Get Updates
Get notified of breaking news, exclusive insights, and must-see stories!

E Khata: ಇ -ಖಾತಾ: ಬೆಂಗಳೂರಿನಲ್ಲಿ ಹೊಸ ಸಮಸ್ಯೆ, ಜಿಬಿಎ ಲೆಕ್ಕಾಚಾರ ತಲೆಕೆಳಗೆ

E Khata: ಬೆಂಗಳೂರಿನಲ್ಲಿ ಇ - ಖಾತಾ ಸೇವೆಯಲ್ಲಿ ಗೊಂದಲ ಮುಂದುವರಿದಿದೆ. ಬೆಂಗಳೂರಿನಾದ್ಯಂತ ಆಸ್ತಿಗಳ ಸಂರಕ್ಷಣೆ ಹಾಗೂ ಖರೀದಿ ಮತ್ತು ಮರಾಟದ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ಇ ಖಾತಾ ಪರಿಚಯಿಸಲಾಗಿದೆ. ಅಲ್ಲದೇ ಬೆಂಗಳೂರಿನಲ್ಲಿ ಆಸ್ತಿಗಳ ಮಾರಾಟದ ಸಂದರ್ಭದಲ್ಲಿ ಮೋಸವಾಗಬಾರದು ಮತ್ತು ಪ್ರಾಪರ್ಟಿ ಟ್ಯಾಕ್ಸ್‌ ಪಾವತಿ ಮಾಡುವುದರಲ್ಲಿ ಯಾವುದೇ ಆಸ್ತಿಗಳು (ಆಸ್ತಿದಾರರು) ಸಹ ಹೊರಗೆ ಉಳಿಯಬಾರದು ಎನ್ನುವುದು ಸೇರಿದಂತೆ ಹಲವು ಕಾರಣಗಳನ್ನು ಇ ಖಾತಾ ಒಳಗೊಂಡಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಆಸ್ತಿಗಳಿಗೆ ಇ ಖಾತಾ ಪರಿಚಯಿಸಲಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಸ್ಥಳೀಯ ಆಡಳಿತ ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಇ ಖಾತಾವನ್ನು ಪರಿಚಯಿಸಿ ಒಂದೂವರೆ ವರ್ಷಕ್ಕೂ ಹೆಚ್ಚು ಅವಧಿಯಾಗಿದ್ದರೂ ಇಲ್ಲಿಯ ವರೆಗೆ ಬೆಂಗಳೂರಿನ ಎಲ್ಲಾ ಆಸ್ತಿದಾರರಿಗೂ ಇ ಖಾತಾ ನೀಡಲು ಸಾಧ್ಯವಾಗಿಲ್ಲ. ಅಲ್ಲದೇ ಇ ಖಾತಾದಲ್ಲಿ ಇದೀಗ ಹೊಸ ಗೊಂದಲ ಸೃಷ್ಟಿಯಾಗಿದೆ. ಬೆಂಗಳೂರಿನಲ್ಲಿ ಅಂದಾಜು 24 ಲಕ್ಷ ಆಸ್ತಿಗಳಿದ್ದು ಶೇ 50% ರಷ್ಟು ಆಸ್ತಿಗಳಿಗೂ ಇಲ್ಲಿಯ ವರೆಗೆ ಇ ಖಾತಾ ನೀಡಲು ಸಾಧ್ಯವಾಗಿಲ್ಲ.

New E-Khata Problem in Bengaluru GBA Faces Calculation Confusion

ನಗರದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಪಾಸ್‌ಪೋರ್ಟ್ ಸೇವಾ ಕೇಂದ್ರದ ಮಾದರಿಯಲ್ಲಿ ಇ-ಖಾತಾ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲು ಯೋಜನೆ ರೂಪಿಸುವುದಾಗಿ ಹೇಳಿತ್ತು. ಆದರೆ, ಇ - ಖಾತಾ ಸೇವಾ ಕೇಂದ್ರ ಸೂಕ್ತ ಸ್ಥಳವನ್ನು ಗುರುತಿಸಲು ಸಾಧ್ಯವಾಗದ ಕಾರಣ ಆರಂಭದಿಂದಲೂ ಅಡೆತಡೆಗಳನ್ನು ಎದುರಿಸುತ್ತಿದೆ.

GBA ಇನ್ನೂ ಇ-ಖಾತಾ ಕೇಂದ್ರಗಳಿಗೆ ಸ್ಥಳಗಳನ್ನು ನಿಗದಿ ಮಾಡಲು ಸಾಧ್ಯವಾಗುತ್ತಿಲ್ಲ. ಇ - ಖಾತಾ ಸೇವಾ ಕೇಂದ್ರಕ್ಕೆ ಸ್ಥಳಾವಕಾಶದ ಕೊರತೆಯು ಯೋಜನೆಯ ಅನುಷ್ಠಾನದಲ್ಲಿ ಮತ್ತಷ್ಟು ವಿಳಂಬಕ್ಕೆ ಕಾರಣವಾಗುತ್ತಿದೆ. ನಗರದಾದ್ಯಂತ ಸೇವೆಯ ಸಮಸ್ಯೆಗಳು ಹೆಚ್ಚುತ್ತಿರುವುದರಿಂದ ಇ-ಖಾತಾ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಲು ಸೇವಾ ಕೇಂದ್ರ ಸ್ಥಾಪನೆಯ ಉದ್ದೇಶ ಹೊಂದಿರುವುದಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದರು.

ಆದರೆ ಅನೇಕ ಅರ್ಜಿದಾರರು ಇ-ಖಾತಾ ಅರ್ಜಿಗಳನ್ನು ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಇನ್ನೂ ಕೆಲವರು ತಮ್ಮ ಇ ಖಾತಾ ಅರ್ಜಿಗಳನ್ನು ಪರಿಶೀಲಿಸಲಾಗಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಹಲವು ಆಸ್ತಿದಾರರು ಪ್ರಾದೇಶಿಕ ಕಚೇರಿ (RO)ಗೆ ಖುದ್ದಾಗಿ ಭೇಟಿ ನೀಡುತ್ತಿದ್ದಾರೆ.

ಇ ಖಾತಾ ಸೇವಾ ಕೇಂದ್ರಕ್ಕೆ ಜಾಗ ಸಿಗುತ್ತಿಲ್ಲ!

ಬೆಂಗಳೂರಿನಲ್ಲಿ ಇ - ಖಾತಾ ಸೇವಾ ಕೇಂದ್ರ ಪ್ರಾರಂಭಿಸುವುದಕ್ಕೆ ಸ್ಥಳಾವಕಾಶದ ಕೊರತೆ ಎದುರಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪಾಸ್‌ಪೋರ್ಟ್ ಸೇವಾ ಕೇಂದ್ರಗಳ ಮಾದರಿಯಲ್ಲಿ ಇ-ಖಾತಾ ಸೇವಾ ಕೇಂದ್ರಗಳನ್ನು ತೆರೆಯುವ ಉದ್ದೇಶ ಇದೆ. ಆದರೆ ಜಾಗದ ಅಭಾವ ಇದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಮಿಷನರ್ ಮಹೇಶ್ವರ್ ರಾವ್ ಅವರು ತಿಳಿಸಿದ್ದಾರೆ.

ಇ ಸೇವಾ ಕೇಂದ್ರಕ್ಕೆ ಜಾಗ ಹುಡುಕಲಾಗುತ್ತಿದೆ. ಬೆಂಗಳೂರಿನ ಐದು ಹೊಸ ಪಾಲಿಕೆಗಳ ವ್ಯಾಪ್ತಿಯಲ್ಲಿ ಐದು ಇ-ಖಾತಾ ಸೇವಾ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಹೊಸ ಕೇಂದ್ರಗಳಿಗೆ ಸ್ಥಳಾವಕಾಶ ಕಲ್ಪಿಸಲು ಬಾಡಿಗೆ ಅಥವಾ ಗುತ್ತಿಗೆಗೆ ಆಧಾರದ ಮೇಲೆ ಜಾಗ ಹುಡುಕುವ ಚಿಂತನೆಯೂ ಇದೆ ಎಂದು ಮಹೇಶ್ವರ್ ರಾವ್ ಅವರು ತಿಳಿಸಿದ್ದಾರೆ.

ತಪ್ಪದ ಇ ಖಾತಾ ಸಂಕಷ್ಟ: ಇನ್ನು ಇ ಖಾತಾ ವಿಚಾರದಲ್ಲಿ ಸಾರ್ವಜನಿಕರಿಗೆ ಗೊಂದಲ ಮುಂದುವರಿದಿದೆ. ಕರ್ನಾಟಕ ಸರ್ಕಾರವು ಫೇಸ್‌ಲೆಸ್ ಇ ಖಾತಾ ಪರಿಚಯ ಮಾಡಿತ್ತು. ಆದರೆ ಒಂದೇ ವಾರದಲ್ಲಿ ಇದನ್ನು ಹಿಂಪಡೆಯಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+