ನಿಗಮ-ಮಂಡಳಿ ನೇಮಕ ಮಾಡದೆ ವಿದೇಶ ಪ್ರವಾಸಕ್ಕೆ ತೆರಳಿದ ಸಿಎಂ

Recommended Video

      ನಿಗಮ-ಮಂಡಳಿ ನೇಮಕ ಮಾಡದೆ ವಿದೇಶ ಪ್ರವಾಸಕ್ಕೆ ತೆರಳಿದ ಸಿಎಂ | Oneindia Kannada

      ಬೆಂಗಳೂರು, ಡಿಸೆಂಬರ್ 29: ಬಹುನಿರೀಕ್ಷಿತ ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಕ್ಕೆ ಸಹಿ ಹಾಕದೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸಿಂಗಾಪುರ ಖಾಸಗಿ ಪ್ರವಾಸಕ್ಕೆ ತೆರಳಿದ್ದಾರೆ.

      ಕಾಂಗ್ರೆಸ್ ಸಚಿವರ ಖಾತೆ ಪುನರ್ ರಚನೆಗೆ ಶಿಫಾರಸ್ಸು ಪಟ್ಟಿಗೆ ತಮ್ಮ ಒಪ್ಪಿಗೆ ನೀಡಿ ರಾಜ್ಯಪಾಲರಿಗೆ ರವಾನಿಸಿರುವ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ನಿಗಮ-ಮಂಡಳಿ ನೇಮಕಾತಿ ಪಟ್ಟಿಗೆ ಒಪ್ಪಿಗೆ ನೀಡದೆ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ.

      ಇದರಿಂದ ನಿಗಮ ಮಂಡಳಿ ನೇನಕಾತಿ ಪ್ರಕ್ರಿಯೆಗೆ ತಾತ್ಕಾಲಿಕ ತಡೆ ಬಿದ್ದಂತಾಗಿದೆ. ದೋಸ್ತಿ ಪಕ್ಷಗಳ ನಡುವೆ ಜಂಗೀ ಕುಸ್ತಿಯ ಬಹಿರಂಗ ಪ್ರದರ್ಶನ ಆರಂಭವಾದ ಲಕ್ಷಣಗಳು ದೊರೆತಿವೆ.

      ಏಕಪಕ್ಷೀಯವಾಗಿ ಕಾಂಗ್ರೆಸ್ ನಿಗಮ ಮಂಡಳಿಗಳ ಪಟ್ಟಿಯನ್ನು ತಯಾರಿಸಿರುವ ಬಗ್ಗೆ ಜಡಿಎಸ್ ವರಿಷ್ಠ ದೇವೇಗೌಡರು ಹಾಗೂ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದರು. ಕುಮಾರಸ್ವಾಮಿ ವಿದೇಶ ಪ್ರವಾಸದಿಂದ ಮರಳಿದ ಬಳಿಕವೇ ನಿಗಮ-ಮಂಡಳಿ ನೇಮಕಕ್ಕೆ ಅನುಮೋದನೆ ದೊರೆಯಲಿದೆ ಎನ್ನಲಾಗುತ್ತಿದೆ.

      New year Celebration HDK fly to Singapore

      ನಿಗಮ ಮಂಡಳಿಗಳ 30 ಸ್ಥಾನಗಳ ಪೈಕಿ 20 ಕಾಂಗ್ರೆಸ್‌ಗೆ 10 ಜೆಡಿಎಸ್‌ಗೆ ಎಂಬ ಒಪ್ಪಂದ ಮಾಡಿಕೊಳ್ಳಲಾಗಿದೆ. ಸಚಿವ ಸ್ಥಾನಗಳು ಲಭ್ಯವಾಗಿರುವ ಪಕ್ಷಕ್ಕೆ ಅದೇ ವ್ಯಾಪ್ತಿಗೆ ಬರುವ ನಿಗಮ ಮಂಡಳಿಗಳು ಹಂಚಿಕೆಯಾಗಬೇಕಿದೆ.ಹೊಸ ವರ್ಷದವರೆಗೆ ಯಾವುದೇ ನಿರ್ಣಯ ಕೈಗೊಳ್ಳಲು ಹಿಂದೇಟು ಹಾಕಿರುವ ಜೆಡಿಎಸ್ ವರಿಷ್ಠರು, ಕಾಂಗ್ರೆಸ್‌ನ ನಡೆಯಬಗ್ಗೆ ಕಾದು ನೋಡುತ್ತಿದ್ದಾರೆ.

      ರಾಜಕೀಯ ಜಂಜಾಟದಿಂದ ಹೊಸ ವರ್ಷದ ಹೊಸ್ತಿಲಿನಲ್ಲಿ ದೂರವಿದ್ದು, ವಿಶ್ರಾಂತಿ ಪಡೆಯುವದರ ಜೊತೆಗೆ ಹೊಸ ವರ್ಷವನ್ನು ಆಚರಿಸಲು ಕುಮಾರಸ್ವಾಮಿ ಕುಟುಂಬ ಸಮೇತರಾಗಿ ವಿದೇಶಕ್ಕೆ ತೆರಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+