Get Updates
Get notified of breaking news, exclusive insights, and must-see stories!

New Year 2025: ಕೆಲವೇ ಕ್ಷಣಗಳಲ್ಲಿ ಹುಬ್ಬಳ್ಳಿಯಲ್ಲಿ ಸಂಭ್ರಮಾಚರಣೆ ಶುರು: ಪೊಲೀಸ್ ಮಾರ್ಗಸೂಚಿಗಳು

ಹುಬ್ಬಳ್ಳಿ, ಡಿಸೆಂಬರ್ 31: ವಾಣಿಜ್ಯ ನಗರಿ ಹುಬ್ಬಳ್ಳಿಯ ಜನ ನೂತನ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿಕೊಳ್ಳಲು ಸಜ್ಜಾಗಿದ್ದಾರೆ. ಸಂಭ್ರಮಾಚರಣೆಗೆ ಜನರು ಪೂರ್ವಸಿದ್ಧತೆ ಮಾಡಿಕೊಂಡಿದ್ದಾರೆ. ಇನ್ನೊಂದು ಕಡೆ ಶಾಂತಿಯುತ ಆಚರಣೆಗೆ ಪೊಲೀಸ್ ಇಲಾಖೆ ಮನರಂಜನೆ ಕಾರ್ಯಕ್ರಮಗಳನ್ನು ನಡೆಸುವ ಹೋಟೆಲ್‌ಗಳ ಮೇಲೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹದ್ದಿನ ಕಣ್ಣಿಟ್ಟಿದೆ. ಯಾವುದೇ ಅಹಿಕರ ಘಟನೆ ನಡೆದಂತೆ ಕಟ್ಟೆಚ್ಚರ ವಹಿಸಿದೆ.

ನಗರದ ಪ್ರತಿಷ್ಠಿತ ಹೋಟೆಲ್‌ಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರ ಮಗಳನ್ನು ಹಮ್ಮಿಕೊಂಡು ಗ್ರಾಹಕರನ್ನು ಸೆಳೆಯಲಿವೆ. ಕೆಲವೆಡೆ ಡಿಜೆ, ಮ್ಯೂಸಿಕ್‌ ಪಾರ್ಟಿಗಳನ್ನು ಆಯೋಜಿಸಲಾಗಿದೆ. ಇಲ್ಲೆಲ್ಲೆ ಅಗತ್ಯ ಸೂಚನೆ ನೀಡಲಾಗಿದೆ. ಅಹಿಕರ ಘಟನೆ ನಡೆಯದಂತೆ, ಎಲ್ಲೆಡೆ ಸಿಸಿಟಿವಿ ಅಳವಡಿಸುವಂತೆ ಪೊಲೀಸ್ ಇಲಾಖೆ ನಿರ್ದೇಶಿಸಿದೆ.

New Year 2025 Celebration in Hubballi Check Preparation and Police Guidelines Tight Security

ಹುಬ್ಬಳ್ಳಿಯಲ್ಲಿ ಹೋಟೆಲ್‌ಗಳು ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿವೆ. ಡಿಜೆ ಸೇರಿದಂತೆ ಅನೇಕ ಮನರಂಜನೆ ಕಾರ್ಯಕ್ರಮ ನಡೆಸಲು, ಭಾಗಿಯಾಗಲು ಯಾವುದೇ ಆಕ್ಷೇಪವಿಲ್ಲ. ವರ್ಷಾಚರಣೆ ನೆಪದಲ್ಲಿ ಕಾನೂನು ಉಲ್ಲಂಘಿಸಿದರೆ, ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಎನ್‌. ಶಶಿಕುಮಾರ್‌ ಎಚ್ಚರಿಕೆ ಕೊಟ್ಟಿದ್ದಾರೆ.

ಹೊಸ ವಷಾಚರಣೆ ಪ್ರಯುಕ್ತ ಕಾರ್ಯಕ್ರಮ ಆಯೋಜಿಸುವ ಹೋಟೆಲ್‌ಗಳು ಆಂತರಿಕ ಭದ್ರತೆ ಕಾಪಾಡಿಕೊಳ್ಳಬೇಕು. ಅದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಂಡಿರಬೇಕು. ಜನ ಸೇರುವ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು. ಗಲಾಟೆಗಳು ನಡೆದರೆ ಹೋಟೆಲ್‌ ಮಾಲೀಕರನ್ನೇ ಜವಾಬ್ದಾರರನ್ನಾಗಿ ಮಾಡುತ್ತೇವೆ.

ಇಂದು (ಡಿ.31) ರಾತ್ರಿ 10ರವರೆಗೆ ಮಾತ್ರ ಡಿಜೆ ಬಳಕೆ ಅವಕಾಶ. ಗೊಸ ವರ್ಷದ ಗುಂಗಿನಲ್ಲಿ ಕೋಮು ಭಾವನೆಗೆ ಪ್ರಚೋದನೆ ನೀಡುವುದು, ಸೋಷಿಯಲ್ ಮೀಡಿಯಾಗಳಲ್ಲಿ ಆಕ್ಷೇಪಾರ್ಹ ಬರಹ, ಫೋಟೋ ಪೋಸ್ಟ್ ಮಾಡುವವರ ಮೇಲೂ ನಿಗಾ ಇಡಲಾಗಿದೆ

ಜನರು ಸೇರುವ ಪ್ರಮುಖ ಸ್ಥಳಗಳಲ್ಲಿ, ವೃತ್ತಗಳಲ್ಲಿ, ಪ್ರದೇಶಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಅಗತ್ಯ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ ಎಂದರು.

ಮತ್ತಿನಲ್ಲಿ ವಾಹನ ಚಲಿಸಿದರೆ ಕ್ರಮ

ಹೊಸ ವರ್ಷಾಚರಣೆ ವೇಳೆ ಪಾನಮತ್ತರಾಗಿ ಬೀದಿಗಿಳಿದರೆ ಕ್ರಮ ಎದುರಿಸಬೇಕಾಗುತ್ತದೆ. ಅದರಲ್ಲೂ ಕುಡಿದು ವಾಹನ ಚಲಾಯಿಸುವವರ ವಿರುದ್ಧ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಲಾಗುವುದು. ಇನ್ನು ವಿವಿಧೆಡೆಯಿಂದ ಪಾರ್ಟಿ ಮುಗಿಸಿ ಮನೆಗೆ ತೆರಳುವವರ ಬಳಿಕ ಆಟೋ ಚಾಲಕರು ದುಪ್ಪಟ್ಟು ಹಣ ವಸೂಲಿ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+