್ಗಿದ್ದರು.

ಚನ್ನಪಟ್ಟಣ ಗೆಲ್ಲಬೇಕು ಎಂಬುದು ಕಾಂಗ್ರೆಸ್ & ಜೆಡಿಎಸ್ ಪಕ್ಷಗಳಿಗೆ ಬಿಗ್ ಚಾಲೆಂಜ್ ಆಗಿತ್ತು. ಅದರಲ್ಲೂ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಗೆದ್ದು, ಶಾಸಕರಾಗಿ ವಿಧಾನಸಭೆಯ ಪ್ರವೇಶ ಮಾಡುವುದು ಗ್ಯಾರಂಟಿ ಎನ್ನಲಾಗಿತ್ತು. ಆದ್ರೆ ಈಗ ಎಲ್ಲಾ ಉಲ್ಟಾ ಹೊಡೆಯುತ್ತಿದ್ದು, ಚನ್ನಪಟ್ಟಣ ಕ್ಷೇತ್ರದಲ್ಲಿ ಡಿಕೆ ಬ್ರದರ್ಸ್ ಭರ್ಜರಿ ಗೆಲುವು & ನಿಖಿಲ್ ಕುಮಾರಸ್ವಾಮಿ ಸೋಲು ಅಂತಾ...

Nikhil Kumaraswamy Is Facing Fear Of Loss In Channapatna By-Election

ಡಿಕೆ ಬ್ರದರ್ಸ್ ಭರ್ಜರಿ ಗೆಲುವು?

ಚನ್ನಪಟ್ಟಣ ಉಪಚುನಾವಣೆ ಕದನ ಹೇಗೆ ಆಗಿತ್ತು ಅಂದ್ರೆ ಇಲ್ಲಿ ಗೆದ್ದೇ ಗೆಲ್ಲಬೇಕು ಎಂಬುದು ಕಾಂಗ್ರೆಸ್ ನಾಯಕರ ಹಠವಾಗಿತ್ತು. ಇನ್ನೊಂದು ಕಡೆ ತಮ್ಮ ಮಗನ ರಾಜಕೀಯ ಭವಿಷ್ಯಕ್ಕೆ ಚನ್ನಪಟ್ಟಣ ಉಪಚುನಾವಣೆ ಬಹುಮುಖ್ಯ ಎಂಬುದು ಕುಮಾರಸ್ವಾಮಿ ಅವರ ಲೆಕ್ಕಾಚಾರ ಆಗಿತ್ತು. ಹೀಗೆ ಕಾಂಗ್ರೆಸ್ & ಜೆಡಿಎಸ್ ನಡುವೆ ನೇರವಾದ ಯುದ್ಧವೂ ಆರಂಭವಾಗಿ, ಗೆದ್ದೇ ಗೆಲ್ಲಬೇಕು ಎಂಬ ಹುಮ್ಮಸ್ಸಿನಲ್ಲಿ ಎರಡೂ ಪಕ್ಷಗಳು ಮುಂದೆ ನುಗ್ಗಿದ್ದವು.

ಸೇಡು ತೀರಿಸಿಕೊಂಡ ಡಿಕೆ ಬ್ರದರ್ಸ್?

ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆ ಅಖಾಡದಲ್ಲಿ, ಡಿ.ಕೆ. ಸುರೇಶ್ ಅವರ ವಿರುದ್ಧ, ಎಚ್.ಡಿ. ಕುಮಾರಸ್ವಾಮಿ ಅವರ ಸಂಬಂಧಿಯೂ ಆಗಿರುವ ಜಯದೇವ ಆಸ್ಪತ್ರೆಯ ಮಾಜಿ ಮುಖ್ಯಸ್ಥ ಮಂಜುನಾಥ್ ಅವರನ್ನ ಕಣಕ್ಕೆ ಇಳಿಸಲಾಗಿತ್ತು. ಈ ಯುದ್ಧದಲ್ಲಿ ಭಾರಿ ದೊಡ್ಡ ಹಿನ್ನಡೆ ಅನುಭವಿಸಿ ಸೋಲು ಕಂಡಿದ್ದರು ಡಿ.ಕೆ. ಸುರೇಶ್. ಹೀಗೆ ಡಿ.ಕೆ. ಸುರೇಶ್ ಅವರ ಸೋಲಿನಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ಪಾತ್ರ ದೊಡ್ಡದಾಗಿತ್ತು. ಇದೀಗ ಅದೇ ಸೇಡಿಗೆ ಸೇಡು ತೀರಿಸಿಕೊಂಡಿದ್ದಾರೆ ಡಿಕೆ ಬ್ರದರ್ಸ್ ಎಂದು ಚರ್ಚೆ ಮಾಡಲಾಗುತ್ತಿದೆ.

3ಕ್ಕೆ 3 ಕ್ಷೇತ್ರಗಳಲ್ಲೂ ಕಾಂಗ್ರೆಸ್...

ಚನ್ನಪಟ್ಟಣ, ಸಂಡೂರು & ಶಿಗ್ಗಾವಿ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆದಿತ್ತು. ಹೀಗಾಗಿ ಇಡೀ ದೇಶದ ಗಮನ ಈ ಕ್ಷೇತ್ರಗಳ ಮೇಲೆ ನೆಟ್ಟಿತ್ತು. ಈಗಾಗಲೇ ಗೆಲುವಿಗಾಗಿ ದೊಡ್ಡ ಹೋರಾಟ ನಡೆಸಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಗೆದ್ದು ಬೀಗಲು ಏನೇನು ಬೇಕೋ ಅದೆಲ್ಲವನ್ನೂ ಮಾಡಿದ್ದರು.

ಆದರೆ ಅಂತಿಮವಾಗಿ 3ಕ್ಕೆ 3 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆದ್ದು ಬೀಗುವ ಲಕ್ಷಣ ಕಾಣಿಸುತ್ತಿದ್ದು, ಈಗಾಗಲೇ ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ. ಇದೇ ಸಮಯದಲ್ಲಿ, ಚನ್ನಪಟ್ಟಣ & ಶಿಗ್ಗಾವಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸದ್ಯಕ್ಕೆ ಭಾರಿ ಮುನ್ನಡೆಯನ್ನ ಕಾಯ್ದುಕೊಂಡಿದ್ದು ಗೆಲ್ಲುವುದು ಬಹುತೇಕ ಫೈನಲ್ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+