Nepal ಪ್ರವಾಹದಲ್ಲಿ 288 ಭಾರತೀಯರು ನಾಪತ್ತೆ! ಇಬ್ಬರು ಕನ್ನಡಿಗರ ರಕ್ಷಣೆ: ದುರಂತದ ಕಾರಣ ಬಿಚ್ಚಿಟ್ಟ US ವಿಜ್ಞಾನಿಗಳು

Nepal Flood: ನೇಪಾಳ ಹಾಗೂ ಚೀನಾ ಗಡಿ ಭಾಗದಲ್ಲಿ ಸಂಭವಿಸಿದ ಭೀಕರ ಪ್ರವಾಹ ದುರಂತದಲ್ಲಿ ನಾಪತ್ತೆಯಾಗಿದ್ದ ಭಾರತೀಯರಲ್ಲಿ ಕನ್ನಡಿಗರು ಇದ್ದಾರೆ. ಈ ಪೈಕಿ ಇಬ್ಬರು ಕನ್ನಡಿಗರನ್ನು ರಕ್ಷಿಸಲಾಗಿದೆ. ಸಂತ್ರಸ್ತರಿಗೆ ದೆಹಲಿಯಲ್ಲಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ದುರಂತದ ಕಾರಣ ಕುರಿತು ಅಮೆರಿಕದ ವಿಜ್ಞಾನಿಗಳು ಮಹತ್ವದ ಮಾಹಿತಿ ನೀಡಿದ್ದಾರೆ. ಕನ್ನಡಿಗರ ರಕ್ಷಣೆಗಾಗಿ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳೇನು, ಸಿಎಂ ಡಿಕೆ ಶಿವಕುಮಾರ್ ಅವರು ನೀಡಿದ ಸೂಚನೆಗಳೇನೇನು..?

ಭಾರತೀಯ ವಿದೇಶಾಂಗ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ, ನೇಪಾಳ ಜಲಪ್ರಳಯದಲ್ಲಿ 288 ಮಂದಿ ಭಾರತೀಯರು ನಾಪತ್ತೆಯಾಗಿದ್ದಾರೆ. ಆ ಪೈಕಿ 200 ಮಂದಿಯ ಸಂತ್ರಸ್ತರು ಸಂಪರ್ಕದಲ್ಲಿದ್ದಾರೆ. ಉಳಿದವರ ಪತ್ತೆ ಕಾರ್ಯ ನಡೆಯುತ್ತಿದೆ. ಈಗಾಗಲೇ ರಕ್ಷಣಾ ಕಾರ್ಯಾಚರಣೆ ನಡೆಸಿ ಕರ್ನಾಟಕದ ಕಲಬುರಗಿಯ ಇಬ್ಬರು ಕನ್ನಡಿಗರನ್ನು ರಕ್ಷಿಸಲಾಗಿದೆ.

Nepal Flood

ಸಂತ್ರಸ್ತರಿಗೆ ದೆಹಲಿಯ ಕರ್ನಾಟಕ ಭವನದಲ್ಲಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ನೇಪಾಳದಿಂದ ನೇರವಾಗಿ ದೆಹಲಿಗೆ ಕರೆತರುವ ಪ್ರಯತ್ನಗಳು ಮುಂದುವರಿದಿವೆ. ಉಳಿದವರ ಪತ್ತೆ ಕಾರ್ಯ ಪ್ರಗತಿಯಲ್ಲಿದೆ. ಇತ್ತ ಕರ್ನಾಟಕ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಸಹಾಯವಾಣಿ ಆರಂಭಿಸಿದೆ. ಪ್ರವಾಸಿ ಏಜೆನ್ಸಿ, ಕುಟುಂಬಸ್ಥರು, ಅಲ್ಲಿಗೆ ತೆರಳಿದ ಸಂಬಂಧಿಕರನ್ನು ಸಂಪರ್ಕಿಸುವ ಎಲ್ಲ ಪ್ರಯತ್ನ ನಡೆಯುತ್ತಿದೆ. ಈ ಸಂಬಂಧ ಸೂಚನೆ ನೀಡಿರುವುದಾಗಿ ಸಿಎಂ ಡಿಕೆ ಶಿವಕುಮಾರ್ ಕಚೇರಿಯಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.

ಸಂತ್ರಸ್ತರ ಮಾಹಿತಿ ನೀಡಿ, ಸಹಾಯವಾಣಿಗೆ ಸಂಪರ್ಕಿಸಿ

ನೇಪಾಳದಲ್ಲಿ ತೊಂದರೆಗೆ ಒಳಗಾದ ಕನ್ನಡಿಗರ ಮಾಹಿತಿ-ವಿಳಾಸ, ಸಂಬಂಧಿಕರು ಹಾಗೂ ಪ್ರವಾಸ ಆಯೋಜಕರ ಅಗತ್ಯ ವಿವರ ಗೂಗಲ್‌ ಫಾರ್ಮ್‌ನಲ್ಲಿ ನಮೂದಿಸುವಂತೆ ರಾಜ್ಯ ಸರ್ಕಾರ ತಿಳಿಸಲಾಗಿದೆ. ಜೊತೆಗೆ ಅಗತ್ಯ ನೆರವಿವಾಗಿ ಸಹಾಯವಾಣಿ ಆರಂಭಿಸಲಾಗಿದೆ, ಸಂತ್ರಸ್ತರು ಕುಟುಂಬದವರು, ಆಯೋಜಕರು ಈ ಸಹಾಯವಾಣಿಗೆ ಸಂಖ್ಯೆಗೆ 1070 / 080-22253707 ಸಂಪರ್ಕಿಸುವಂತೆ ಕೋರಲಾಗಿದೆ.

ನೇಪಾಳದಲ್ಲಿನ ಕನ್ನಡಿಗರ ಮಾಹಿತಿ ಸಂಪೂರ್ಣವಾಗಿ ಸಿಗಬೇಕಿದೆ. ಸದ್ಯ ಹಿರಿಯ ಅಧಿಕಾರಿಗಳನ್ನು ಕಠ್ಮಂಡುಗೆ ಕಳುಹಿಸಿದ್ದೇವೆ. ಅಗತ್ಯವಿದ್ದಲ್ಲಿ ಮಂತ್ರಿಗಳನ್ನು ಅಲ್ಲಿಗೆ ಕಳುಹಿಸುತ್ತೇವೆ. ಕನ್ನಡಿಗರ ರಕ್ಷಣೆಗೆ ಸರ್ಕಾರ ನೇಪಾಳ ರಾಯಭಾರಿ ಕಚೇರಿ ಜೊತೆ ಸಂಪರ್ಕದಲ್ಲಿದೆ. ಅಗತ್ಯ ಬಿದ್ದಲ್ಲಿ, ಮಂತ್ರಿಗಳನ್ನು ಅಲ್ಲಿಗೆ ಕಳುಹಿಸುವುದಾಗಿ ಡಿಸಿಎಂ ಡಾ.ಜಿ.ಪರಮೇಶ್ವರ್ ‍ಅವರು ಸಹ ತಿಳಿಸಿದ್ದಾರೆ. ಇನ್ನೂ ಭಾರತೀಯ ವಿದೇಶಾಂಗ ಸಚಿವಾಲಯ, ಅಧಿಕಾರಿಗಳು ನೇಪಾಳ ರಾಯಭಾರಿ ಕಚೇರಿಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ.

ಭೂಕಂಪದಿಂದ ದುರಂತ ಸಂಭವಿಸಿಲ್ಲ: ಯುಎಸ್ ವಿಜ್ಞಾನಿಗಳು

ನೇಪಾಳ-ಟಿಬೆಟ್ ಗಡಿಯಲ್ಲಿ ನಡೆದ ಈ ದುರಂತಕ್ಕೆ ಭೂಕಂಪ ಕಾರಣವಲ್ಲ ಎಂದು ಅಮೆರಿಕದ ಭೂವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಭೂಕಂಪ ಅಲ್ಲ ಬದಲಾಗಿ ಹಿಮನದಿ ಕುಸಿತ ಅಥವಾ ನದಿ ಹರಿವಿನಿಂದ ಈ ರೀತಿ ದಿಢೀರ್ ಭೀಕರ ಪ್ರವಾಹ ಘಟಿಸಿರಬಹುದು ಎಂದು ಅಮೇರಿಕಾ ಭೂಸವೇಕ್ಷಣಾ ಸಂಸ್ಥೆ ವಿಜ್ಞಾನಿಗಳು ತಿಳಿಸಿದ್ದಾರೆ.

ಕಾರವೇನೇ ಇರಲಿ, ಇತಿಹಾಸದಲ್ಲೇ ನೇಪಾಳದಲ್ಲಿ ಇಂಥದ್ದೊಂದು ಪ್ರವಾಹ ನಡೆದಿಲ್ಲ ಎನ್ನಲಾಗಿದೆ. ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ನೇಪಾಳಿಗರು ಸೇರಿದಂತೆ ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ವಿವಿಧ ಕಡೆಯಿಂದ ನೇಪಾಳಕ್ಕೆ ತೆರಳಿದವರು, ಬದುಕುಳಿದವರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನದಿ ಪಕ್ಕದಲ್ಲಿ ಹೆಣಗಳ ರಾಶಿ ಕಂಡು ಮಮ್ಮಲ ಮರುಗುವಂತಾಗಿದೆ. ನೇಪಾಳದಲ್ಲಿ ಜನಜೀವ ಅಸ್ತವ್ಯಸ್ಥವಾಗಿದ್ದು, ಭಾರತ ಸೇರಿದಂತೆ ವಿವಿಧ ದೇಶಗಳು ನೆರವಿನ ಹಸ್ತ ಚಾಚಿವೆ. ಶುಕ್ರವಾರ ಹೊತ್ತಿಗೆ ಇಂದಿನ ಕಾರ್ಯಾಚರರಣೆಗೆ ಮತ್ತಷ್ಟು ಮಾಹಿತಿ ಸಿಗುವ ವಿಶ್ವಾಸವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+