• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಒಂಟಿ ಗಂಡಸರೇ ಎಚ್ಚರ, ಇದು ಹೆಣ್ಮಕ್ಕಳ ಗ್ಯಾಂಗ್ ವಂಚನೆ ಸ್ಕೀಮು

|

ಬೆಂಗಳೂರು, ಏಪ್ರಿಲ್ 5: ಈ ಸುದ್ದಿಯ ಬಗ್ಗೆ ವಾಟ್ಸಾಪ್, ಫೇಸ್ ಬುಕ್ ಗಳಲ್ಲೂ ಎಚ್ಚರಿಕೆ ಸಂದೇಶಗಳು ಹರಿದಾಡುತ್ತಿವೆ. ಗಂಡಸರೇ ಎಚ್ಚರ, ಈ ಮಹಿಳೆಯರು ಗುರಿ ಮಾಡಿಕೊಂಡಿರುವುದು ಪುರುಷರನ್ನು. ಬೆಡಗು-ಬಿನ್ನಾಣ ತೋರಿಸಿ, ಮೊದಲಿಗೆ ಮರುಳು ಮಾಡುವ ಇವರು, ಆ ನಂತರ ಬೆದರಿಕೆ ಹಾಕಿ, ಹಣ ಹಾಗೂ ಬೆಲೆ ಬಾಳುವ ವಸ್ತುಗಳನ್ನು ದೋಚುತ್ತಿದ್ದಾರೆ. ಆದ್ದರಿಂದ ಈ ಸುದ್ದಿಯನ್ನು ಅಷ್ಟು ಸುಲಭಕ್ಕೆ ತೆಗೆದು ಹಾಕಲು ಸಾಧ್ಯವಿಲ್ಲ.

ಈ ಬಗ್ಗೆ ವಿಜಯ ಕರ್ನಾಟಕದಲ್ಲೂ ತುಂಬ ವಿವರವಾದ ವರದಿ ಪ್ರಕಟವಾಗಿದೆ. ಇಂದಿರಾನಗರದಲ್ಲಿ ನಡೆದ ಘಟನೆ ಇದು. ಅಲ್ಲಿನ ಸಿಗ್ನಲ್ ಹತ್ತಿರ ಒಬ್ಬರು ಉದ್ಯಮಿ ಕಾರು ನಿಲ್ಲಿಸಿದ್ದಾರೆ. ಆ ವೇಳೆ ಅಶ್ಲೀಲವಾಗಿ ಸನ್ನೆ ಮಾಡಿದ ಹೆಂಗಸು, ಅದ್ಯಾವ ಮಾಯದಲ್ಲೋ ಕಾರು ಹೊಕ್ಕಿದ್ದಾಳೆ. ಕಾರಿಂದ ಇಳಿಯುವಂತೆ ತಾಕೀತು ಮಾಡಿದಾಗ, ನನ್ನನ್ನು ತಬ್ಬಿಕೊಳ್ಳಿ, ಚುಂಬಿಸಿ, ಜನರು ಇಲ್ಲದ ಜಾಗಕ್ಕೆ ಹೋಗೋಣ ಎಂದು ಪುಸಲಾಯಿಸಿದ್ದಾಳೆ.[ಬೆಂಗಳೂರು: ವಿದ್ಯಾರ್ಥಿನಿ ಮೇಲೆ ಡ್ಯಾನ್ಸ್ ಅಧ್ಯಾಪಕನಿಂದ ಅತ್ಯಾಚಾರ]

ಇದ್ಯಾಕೋ ಸರಿಯಿಲ್ಲ ಎನಿಸಿದ ಆ ಉದ್ಯಮಿ, ಕಾರಿಂದ ಇಳಿಯದಿದ್ದರೆ ಪೊಲೀಸರಿಗೆ ತಿಳಿಸುತ್ತೀನಿ ಎಂದು ಬೆದರಿಸಿದ ನಂತರ ಅಲ್ಲಿಂದ ಹೊರಟಿದ್ದಾಳೆ. ಆದರೆ ಅಷ್ಟರಲ್ಲಿ ಕೈ ಚಳಕ ತೋರಿಸಿ, ಆ ಉದ್ಯಮಿಯ 50 ಗ್ರಾಮ್ ತೂಕದ ಚಿನ್ನದ ಸರವನ್ನೇ ಲಪಟಾಯಿಸಿದ್ದಾಳೆ. ಈ ಸಂಗತಿ ಕೂಡ ಆ ವ್ಯಕ್ತಿಗೆ ತನ್ನ ಮನೆಗೆ ಹೋದ ನಂತರವೇ ಗೊತ್ತಾಗಿದೆ.

ಮತ್ತೊಂದು ಪ್ರಕರಣದಲ್ಲಿ ಹೆಲ್ಮೆಟ್ ಹಾಕಿಕೊಂಡಿದ್ದ ಮಹಿಳೆ, ನನ್ನ ಗುರುತು ಸಿಗಲಿಲ್ಲವಾ ಎಂದು ಕೇಳಿದ್ದಾಳೆ. ಆ ಹೆಲ್ಮೆಟ್ ತೆಗೆಯಿರಿ ಎಂದಾಗ, ನನ್ನ ಬೆನ್ನ ಹಿಂದೆ ಯಾಕೆ ಬಿದ್ದಿದ್ದೀರಿ ಎಂದು ಜೋರು ಕೂಗಾಟ ಆರಂಭಿಸಿದ್ದಾಳೆ. ಹಣ-ಚಿನ್ನ ಇದ್ದರೆ ಕೊಟ್ಟುಬಿಡಿ, ಇಲ್ಲದಿದ್ದರೆ ವಿಷಯ ದೊಡ್ಡದು ಮಾಡಿ, ಮಾನ ಕಳೆಯುತ್ತೇನೆ ಎಂದು ಬೆದರಿಸಿದ್ದಾಳೆ. ಅನ್ಯ ಮಾರ್ಗ ತೋಚದೆ ಮುರುಗೇಶ್ ಪಾಳ್ಯದ ಥಾಮಸ್ ತಮ್ಮ ಬಳಿ ಇದ್ದಿದ್ದನ್ನು ಕೊಟ್ಟಿದ್ದಾರೆ.[ಬೆಂಗಳೂರಿನಲ್ಲಿ ವಿಧವೆಯ ಮೇಲೆ ಸಾಮೂಹಿಕ ಅತ್ಯಾಚಾರ]

ಈ ರೀತಿಯ ವಂಚನೆ ಮಾಡುತ್ತಿರುವ ಮಹಿಳೆಯರ ಗುಂಪು ಬೆಂಗಳೂರಿನ ಇಂದಿರಾನಗರ, ಹಲಸೂರು ಸುತ್ತಮುತ್ತ ಕಾರ್ಯಾಚರಣೆ ಮಾಡುತ್ತಿದೆ. ಒಂಟಿಯಾಗಿರುವ ಪುರುಷರು ಈ ತಂಡದ ಸದಸ್ಯರ ಗುರಿ. ನಗು-ನಗುತ್ತಾ ಪರಿಚಯ ಬೆಳೆಸಿ, ಆ ನಂತರ ಬೆದರಿಸಿ, ಹಣ ದೋಚುವ ತಂತ್ರ ಇವರದು. ಈಗ ಮತ್ತೊಮ್ಮೆ ಹೇಳಬೇಕಾಗಿದೆ: ಒಂಟಿ ಗಂಡಸರೇ ಎಚ್ಚರ.

English summary
New cheating technique by women gang in Bengaluru. They target lone man and threat with sexual assault allegation. After that loot their money and valuables.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X