ಬೆಂಗಳೂರಿಂದ ತಾಂಜಾವೂರು,ಕೊಯಮತ್ತೂರಿಗೆ ಹೊಸ ಸ್ಲೀಪರ್ ಬಸ್

ಬೆಂಗಳೂರು, ಸೆಪ್ಟೆಂಬರ್ 22: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ ಆರ್‌ಟಿಸಿ)ಯ ಕೇಂದ್ರೀಯ ವಿಭಾಗದಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಹೊಸ ನಾನ್‌ಎಸಿ ಸ್ಲೀಪ್ ಬಸ್‌ ಸೇವೆ ಆರಂಭಿಸಲಿದೆ.

ಸೆಪ್ಟೆಂಬರ್ 24ರಿಂದ ಈ ಸೇವೆ ಆರಂಭವಾಗಲಿದ್ದು ಬೆಂಗಳೂರು-ತಾಂಜಾವೂರು ಮತ್ತು ಬೆಂಗಳೂರು-ಕೊಯಮತ್ತೂರು ಮಾರ್ಗದಲ್ಲಿ ಈ ನಾನ್ ಎಸಿ ಸ್ಲೀಪರ್ ಹೊಸ ಬಸ್ ಸಂಚರಿಸಲಿದೆ. ಬೆಂಗಳೂರಿನಿಂದ ಕೊಯಮತ್ತೂರಿಗೆ ಪ್ರಯಾಣ ದರ 580 ರೂ ಇರಲಿದೆ, ಬೆಂಗಳೂರಿನಿಂದ ಪ್ರದಿನ ರಾತ್ರಿ 9.30ಕ್ಕೆ ಹೊರಡಲಿದ್ದು ಬೆಳಗ್ಗೆ 6.30ಕ್ಕೆ ಕೊಯಮತ್ತೂರು ತಲುಪಲಿದೆ.

New sleeper bus service to Tanjavoor and Coimbatore

ಇದೇ ರೀತಿ ಕೊಯಮುತ್ತೂರಿನಿಂದ ಪ್ರತಿನಿತ್ಯ ರಾತ್ರಿ 22.15 ಕ್ಕೆ ಹೊರಟು ಮರುದಿನ ಬೆಳಿಗ್ಗೆ 6.30 ಗಂಟೆ ಬೆಂಗಳೂರು ತಲುಪಲಿದೆ. ಸಾರ್ವಜನಿಕರು ಈ ಎರಡು ನಗರಗಳಿಗೆ ಪ್ರಾರಂಭವಾಗಿರುವ ಸಾರಿಗೆ ವ್ಯವಸ್ಥೆಯ ಸೌಲಭ್ಯ ಪಡೆಯಬಹುದಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಇವರು ಪ್ರಕಟಣೆಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+