ಬೆಂಗಳೂರಲ್ಲಿ ಬಿಡಿಎಯಿಂದ ಹೊಸ ಅಪಾರ್ಟ್ಮೆಂಟ್ ಯೋಜನೆ- ಎಷ್ಟು ಫ್ಲ್ಯಾಟ್‌? ಯಾವ ಏರಿಯಾ? ನೀವು ಖರೀದಿಸಲು ಮಾಹಿತಿ ತಿಳಿಯಿರಿ

ಬೆಂಗಳೂರು, ಜನೆವರಿ 16: ಕಳಪೆ ಸಂಪರ್ಕ ಹಾಗೂ ಸೌಕರ್ಯಗಳಿಂದಾಗಿ ನೂರಾರು ಫ್ಲಾಟ್‌ಗಳು ಮಾರಾಟವಾಗದೆ ಉಳಿದಿರುವ ಸಮಯದಲ್ಲಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೋನದಾಸಪುರದಲ್ಲಿ 1,300 ಫ್ಲ್ಯಾಟ್‌ಗಳೊಂದಿಗೆ ಎರಡು ಅಪಾರ್ಟ್ಮೆಂಟ್ ಸಂಕೀರ್ಣಗಳನ್ನು ನಿರ್ಮಿಸುತ್ತಿದೆ. ಸುಮಾರು 620 ಫ್ಲ್ಯಾಟ್‌ಗಳು ಮುಕ್ತಾಯದ ಹಂತದಲ್ಲಿವೆ.

ವಿವಿಧ ಬಿಡಿಎ ಪ್ರಾಜೆಕ್ಟ್‌ಗಳಲ್ಲಿ ಕನಿಷ್ಠ 970 ಫ್ಲಾಟ್‌ಗಳು ಮಾರಾಟವಾಗಿಲ್ಲ ಅಥವಾ ಹಂಚಿಕೆಯಾಗಿಲ್ಲ. 350ರಷ್ಟು ಮಾತ್ರ ಮಾರಾಟವಾಗಿದೆ ಎಂದು ಬಿಡಿಎ ಅಂಕಿಅಂಶಗಳು ಹೇಳಿವೆ.

ಪೂರ್ವ ಬೆಂಗಳೂರಿನ ಕೋನದಾಸಪುರದಲ್ಲಿ ಹೊಸ ವಸತಿ ಯೋಜನೆಗೆ 343.8 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. 3, 4 ಮತ್ತು 5 BHK ಗಳ ಕನಿಷ್ಠ 300 ಫ್ಲ್ಯಾಟ್‌ಗಳು ಇರಲಿವೆ ಎಂದು ತಿಳಿದುಬಂದಿವೆ.

New apartment project by BDA in Bangalore- How many flats? What area? Learn more about what you can buy

ಟೀಕೆಗೆ ಗುರಿಯಾದ ಬಿಡಿಎ ನಿರ್ಧಾರ

ಫ್ಲ್ಯಾಟ್‌ಗಳನ್ನು ನಿರ್ಮಾಣ ಮಾಡಲು ಹೊರಟಿರುವ ಬಿಡಿಎ ನಿರ್ಧಾರ ವ್ಯಾಪಕ ಟೀಕೆಗೆ ಗುರಿಯಾಗಿದೆ. 'ಕಳೆದ ಕೆಲ ವರ್ಷಗಳಲ್ಲಿ, ಹೆಚ್ಚಿನ ಸಂಖ್ಯೆಯ ಜನರು ಖಾಸಗಿ ಅಪಾರ್ಟ್‌ಮೆಂಟ್‌ಗಳು ಮತ್ತು ವಸತಿ ಎಸ್ಟೇಟ್‌ಗಳಿಗೆ ತೆರಳಿದ್ದಾರೆ. ಬಿಡಿಎ ಲೇಔಟ್‌ಗಳು ಮತ್ತು ಅಪಾರ್ಟ್‌ಮೆಂಟ್‌ಗಳೆರಡರಲ್ಲೂ ಇರುವ ಕಳಪೆ ಕಾಮಗರಿಯು ಬಿಡಿಎ ವಿಶ್ವಾಸಾರ್ಹ ವಸತಿ ಡೆವಲಪರ್ ಎಂದು ಜನರು ನಂಬುವುದಿಲ್ಲ ಎಂಬುದನ್ನು ತೋರಿಸುತ್ತದೆ. ಇದರ ಹಲವು ಸಂಕೀರ್ಣಗಳು ಕಳಪೆ ಗುಣಮಟ್ಟ ಮತ್ತು ಸೌಕರ್ಯಗಳ ಕೊರತೆಯನ್ನು ಹೊಂದಿವೆ. ಈ ಸಂದರ್ಭಗಳಲ್ಲಿ, ಅಂತಹ ಸಂಕೀರ್ಣಗಳನ್ನು ಏಕೆ ನಿರ್ಮಿಸಬೇಕು?' ಎಂದು ಬೆಂಗಳೂರು ನಾಗರಿಕ ಅಶ್ವಿನ್ ಮಹೇಶ್ 'ಡೆಕ್ಕನ್‌ ಹೆರಾಲ್ಡ್‌' ತಿಳಿಸಿದ್ದಾರೆ.

ಇದೇ ವೇಳೆ, ಕೋನದಾಸಪುರದಲ್ಲಿ ಬಿಡಿಎ ಫ್ಲಾಟ್‌ಗಳಿಗೆ ಬೇಡಿಕೆ ಇದೆ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಪ್ರತಿಪಾದಿಸಿದ್ದಾರೆ.

New apartment project by BDA in Bangalore- How many flats? What area? Learn more about what you can buy

'ಇದು ವೈಟ್‌ಫೀಲ್ಡ್‌ಗೆ ಹತ್ತಿರವಾಗಿರುವುದರಿಂದ, ಇಲ್ಲಿ ಫ್ಲ್ಯಾಟ್‌ಗಳಿಗೆ ಬೇಡಿಕೆಯಿದೆ. ಆದ್ದರಿಂದ ಯೋಜನೆಗೆ ಅನುಮೋದನೆ ನೀಡಲಾಗಿದೆ. ಇನ್ನೆರಡು ಪ್ರಾಜೆಕ್ಟ್‌ಗಳು ಮುಕ್ತಾಯ ಹಂತದಲ್ಲಿದ್ದು, ಫ್ಲ್ಯಾಟ್‌ಗಳಿಗಾಗಿ ಹಲವರು ಬಿಡಿಎಗೆ ಮನವಿ ಮಾಡುತ್ತಿದ್ದಾರೆ,' ಎಂದು ತಿಳಿಸಿದ್ದಾರೆ.

ಅನೇಕ ಫ್ಲಾಟ್‌ಗಳು ಮಾರಾಟವಾಗದೆ ಉಳಿದಿವೆ ಎಂದು ಒಪ್ಪಿಕೊಂಡಿರುವ ವಿಶ್ವನಾಥ್, ಬಿಡಿಎ ಸಂಸ್ಥೆಯು ಈ ಸಂಕೀರ್ಣಗಳಲ್ಲಿ ಸೌಲಭ್ಯಗಳನ್ನು ಸುಧಾರಿಸುತ್ತಿದೆ ಎಂದು ತಿಳಿಸಿದ್ದಾರೆ.

'ಪ್ರವೇಶ ರಸ್ತೆಗಳ ಕೊರತೆಯಿಂದಾಗಿ ಕಣಿಮಿಣಿಕೆ ಮತ್ತು ಕೊಮ್ಮಘಟ್ಟದಲ್ಲಿ ಫ್ಲಾಟ್‌ಗಳನ್ನು ಖರೀದಿಸಲು ಹಲವರು ಭಯಪಡುತ್ತಿದ್ದರು. ಈಗ ನಾವು ರಸ್ತೆಗಳನ್ನು ಅಭಿವೃದ್ಧಿ ಪಡಿಸುತ್ತಿದ್ದೇವೆ ಮತ್ತು ಸೌಕರ್ಯಗಳನ್ನು ಸುಧಾರಿಸುತ್ತೇವೆ,' ಎಂದು ಅವರು ಹೇಳಿದರು.

New apartment project by BDA in Bangalore- How many flats? What area? Learn more about what you can buy

'ನಾವು ಪೊಲೀಸರು, ವಕೀಲರ ಸಂಘಗಳು ಮತ್ತು ಉದ್ಯೋಗಿಗಳನ್ನು ಹೊಂದಿರುವ ದೊಡ್ಡ ಪ್ರಮಾಣದಲ್ಲಿ ಫ್ಲಾಟ್‌ಗಳನ್ನು ಖರೀದಿಸುವ ಇತರ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಬೃಹತ್ ಖರೀದಿದಾರರಿಗೆ ನಾವು ರಿಯಾಯಿತಿಯನ್ನು ಘೋಷಿಸಿದ್ದೇವೆ. ಜಿಮ್‌ಗಳು, ಆಟದ ಪ್ರದೇಶಗಳು ಮತ್ತು ಇತರ ಸೌಲಭ್ಯಗಳನ್ನು ಸೇರಿಸುತ್ತಿದ್ದೇವೆ. ನಾವು ಮೂಲಸೌಕರ್ಯವನ್ನು ಸುಧಾರಿಸುತ್ತಿದ್ದೇವೆ,' ಎಂದು ಅವರು ತಿಳಿಸಿದರು.

ಜನರು ಇನ್ನೂ ಅನೇಕ ದೂರುಗಳನ್ನು ಹೊಂದಿದ್ದಾರೆ ಎಂದು ಹಿರಿಯ ಬಿಡಿಎ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. 'ಹಲವು ಯೋಜನೆಗಳನ್ನು ಸರಿಯಾಗಿ ಯೋಜಿಸಲಾಗಿಲ್ಲ. ನಾವು ಈಗ ಜನರಿಂದ ತಿಳಿದುಕೊಳ್ಳುತ್ತಿದ್ದೇವೆ. ಈ ಅಪಾರ್ಟ್ಮೆಂಟ್ ಸಂಕೀರ್ಣಗಳಲ್ಲಿ ಹೆಚ್ಚಿನವು ಸಂದರ್ಶಕರಿಗೆ ಸ್ವಾಗತ ಕೋಣೆ ಅಥವಾ ಭದ್ರತಾ ಕ್ಯಾಬಿನ್‌ಗಳನ್ನು ಹೊಂದಿಲ್ಲ. ಸಾಮಾನ್ಯ ಪ್ರದೇಶಗಳ ಕೊರತೆಯ ಬಗ್ಗೆಯೂ ಜನರು ದೂರುತ್ತಾರೆ. ಆದ್ದರಿಂದ, ಪ್ರತಿಕ್ರಿಯೆ ನೀರಸವಾಗಿತ್ತು,' ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+