ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ವರ್ಷ 2023: ನಿಯಂತ್ರಣ ತಪ್ಪಿದ ಆಚರಣೆ ಬೆಂಗಳೂರಿನಲ್ಲಿ ಲಾಠಿ ಚಾರ್ಜ್

|
Google Oneindia Kannada News

ಬೆಂಗಳೂರು, ಜ. 01: ಹೊಸ ವರ್ಷ 2023ಕ್ಕೆ ಭರ್ಜರಿಯಾಗಿ ಸ್ವಾಗತ ಕೋರಲಾಗಿದೆ. ದೇಶದ ದೊಡ್ಡ ದೊಡ್ಡ ನಗರಗಳಲ್ಲಿ ಜನರು ಮೋಜು ಮಸ್ತಿಯಲ್ಲಿ ಮುಳುಗಿದ್ದ ಜನ ಸಂಭ್ರಮದಿಂದ ಹೊಸ ವರ್ಷಕ್ಕೆ ಕಾಲಿಟ್ಟಿದ್ದಾರೆ.

ಇನ್ನು ದೆಹಲಿ, ಮುಂಬೈ, ಬೆಂಗಳೂರು ಮತ್ತು ಕೋಲ್ಕತ್ತಾ ಮತ್ತು ಭಾರತದಾದ್ಯಂತದ ಇತರ ದೊಡ್ಡ ನಗರಗಳು 2023ರ ಸ್ವಾಗತಕ್ಕೆ ಬೃಹತ್ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸರು ಲಾಠಿ ಚಾರ್ಜ್ ಮಾಡಿರುವ ಘಟನೆ ಕೂಡ ನಡೆದಿದೆ.

Covid Wave: ನಂದಿ ಬೆಟ್ಟದಲ್ಲಿ 2023 ಹೊಸ ವರ್ಷಾಚರಣೆಗಿಲ್ಲ ಅವಕಾಶ: ನಿರ್ಬಂಧ ಹೇರಿ ಡಿಸಿ ಆದೇಶCovid Wave: ನಂದಿ ಬೆಟ್ಟದಲ್ಲಿ 2023 ಹೊಸ ವರ್ಷಾಚರಣೆಗಿಲ್ಲ ಅವಕಾಶ: ನಿರ್ಬಂಧ ಹೇರಿ ಡಿಸಿ ಆದೇಶ

ಬೆಂಗಳೂರಿನಲ್ಲಿ ಹೊಸ ವರ್ಷದ ಕಾರ್ಯಕ್ರಮಗಳಿಗೆ ಹೆಸರಾಗಿರುವ ಬ್ರಿಗೇಡ್​​ ರೋಡ್​, ಎಂಜಿ ರೋಡ್ ಮತ್ತು ಚರ್ಚ್​ ಸೀಟ್‌ನಲ್ಲಿ ಡಿಸೆಂಬರ್ 31ರ ಮಧ್ಯ ರಾತ್ರಿ ಬೆಂಗಳೂರು ಮಂದಿ ಅದ್ದೂರಿಯಾಗಿ ಕುಣಿದು ಕುಪ್ಪಳಿಸಿ ಹೊಸ ವರ್ಷವನ್ನು ಬರ ಮಾಡಿಕೊಂಡಿದ್ದಾರೆ.

New Year 2023: Police lathi charge in Bengaluru New Year’s celebrations

ಹೊಸ ವರ್ಷದ ಸಂಭ್ರಮದಲ್ಲಿದ್ದ ಕೆಲ ಮದ್ಯಪ್ರಿಯರು ಫುಲ್ ಟೈಟ್ ಆಗಿ ಬ್ರಿಗೇಡ್​​ ರೋಡ್​, ಎಂಜಿ ರೋಡ್ ಮತ್ತು ಚರ್ಚ್​ ಸೀಟ್‌ನಲ್ಲಿ ಎಲ್ಲೆಂದರಲ್ಲಿ ತೂರಾಡುತ್ತಿದ್ದ ದೃಶ್ಯಗಳು ಕಂಡು ಬಂದಿವೆ. ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಎಳೆದುಕೊಂಡು ಓಡಾಡುತ್ತಿದ್ದ ದೃಶ್ಯಗಳು ಕಂಡಿ ಬಂದಿವೆ. ಇನ್ನು, ಈ ಬೃಹತ್ ಜನಸಮೂಹವನ್ನು ಚದುರಿಸಲು ಪೊಲಿಸರು ಹರ ಸಾಹಸ ಪಟ್ಟಿದ್ದಾರೆ..

​ಬ್ರಿಗೇಡ್ ರಸ್ತೆಯ ಎರಡು ಬದಿ ಬ್ಯಾರಿಕೇಡ್ ಹಾಕಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಇಡೀ ರಸ್ತೆಯೂದ್ದಕ್ಕೂ ನೆರೆದಿದ್ದ ಜನರನ್ನು ಒಂದು ಗಂಟ ಎಯ ನಂತರ ಜಾಗ ಖಾಲಿ ಮಾಡಿಸಲು ಪೊಲೀಸರು ಹರ ಸಾಹಸ ಪಡಬೇಕಾಯಿತು. ಜಾಗ ಖಾಲಿ ಮಾಡಿ, ತಮ್ಮ ತಮ್ಮ ಸ್ಥಳಗಳಿಗೆ ತಲುಪುವಂತೆ ಪೊಲೀಸರು ಮೈಕ್ ಮೂಲಕ ಅನೌನ್ಸ್ ಮಾಡುತ್ತಿದ್ದರು.

ಕೊನೆಗೆ ನಿಯಂತ್ರಣ ತಪ್ಪಿ ಜನರನ್ನು ಬ್ರಿಗೇಡ್​​ ರೋಡ್​, ಎಂಜಿ ರೋಡ್ ಮತ್ತು ಚರ್ಚ್​ ಸೀಟ್‌ನಿಂದ ಚದುರಿಸಲು ಬೆಂಗಳೂರು ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು.

ಹೊಸ ವರ್ಷದ ಸಂಭ್ರಮಾಚರಣೆಗೆ ಕೋವಿಡ್ ನಿರ್ಬಂಧಗಳನ್ನು ಸಡಿಲಿಸಿದ ಸುಮಾರು ಎರಡು ವರ್ಷಗಳಲ್ಲಿ ಇದೇ ಮೊದಲು ಇಂತಹ ಜನ ಸಮೂಹಕ್ಕೆ ಸಿಲಿಕಾನ್ ಸಿಟಿ ಸಾಕ್ಷಿಯಾಗಿರುವುದು.

ಈ ವಾರದ ಆರಂಭದಲ್ಲಿ, ರೆಸ್ಟೋರೆಂಟ್‌ಗಳು, ಪಬ್‌ಗಳು, ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳಲ್ಲಿ ಹೊಸ ವರ್ಷದ ಆಚರಣೆಗಳನ್ನು ಆಯೋಜಿಸಲು ಮಧ್ಯರಾತ್ರಿ 1 ಗಂಟೆಯವರೆಗೆ ಮಾತ್ರ ಅನುಮತಿಸಲಾಗಿತ್ತು.

ಇನ್ನು, ರಾಜ್ಯ ಸರ್ಕಾರವು ಭಾನುವಾರದಂದು ಹೆಚ್ಚಿನ ಅಪಾಯದ ರಾಷ್ಟ್ರಗಳಿಂದ ಬರುವ ವಿಮಾನಯಾನಕಾರರಿಗೆ ಹೋಮ್ ಕ್ವಾರಂಟೈನ್ ಅನ್ನು ಕಡ್ಡಾಯಗೊಳಿಸಿದೆ. "ಹೆಚ್ಚಿನ ಅಪಾಯದ ದೇಶಗಳಾದ ಚೀನಾ, ಹಾಂಗ್ ಕಾಂಗ್, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ್ ಮತ್ತು ಥೈಲ್ಯಾಂಡ್‌ನಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರು, ಅವರು ಆಗಮಿಸಿದ ದಿನಾಂಕದಿಂದ 7 ದಿನಗಳವರೆಗೆ ಮನೆಯೊಳಗೆ ಕ್ವಾರಂಟೈನ್ ಆಗಿರಬೇಕು. ಒಮ್ಮೆ ಕೊರೊನ ಸೋಂಕಿಗೆ ಒಳಗಾದರೆ, ಸೋಂಕಿತರಿಗೆ ರಾಜ್ಯ ಕೋವಿಡ್ ಪ್ರೋಟೋಕಾಲ್ ಪ್ರಕಾರ ಚಿಕಿತ್ಸೆ ನೀಡಬೇಕು"ಎಂದು ಆರೋಗ್ಯ ಇಲಾಖೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

English summary
New Year 2023: Bengaluru police lathi-charged to disperse the huge crowd after it went out of control in New Year’s celebrations . know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X