ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

New Year celebrations: ಮೆಟ್ರೋ ನಗರಗಳಲ್ಲಿ ಬೆಂಗಳೂರಿನಲ್ಲೇ ಕೇವಲ 78 ಡಿಡಿ ಕೇಸ್: ಸಂಚಾರಿ ಪೊಲೀಸ್

|
Google Oneindia Kannada News

ಬೆಂಗಳೂರು, ಜನವರಿ 02: ಹೊಸ ವರ್ಷಾಚರಣೆ ವೇಳೆ ದೇಶದಲ್ಲಿ ಮೆಟ್ರೋ ನಗರಗಳ ಪೈಕಿ ಬೆಂಗಳೂರಿನಲ್ಲೇ ಅತ್ಯಂತ ಕಡಿಮೆ ಡ್ರಿಂಕ್ ಆಂಡ್ ಡ್ರೈವ್‌ ಪ್ರಕರಣಗಳುವ ವರದಿಯಾಗಿವೆ.

ಬೆಂಗಳೂರು ನಗರ ಸಂಚಾರ ಪೊಲೀಸರ ಮಾಹಿತಿ ಪ್ರಕಾರ, ಬೆಂಗಳೂರಿನಲ್ಲಿ ಒಟ್ಟು 78 ಮಂದಿ ಮಾತ್ರ ಡ್ರಿಂಕ್ ಆಂಡ್ ಡ್ರೈವ್ ಪ್ರಕರಣಗಳು ವರದಿಯಾಗಿವೆ. ಇಷ್ಟು ಕಡಿಮೆ ಪ್ರಮಾಣದಲ್ಲಿ ಡ್ರಿಂಕ್ ಆಂಡ್ ಡ್ರೈವ್ ನಿಯಮ ಉಲ್ಲಂಘನೆ ಆಗುವ ಮೂಲಕ ಬೆಂಗಳೂರು ಇತರ ಮೆಟ್ರೋ ನಗರಗಳ ಪೈಕಿ ಬೆಂಗಳೂರು ಅತ್ಯಂದ ಕಳೆಸ್ಥಾನದಲ್ಲಿದೆ. ಈ ಕಾರಣಕ್ಕೆ ಬೆಂಗಳೂರು ನಗರ ಪೊಲೀಸರು ನಗರ ನಿವಾಸಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

Year Ender 2022 : ಬೆಂಗಳೂರಲ್ಲಿ ಡ್ರಿಂಕ್ & ಡ್ರೈವ್ ಕೇಸ್‌ನಲ್ಲಿ ದಾಖಲೆ Year Ender 2022 : ಬೆಂಗಳೂರಲ್ಲಿ ಡ್ರಿಂಕ್ & ಡ್ರೈವ್ ಕೇಸ್‌ನಲ್ಲಿ ದಾಖಲೆ

ಹೊಸ ವರ್ಷದ ಮುನ್ನಾದಿನದ ಭಾರತದ ಮೆಟ್ರೋ ನಗರಗಳಲ್ಲಿ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಕುಡಿದು ವಾಹನ ಚಲಾಯಿಸುವುದನ್ನು ತಡೆಯಲು ಹಲವಾರು ಕ್ರಮಗಳನ್ನು ಕೈಗೊಂಡಿರುತ್ತಾರೆ. ಮದ್ಯ ಸೇವಿಸಿ ವಾಹನ (ಡಿಡಿ) ಚಲಾಯಿಸುವವರನ್ನು ಹಿಡಿಯಲು ನಗರಗಳಾದ್ಯಂತ ಭಾರೀ ಪೊಲೀಸ್ ನಿಯೋಜನೆ ಮಾಡಲಾಗಿತ್ತು. ಬೆಂಗಳೂರಿನಲ್ಲೂ ಅನೇಕ ಕಡೆಗಳಲ್ಲಿ ತಪಾಸಣೆಗೆ ಚೆಕ್ ಪೋಸ್ಟ್‌ಗಳನ್ನು ಹಾಕಲಾಗಿತ್ತು. ಈ ವೇಳೆ ದಾಖಲಾದ ಪ್ರಕರಣಗಳನ್ನು ಗಮನಿಸಿದರೆ ಮುಂಬೈ ಮತ್ತು ದೆಹಲಿಯಲ್ಲಿ ದಾಖಲಾದ ಪ್ರಕರಣಗಳಿಗಿಂತ ಬೆಂಗಳೂರಿನಲ್ಲಿ ತೀರಾ ಕಡಿಮೆ ಎಂದು ತಿಳಿದು ಬಂದಿದೆ. ಹೀಗೆಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂಎನ್ ಅನುಚೇತ್ ಧನ್ಯವಾದ ತಿಳಿಸಿದ್ದಾರೆ.

New Year: Only 78 Drink And Drive Cases Registered In Bengaluru Among Metro Cities In Country

ದೆಹಲಿಯಲ್ಲಿ 300, ಮುಂಬೈನಲ್ಲಿ 156 ಡಿಡಿ ಕೇಸ್‌

ಅದೇ ರೀತಿ ದೇಶದ ಇತರ ಮೆಟ್ರೋ ನಗರಗಳಲ್ಲಿನ ಪ್ರಕರಣಗಳನ್ನು ನೋಡುವುದಾದರೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ಹೊಸ ವರ್ಷದ ಮುನ್ನಾ ದಿನದಂದು ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಟ್ರಾಫಿಕ್ ಪೊಲೀಸರು 300 ಕ್ಕೂ ಹೆಚ್ಚು ಚಲನ್ ಗಳನ್ನು ಹೊರಡಿಸಿದ್ದಾರೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 12 ಪಟ್ಟು ಹೆಚ್ಚಾಗಿದೆ. ಒಟ್ಟಾರೆಯಾಗಿ, ರಾಷ್ಟ್ರ ರಾಜಧಾನಿಯಲ್ಲಿ ವಿವಿಧ ಸಂಚಾರ ಉಲ್ಲಂಘನೆಗಾಗಿ 1,329 ಚಲನ್‌ಗಳನ್ನು ನೀಡಲಾಗಿದೆ.

ಇದರಲ್ಲಿ ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ 318, ಅಪಾಯಕಾರಿ ಚಾಲನೆಗಾಗಿ 175, ರಾಂಗ್ ಸೈಡ್‌ನಲ್ಲಿ ಚಾಲನೆ ಮಾಡಿದ್ದಕ್ಕಾಗಿ 55, ಟ್ರಿಪಲ್ ರೈಡಿಂಗ್‌ಗೆ 47, ಸಣ್ಣ ಚಾಲನೆಗೆ 70 ಮತ್ತು ಚಾಲನೆಗಾಗಿ 664 ಹೆಲ್ಮೆಟ್ ಇಲ್ಲದೆ, 53 ವಾಹನಗಳನ್ನು ಸ್ಥಳದಲ್ಲಿ ಜಪ್ತಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಂಬೈ ಪೊಲೀಸರು ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ 156 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಡಿಸೆಂಬರ್ 31ರಂದು ನಗರದಲ್ಲಿ ಅತಿರೇಕವಾಗಿ ವಾಹನ ಚಾಲನೆ ಮಾಡಿದ 66 ಮಂದಿ, ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸಿದ 2,465 ಮಂದಿ, ದ್ವಿಚಕ್ರ ವಾಹನದಲ್ಲಿ ಟ್ರಿಪಲ್ ಸವಾರಿ ಮಾಡಿದ 274 ಮಂದಿ ಹಾಗೂ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ 679 ಮಂದಿ ವಿರುದ್ಧ ಸಂಚಾರಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಬೆಂಗಳೂರು ಮಾದರಿ

ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ವಿಜೃಂಭಣೆಯಿಂದ ಹೊಸ ವರ್ಷಾಚರಣೆ ನಡೆದಿರಲಿಲ್ಲ. ಹೀಗಾಗಿ ಈ ವರ್ಷ ಡಿಸೆಂಬರ್ 31 ರಂದು ರಾತ್ರಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬೀದಿಗಿಳಿದು ಹೊಸ ವರ್ಷವನ್ನು ಸ್ವಾಗತಿಸಿದರು. ಕುಡಿದು, ಕುಣಿದು ಕುಪ್ಪಳಿಸಿದರು. ಎಲ್ಲ ಮೆಟ್ರೋ ನಗರಗಳಲ್ಲಿ ಜನರ ಸುರಕ್ಷತೆ, ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಈ ಭಾರಿ ಬೆಂಗಳೂರು ಡ್ರಿಂಕ್ ಆಂಡ್ ಡ್ರೈವ್ ನಿಯಮ ಉಲ್ಲಂಘನೆ ವಿಚಾರದಲ್ಲಿ ಇತರ ನಗರಗಳಿಗೆ ಮಾದರಿಯಾಗಿದೆ.

English summary
New Year celebrations: Only 78 drink and drive cases were registered in Bengaluru among metro cities in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X