ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ವರ್ಷ ಆಚರಿಸುವವರಿಗೆ ಬೆಂಗಳೂರು ಪೊಲೀಸರ ಎಚ್ಚರಿಕೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 28: ಹೊಸ ವರ್ಷಾಚರಣೆಗೆ ಪ್ಲಾನ್ ಮಾಡುತ್ತಿರುವ ಬೆಂಗಳೂರಿಗರಿಗೆ, ಮೋಜು ಮಾಡಲೆಂದು ಡಿಸೆಂಬರ್ 31ರ ರಾತ್ರಿ ಬೆಂಗಳೂರಿಗೆ ಬರಬೇಕೆಂದುಕೊಂಡಿರುವ ಹೊರಗಿನವರಿಗೆ ಬೆಂಗಳೂರು ಪೊಲೀಸರು ಕೆಲವು ಎಚ್ಚರಿಕೆಗಳನ್ನು ನೀಡಿದ್ದಾರೆ.

ಹೊಸ ವರ್ಷ ಆಚರಣೆಗೆ ಹೆಚ್ಚು ಜನರ ಗುಂಪು ಸೇರುವ ಕಡೆ ಡ್ರೋನ್‌ ಕ್ಯಾಮೆರಾ ಬಳಸಿ ಪುಂಡರ ಮೇಲೆ ನಿಗಾ ವಹಿಸಲು ಪೊಲೀಸರು ನಿಶ್ಚಯಿಸಿದ್ದಾರೆ. ಡ್ರೋನ್ ಕ್ಯಾಮೆರಾ ಕಣ್ಗಾವಲಿನಲ್ಲಿ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಮಾಡಬೇಕಾಗಿದೆ.

ಕಳೆದ ಡಿಸೆಂಬರ್ 31ರ ರಾತ್ರಿ ಹೊಸ ವರ್ಷಾಚರಣೆ ಸಮಯ ಕೆಲವು ಅಹಿತಕರ ಘಟನೆಗಳು ನಡೆದಿದ್ದ ಕಾರಣ ಈ ಕೆಲವು ಮುನ್ನೆಚ್ಚೆರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಎಲ್ಲೆಂದರಲ್ಲಿ ನ್ಯೂ ಇಯರ್ ಪಾರ್ಟಿ ಮಾಡುವಂತಿಲ್ಲ: ಗಂಗಾಂಬಿಕೆ ಎಲ್ಲೆಂದರಲ್ಲಿ ನ್ಯೂ ಇಯರ್ ಪಾರ್ಟಿ ಮಾಡುವಂತಿಲ್ಲ: ಗಂಗಾಂಬಿಕೆ

ಡಿಸೆಂಬರ್ 31 ರಂದು ಎಂಜಿ ರಸ್ತೆ, ಇಂದಿರಾನಗರ, ಚರ್ಚ್‌ ಸ್ಟ್ರೀಟ್, ಬ್ರಿಗೇಡ್ ರಸ್ತೆ, ಕೋರಮಂಗಲ ಮುಂತಾದ ಕಡೆಗಳಲ್ಲಿ ಡ್ರೋಣ್‌ಗಳು ಕಣ್ಗಾವಲು ಕಾಯಲಿವೆ. ಅಷ್ಟೆ ಅಲ್ಲದೆ, ನಗರ ಹಾಗೂ ಹೊರ ವಲಯದಲ್ಲಿ ರೇವ್ ಪಾರ್ಟಿಗಳನ್ನು ತಡೆಯಲು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗಸ್ತಿಗೆ 1300 ಬೈಕ್, 272 ಹೊಯ್ಸಳ

ಗಸ್ತಿಗೆ 1300 ಬೈಕ್, 272 ಹೊಯ್ಸಳ

400 ಗಸ್ತು ಬೈಕ್‌ಗಳು, 900 ಹೊಸ ಗಸ್ತು ಬೈಕ್‌ಗಳು, 272 ಹೊಯ್ಸಳ ವಾಹನಗಳು, ರಾತ್ರಿಯಿಡೀ ಡಿಸೆಂಬರ್ 31 ರಂದು ನಗರದಾದ್ಯಂತ ಗಸ್ತು ತಿರುಗಲಿವೆ. ಯಾರಿಗಾದರೂ ತೊಂದರೆಯಾದರೆ ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಬೇಕೆಂದು ಪೊಲೀಸ್ ನಗರ ಆಯುಕ್ತರು ಹೇಳಿದ್ದಾರೆ.

ಮೈಸೂರಿನಲ್ಲಿ ಹೊಸವರ್ಷಾಚರಣೆ ನೆಪದಲ್ಲಿ ಪುಂಡಾಟಿಕೆ ನಡೆಸಿದರೆ ಹುಷಾರ್! ಮೈಸೂರಿನಲ್ಲಿ ಹೊಸವರ್ಷಾಚರಣೆ ನೆಪದಲ್ಲಿ ಪುಂಡಾಟಿಕೆ ನಡೆಸಿದರೆ ಹುಷಾರ್!

ಮದ್ಯಪ್ರಿಯರ ಮೇಲೆ ಕಣ್ಗಾವಲು

ಮದ್ಯಪ್ರಿಯರ ಮೇಲೆ ಕಣ್ಗಾವಲು

ಡಿಸೆಂಬರ್ 31ರ ರಾತ್ರಿ ಮದ್ಯಪ್ರಿಯರಿಗೆ ಭರ್ಜರಿ ಶಾಕ್ ಕೊಡಲು ಪೊಲೀಸರು ತಯಾರಿ ಮಾಡಿಕೊಂಡಿದ್ದಾರೆ. ಅಂದು ರಾತ್ರಿ 8 ಗಂಟೆಯಿಂದಲೇ ಪೊಲೀಸರ ವಿಶೇಷ ತಂಡಗಳು ಕುಡಿದು ವಾಹನ ಚಲಾಯಿಸುವವರ ಮೇಲೆ ಕೇಸು ದಾಖಲಿಸಲು ಸಜ್ಜಾಗಿರುತ್ತಾರೆ.

ಡಿ.31ರಂದು ತಡರಾತ್ರಿ 2 ಗಂಟೆವರೆಗೂ ಪಾರ್ಟಿಗೆ ಅವಕಾಶ ಡಿ.31ರಂದು ತಡರಾತ್ರಿ 2 ಗಂಟೆವರೆಗೂ ಪಾರ್ಟಿಗೆ ಅವಕಾಶ

ಪೊಲೀಸರಿಂದ ಅನುಮತಿ ಪಡೆಯಬೇಕು

ಪೊಲೀಸರಿಂದ ಅನುಮತಿ ಪಡೆಯಬೇಕು

ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಟಿ ಮಾಡುವವರು ಸಹ ಪೊಲೀಸರಿಂದ ಮೊದಲೇ ಅನುಮತಿ ಪಡೆಯಬೇಕು ಎಂದು ಆಯುಕ್ತರು ನಿಯಮ ಮಾಡಿದ್ದಾರೆ. ಪಬ್, ಬಾರ್‌ಗಳಲ್ಲಿ ಮಹಿಳೆಯರಿಗೆ ಭದ್ರತೆಗೆ ಬಾರ್‌, ರೆಸ್ಟೋರೆಂಟ್ ಮಾಲೀಕರೆ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರು ಹೇಳಿದ್ದಾರೆ.

ರಾತ್ರಿ 2 ಗಂಟೆ ವರೆಗೂ ಮದ್ಯ ಮಾರಾಟ

ರಾತ್ರಿ 2 ಗಂಟೆ ವರೆಗೂ ಮದ್ಯ ಮಾರಾಟ

ಡಿಸೆಂಬರ್ 31 ರಂದು ರಾತ್ರಿ 2 ಗಂಟೆ ವರೆಗೂ ಮದ್ಯ ವಿತರಣೆ ಅವಧಿಯನ್ನು ವಿಸ್ತರಿಸಲಾಗಿದೆ. ಆದರೆ ಎರಡು ಗಂಟೆ ನಂತರ ಮದ್ಯ ವಿತರಿಸುವ ರೆಸ್ಟಾರೆಂಟ್, ಪಬ್, ಬಾರ್‌ಗಳ ಮೇಲೆ ಕೇಸು ದಾಖಲಿಸಲು ಸಹ ಪೊಲೀಸರಿಗೆ ಮತ್ತು ಅಬಕಾರಿ ಇಲಾಖೆಯವರಿಗೆ ಸೂಚನೆ ನೀಡಲಾಗಿದೆ.

ಕ್ಯಾಬ್ ಸಂಸ್ಥೆಗಳ ಜೊತೆ ಮಾತುಕತೆ

ಕ್ಯಾಬ್ ಸಂಸ್ಥೆಗಳ ಜೊತೆ ಮಾತುಕತೆ

ಖಾಸಗಿ ಟ್ಯಾಕ್ಸಿ ಓಲಾ, ಊಬರ್, ಮೆರು ಕಂಪೆನಿಗಳ ಜೊತೆಗೆ ಈಗಾಗಲೇ ಸಭೆ ನಡೆಸಲಾಗಿದ್ದು, ಸೇವೆಯನ್ನು ವಿಸ್ತರಿಸುವಂತೆ ಹೇಳಲಾಗಿದೆ. ಅಷ್ಟೆ ಅಲ್ಲದೆ, ಅಂದು ಟ್ಯಾಕ್ಸಿ ಓಡಿಸುವ ಚಾಲಕರ ಮಾಹಿತಿಯನ್ನು ಇಲಾಖೆಯ ಜೊತೆ ಹಂಚಿಕೊಳ್ಳುವಂತೆ ಹೇಳಲಾಗಿದೆ ಎಂದು ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಹೇಳಿದ್ದಾರೆ.

10,000 ಕಾನ್ಸ್ಟೇಬಲ್ ನೇಮಕ

10,000 ಕಾನ್ಸ್ಟೇಬಲ್ ನೇಮಕ

ಡಿಸೆಂಬರ್ 31ರ ರಾತ್ರಿ ಬೆಂಗಳೂರಿನ ಭದ್ರತೆಗೆ 5 ಐಜಿಪಿ, 15 ಡಿಸಿಪಿ, 45 ಎಸಿಪಿ, 220 ಇನ್‌ಸ್ಪೆಕ್ಟರ್‌ಗಳು, 430 ಪಿಎಸ್‌ಐ, 800 ಎಎಸ್‌ಐಗಳು, 10,000 ಕಾನ್ಸ್ಟೇಬಲ್‌ಗಳು, 1500 ಗೃಹ ರಕ್ಷಕ ದಳ ಸಿಬ್ಬಂದಿ, 1000 ಸಿವಿಲ್ ಡಿಫೆನ್ಸ್‌ ಸಿಬ್ಬಂದಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

English summary
Bengaluru police deployed 10,000 constables for December 31 night. Police using drone to keep an eye on New year parties in public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X