ಬೆಂಗಳೂರು ಐತಿಹಾಸಿಕ ಬಸವನಗುಡಿ ಕಡಲೆ ಪರಿಷೆಯಲ್ಲಿ ಹೊಸ ಕಿರಿಕಿರಿ..
ಬೆಂಗಳೂರಿನ ಬಸವನಗುಡಿ ಐತಿಹಾಸಿಕ ಕಡಲೆ ಪರಿಷೆ ಇಂದಿನಿಂದ (ನವೆಂಬರ್ 25)ರಿಂದ ಅಧಿಕೃತವಾಗಿ ಪ್ರಾರಂಭವಾಗಿದೆ. ಆದರೆ, ಎಂದಿನಂತೆ ಕಡಲೆಕಾಯಿ ಪರಿಷೆಯ ಸಂಭ್ರಮ ಎರಡ್ಮೂರು ದಿನಗಳ ಮುಂಚೆಯೇ ಪ್ರಾರಂಭವಾಗಿದೆ. ಆದರೆ, ಕಡಲೆಪರಿಷೆಯಲ್ಲಿ ಕಳೆದ ಬಾರಿಯಂತೆ ಹಾಗೂ ಕಳೆದ ಬಾರಿಗಿಂತಲೂ ಈ ಬಾರಿ ಸಮಸ್ಯೆಗಳು ಹೆಚ್ಚಾಗಿವೆ. ಕಡಲೆ ಪರಿಷೆಗೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಇದೆ. ಆದರೆ, ಇಂದಿನ ಹಲವು ಯುವಕರು ಹಾಗೂ ಯುವತಿಯರಿಗೆ ಇದರ ಮಹತ್ವವೇ ತಿಳಿಯುತ್ತಿಲ್ಲ. ಅಲ್ಲದೇ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಸಹ ಬಸವನಗುಡಿ ಕಡಲೆ ಪರಿಷೆಗೆ ಬೇಕಾದ ವ್ಯವಸ್ಥೆಗಳನ್ನು ವ್ಯವಸ್ಥಿತವಾಗಿ ಮಾಡಿಕೊಂಡಿಲ್ಲ.
ಬೆಂಗಳೂರಿನ ಬಸವನಗುಡಿಯಲ್ಲಿ ಪ್ರತಿ ವರ್ಷವೂ ಐತಿಹಾಸಿಕ ಕಡಲೆ ಪರಿಷೆ ನಡೆಯುತ್ತಿದೆ. ಈ ಪರಿಷೆಗೆ ಪ್ರತಿ ವರ್ಷವೂ ಸಾವಿರಾರು ಜನ ಬರ್ತಾರೆ. ಮೇಳಕ್ಕೆ ಬೇಕಾದ ಸಿದ್ಧತೆಗಳನ್ನು ಪಾಲಿಕೆ ಈ ಬಾರಿಯೂ ವ್ಯವಸ್ಥಿತವಾಗಿ ಮಾಡಿಕೊಂಡಿಲ್ಲ. ಅದೆಲ್ಲಕ್ಕಿಂತ ಹೆಚ್ಚಾಗಿ ಈ ಬಾರಿಯೂ ಮೇಳದಲ್ಲಿ ಕೆಲವು ಪುಂಡ - ಪೋಕರಿಗಳು ಪುಂಡಾಟ, ಕೀಟಲೆ ಹಾಗೂ ಅನವಶ್ಯಕವಾಗಿ ತೊಂದರೆ ಕೊಡುವ ಕೆಲಸ ಮುಂದುವರಿದಿದೆ.

ಕಡಲೆ ಪರಿಷೆಯಲ್ಲಿ ಈ ಬಾರಿಯೂ ಕೆಲವು ಪುಂಡರು ಪ್ರತಿ ವರ್ಷವೂ ಮಾಡುವ ಅದೇ ಕೆಲಸವನ್ನು ಮಾಡ್ತಿದ್ದಾರೆ.
ಪೀಪಿ...ಪೀಪಿ ಕಿರಿಕಿರಿ...
ಕಡಲೆ ಪರಿಷೆಯಲ್ಲಿ ಈ ಬಾರಿಯೂ ಪೀಪಿ ಕಿರಿಕಿರಿ ಕಿವಿ ನೋವು ತರಿಸುವಂತೆ ಇದೆ. ಕೆಲವು ಯುವಕರು ಹಾಗೂ ಪುಂಡರು ಕಡಲೆ ಪರಿಷೆಯಲ್ಲಿ ಉದ್ದೇಶ ಪೂರ್ವಕವಾಗಿ ಜನರ ಕಿವಿಗೆ ಅವಡುಗಚ್ಚುವಂತೆ ಜನರ ಬಳಿಯೇ ಬಂದು ಪೀಪಿ ಊದಿ ಕಿರುಕುಳ ನೀಡುತ್ತಿದ್ದಾರೆ. ಇದು ಪರಿಷೆಗೆ ಬಂದವರಿಗೆ ಭಾರೀ ಕಿರಿಕಿರಿಯನ್ನು ಉಂಟು ಮಾಡುತ್ತಿದೆ. ಇನ್ನು ಈ ರೀತಿ ಸಮಾರಂಭಗಳಲ್ಲಿ ನಡೆಯುವುದು ಇದೇ ಮೊದಲೇನು ಅಲ್ಲ ಕಳೆದ ಬಾರಿಯೂ ಇದೇ ರೀತಿಯ ಸಮಸ್ಯೆ ಆಗಿತ್ತು. ಅಲ್ಲದೇ ಯುವಕರು ಗುಂಪು ಸೇರಿಕೊಂಡು ಸದ್ದು ಮಾಡುವುದು ಹಾಗೂ ಅಸಭ್ಯವಾಗಿ ವರ್ತಿಸಿ ಕಿರಿಕಿರಿ ಮಾಡುತ್ತಿರುವುದು ಪರಿಷೆಗೆ ಬರಲು ಜನ ಹಿಂದೇಟು ಹಾಕುವಂತೆ ಮಾಡಿದೆ.
ಟ್ರಾಫಿಕ್ ಕಿರಿಕಿರಿ
ಪರಿಷೆಯಲ್ಲಿ ಅಲ್ಪ ಪ್ರಮಾಣದ ಸಂಚಾರ ದಟ್ಟಣೆ ಹಾಗೂ ವಾಹನಗಳನ್ನು ನಿಲ್ಲಿಸುವುದಕ್ಕೆ ಸಮಸ್ಯೆಯೂ ಇದೆ. ಟ್ರಾಫಿಕ್ ಪೊಲೀಸರು ಹಾಗೂ ಸ್ವಯಂ ಸೇವಕರು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದರೂ, ಕೆಲವರು ನಿಯಮ ಉಲ್ಲಂಘನೆ ಮಾಡಿ ವಾಹನ ನಿಲ್ಲಿಸುವುದು ಮುಂದುವರಿದಿದೆ.

ಶೌಚಾಲಯ ಸೌಲಭ್ಯ ಇಲ್ಲ: ಇನ್ನು ಕಡಲೆ ಪರಿಷೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ತಾತ್ಕಾಲಿಕ ಶೌಚಾಲಯವನ್ನು ನಿರ್ಮಿಸುವ ಅವಶ್ಯಕತೆ ಇದೆ. ಆದರೆ, ಈ ಬಾರಿ ಆ ವ್ಯವಸ್ಥೆ ಕಂಡುಬಂದಿಲ್ಲ. ಸಾವಿರಾರು ಜನ ಇಲ್ಲಿ ಸೇರುತ್ತಿದ್ದಾರೆ. ಮಕ್ಕಳು ಹಾಗೂ ವಯೋವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ, ತಾತ್ಕಾಲಿಕ ಅಥವಾ ಶೌಚಾಲಯದ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ಸೌಲಭ್ಯ ಇಲ್ಲ. ಕಡಲೆ ಪರಿಷೆ ನಡೆಯವ ಪಕ್ಕದ ರಸ್ತೆಗಳಲ್ಲಿ ಮೂತ್ರ ವಿಸರ್ಜನೆಯ ವಾಸನೆ ಮೂಗು ಮುಚ್ಚಿಕೊಳ್ಳುವಂತೆ ಮಾಡುತ್ತದೆ.
ಸ್ವಚ್ಛತೆ ಕೊರತೆ: ಕಡಲೆ ಪರಿಷೆಯಲ್ಲಿ ಸ್ವಚ್ಛತೆಯ ಕೊರತೆ ಎದ್ದು ಕಾಣಿಸುತ್ತಿತ್ತು. ಜನ ತಾವು ತಿಂದ ಆಹಾರದ ಪೊಟ್ಟಣ ಹಾಗೂ ಪ್ಲಾಸ್ಟಿಕ್ ಕವರ್‌ಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಕಡಲೆ ಸಿಪ್ಪೆಗಳು ರಸ್ತೆಯ ತುಂಬಿ ತುಳುಕುತ್ತಿವೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ












Click it and Unblock the Notifications