NICE ಹಗರಣ: ಯೋಜನೆಯನ್ನು ಸರ್ಕಾರವೇ ವಶಕ್ಕೆ ಪಡೆದು, ಅಕ್ರಮ ಟೋಲ್ ರದ್ದುಪಡಿಸಲಿ ಜೆಡಿಎಸ್ ಆಗ್ರಹ

ಕರ್ನಾಟಕದ ಅತಿದೊಡ್ಡ ಹಗರಣ 'ನೈಸ್' ಯೋಜನೆಯನ್ನು ಸರ್ಕಾರವೇ ಮುಟ್ಟುಗೋಲು ಹಾಕಿಕೊಳ್ಳಲಿ ಎಂದು ಜೆಡಿಎಸ್ ಪಕ್ಷವು ಆಗ್ರಹಿಸಿದೆ. ಈ ಸಂಬಂಧ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಜೆಡಿಎಸ್ ಪಕ್ಷವು 25 ವರ್ಷಗಳಲ್ಲಿ 111 ಕಿ.ಮೀ ರಸ್ತೆಯ ಪೈಕಿ ಕೇವಲ 5 ಕಿ.ಮೀ ನಿರ್ಮಿಸಿ, 20,000ಕ್ಕೂ ಹೆಚ್ಚು ಎಕರೆ ರೈತರ ಭೂಮಿ ಲೂಟಿ ಮಾಡಿರುವ ನೈಸ್ ಯೋಜನೆಯನ್ನು ಹೈಕೋರ್ಟ್ ರಾಜ್ಯದ ಅತಿದೊಡ್ಡ ಹಗರಣ ಎಂದು ತರಾಟೆಗೆ ತೆಗೆದುಕೊಂಡಿದೆ. ಕರ್ನಾಟಕದ ಜನತೆಯ ಆಗ್ರಹ : ಅದರಲ್ಲೂ ಮುಖ್ಯವಾಗಿ ತೆರಿಗೆ ಕಟ್ಟುವ ಜನರಿಗೆ ಮತ್ತು ರೈತರಿಗೆ ಲೆಕ್ಕ ಕೊಡುವ ಜವಾಬ್ದಾರಿ ರಾಜ್ಯ ಸರ್ಕಾರಕ್ಕಿದೆ.

ನೈಸ್ ಯೋಜನೆಯನ್ನು ರಾಜ್ಯ ಸರ್ಕಾರ ತಕ್ಷಣವೇ ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು. ಕಾನೂನುಬಾಹಿರ ಟೋಲ್ ಸುಂಕ ವಸೂಲಿಯನ್ನು ಕೂಡಲೇ ರದ್ದುಗೊಳಿಸಬೇಕು. ಹೈಕೋರ್ಟ್ ನಿರ್ದೇಶನದಂತೆ ನೈಸ್ ಸಂಸ್ಥೆಯ ಖಾತೆಗಳ 'ಫೋರೆನ್ಸಿಕ್ ಆಡಿಟ್' ನಡೆಸಬೇಕು. ರೈತರ ಭೂಮಿಯನ್ನು ಅಕ್ರಮವಾಗಿ ರಿಯಲ್ ಎಸ್ಟೇಟ್ ಮಾಡಿರುವ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು. ನೈಸ್ ಹಗರಣದ ಬಗ್ಗೆ ಪ್ರತಿಯೊಬ್ಬ ನಾಗರಿಕರಿಗೆ ಸತ್ಯ ತಿಳಿಯಬೇಕಿದೆ. ಕರ್ನಾಟಕ ಸರ್ಕಾರದಿಂದ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಸಿಗಲೇಬೇಕಿದೆ. ನಾಡಿನ ರೈತರು ಮತ್ತು ಜನರ ಪರವಾಗಿ, ರಾಜ್ಯದ ಸಂಪತ್ತಿನ ರಕ್ಷಣೆಗಾಗಿ ಜೆಡಿಎಸ್ ಪಕ್ಷದ ಹೋರಾಟವೂ ಸಹ ಮುಂದುವರಿಯಲಿದೆ ಎಂದು ಜೆಡಿಎಸ್ ಪಕ್ಷವು ಹೇಳಿದೆ.

Nice

ನೈಸ್ (NICE) ಯೋಜನೆ ಆರಂಭವಾಗಿ 30 ವರ್ಷಗಳಾದರೂ, ಭೂಮಿ ಕಳೆದುಕೊಂಡ ರೈತರ ಕಣ್ಣೀರು ಒರೆಸಲು ಸರಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ. ರೈತರಿಗೆ ಪರಿಹಾರ ನೀಡುವ ಬದಲು ಲೂಟಿಕೋರ ನೈಸ್ ಕಂಪನಿಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ರೆಡ್ ಕಾರ್ಪೆಟ್ ಹಾಡುತ್ತಿರುವುದು ನಾಡಿನ ದುರಂತ. ಅನ್ನದಾತರನ್ನು ಬೀದಿಗೆ ತಳ್ಳಿರುವ ಈ ಸರಕಾರದ ಕ್ರಮವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಯಾವುದೇ ಕಡ್ಡಾಯ ಅನುಮತಿ ಇಲ್ಲದೆ, ಕೇವಲ 5 ಕಿ.ಮೀ ರಸ್ತೆ ನಿರ್ಮಿಸಿ ₹2,000 ಕೋಟಿಗೂ ಅಧಿಕ ಅಕ್ರಮ ಟೋಲ್ ವಸೂಲಿ ಮಾಡಲಾಗಿದೆ. ಈ ಹಿಂದೆ ಭೂಮಿ ವಿಚಾರದಲ್ಲಿ ಸರಕಾರದ ವಿರುದ್ಧವೇ ತೀರ್ಪು ನೀಡಿದ್ದ ನಿವೃತ್ತ ನ್ಯಾಯಾಧೀಶರನ್ನೇ ಈಗ ಬಿಡದಿ ಟೌನ್‌ಶಿಪ್ ಸಮಿತಿಯ ಮುಖ್ಯಸ್ಥರನ್ನಾಗಿ ಮಾಡಿರುವ ಸರಕಾರದ ಹಿಂದಿನ ಅಸಲಿ ಉದ್ದೇಶವೇನು ಎಂದು ಜೆಡಿಎಸ್ ಪ್ರಶ್ನೆ ಮಾಡಿದೆ.

ಅಧಿಕಾರಕ್ಕೆ ಬಂದ ದಿನದಿಂದಲೂ ರೈತರನ್ನು ಕಡೆಗಣಿಸಿ, ಕೇವಲ ಲ್ಯಾಂಡ್ ಮಾಫಿಯಾ ಮತ್ತು ಲೂಟಿಯ ಕಡೆಗೆ ಗಮನ ಹರಿಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಅನ್ನದಾತರ ಶಾಪ ತಟ್ಟದೆ ಇರದು. ನೈಸ್ ಅಕ್ರಮಗಳ ವಿರುದ್ಧ ಹಾಗೂ ಸಂತ್ರಸ್ತ ರೈತರ ನ್ಯಾಯಕ್ಕಾಗಿ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಮ್ಮ ಹೋರಾಟ ನಿರಂತರ ಎಂದೂ ಜೆಡಿಎಸ್ ಪಕ್ಷ ಹೇಳಿದೆ.

ಗೃಹಲಕ್ಷ್ಮಿ ಯೋಜನೆ ಹಳ್ಳ ಹಿಡಿದಿದೆ

ಇನ್ನು ಗ್ಯಾರಂಟಿ ಹೆಸರಿನಲ್ಲಿ ನಾಡಿನ ತಾಯಂದಿರ ಕಿವಿಗೆ ಹೂವು ಇಡುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಈಗ 'ಗೃಹಲಕ್ಷ್ಮಿ' ಯೋಜನೆಯನ್ನು ಸಂಪೂರ್ಣವಾಗಿ ಹಳ್ಳ ಹಿಡಿಸಿದೆ. ಪ್ರತಿ ತಿಂಗಳು ಮಹಿಳೆಯರ ಕೈಸೇರಬೇಕಿದ್ದ ₹2,000 ಹಣ ಮರೀಚಿಕೆಯಾಗಿದೆ. ನಮ್ಮ ತಾಯಂದಿರು ತಮ್ಮದೇ ಹಕ್ಕಿನ ಹಣಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವ ದಯನೀಯ ಸ್ಥಿತಿ ನಿರ್ಮಾಣವಾಗಿದೆ.

ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ಈ ಪತ್ರಿಕಾ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿರುವಂತೆ, ಈಗ ಮನೆ-ಮನೆ ಸಮೀಕ್ಷೆ, ಸೇವಾ ಸಿಂಧು, ಆ್ಯಪ್, ಬಯೋಮೆಟ್ರಿಕ್, ಮತ್ತು ಫೇಸ್ ಆಥೆಂಟಿಕೇಶನ್ ಎಂಬ ಹೊಸ ನಾಟಕ ಶುರು ಮಾಡಿದ್ದೀರಿ. ಇದು ಖಜಾನೆ ಖಾಲಿಯಾಗಿರುವುದನ್ನು ಮುಚ್ಚಿಹಾಕಲು ಮತ್ತು ಹಣ ಪಾವತಿ ಮಾಡುವುದನ್ನು ತಪ್ಪಿಸಿಕೊಳ್ಳಲು ಹೆಣೆದಿರುವ ಕುತಂತ್ರವಷ್ಟೇ.

ಮೃತರ ಖಾತೆಗೆ ಕೋಟಿ-ಕೋಟಿ ಹಣ: ಜೂನ್ 2026ರವರೆಗೆ ಮೃತಪಟ್ಟ 3.13 ಲಕ್ಷ ಫಲಾನುಭವಿಗಳ ಪೈಕಿ 1.10 ಲಕ್ಷ ಜನರ ಖಾತೆಗೆ ಮರಣದ ನಂತರವೂ ₹117.31 ಕೋಟಿ ಜಮೆ ಮಾಡಲಾಗಿದೆ.

ಹಣಕಾಸು ನಿರ್ವಹಣೆಯಲ್ಲಿ ಅಸಮರ್ಥತೆ: ಅಕ್ರಮವಾಗಿ ಜಮೆಯಾದ ಹಣದಲ್ಲಿ ಸರ್ಕಾರದ ಬೊಕ್ಕಸಕ್ಕೆ ವಾಪಸ್ ಬಂದಿರುವುದು ಕೇವಲ ₹40.07 ಕೋಟಿ ಮಾತ್ರ. ಸತ್ತವರ ಖಾತೆಗೆ ಹಣ ಹೋಗುವಾಗ ನಿದ್ರಿಸುತ್ತಿದ್ದ ನಿಮ್ಮ ಸರ್ಕಾರ, ಬಡ ಜೀವಂತ ತಾಯಂದಿರಿಗೆ ಹಣ ನೀಡುವಾಗ ಮಾತ್ರ ಕುಂಟು ನೆಪಗಳನ್ನು ಹೇಳುತ್ತಿರುವುದು ನಾಚಿಕೆಗೇಡು.

ಕಾಲಹರಣದ ತಂತ್ರ: ಬೊಕ್ಕಸ ಖಾಲಿಯಾಗಿರುವುದರಿಂದ, ಫಲಾನುಭವಿಗಳ ಸಂಖ್ಯೆಯನ್ನು ಕಡಿತಗೊಳಿಸಲು ಈ ಮರುಪರಿಶೀಲನೆಯ ನಾಟಕವಾಡುತ್ತಿದ್ದೀರಾ.ಪ್ರಚಾರದ ಗೀಳು ಬಿಟ್ಟು, ತಕ್ಷಣವೇ ರಾಜ್ಯದ ತಾಯಂದಿರ ಬಾಕಿ ಹಣವನ್ನು ಬಿಡುಗಡೆ ಮಾಡಿ. ಮನೆ-ಮನೆಗೆ ಸಮೀಕ್ಷೆಗಿಂತ ಮೊದಲು, ಮನೆ-ಮನೆಗೆ ಬಾಕಿ ಹಣ ತಲುಪಿಸಿ ಎಂದೂ ಜೆಡಿಎಸ್ ಪಕ್ಷವು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+