ಕರ್ನಾಟಕದಲ್ಲಿ ಜ್ವರ-ಕೆಮ್ಮಿನ ಕೇಸ್ ಹೆಚ್ಚಳ: 4,212 ಕೇಸ್ ವರದಿ ಬೆನ್ನಲ್ಲೇ ಸರ್ಕಾರ ಅಲರ್ಟ್! ಮಾರ್ಗಸೂಚಿ ಪ್ರಕಟ
ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಳೆ ಮತ್ತೆ ಚುರುಕಾಗಿದೆ. ಅಲ್ಲದೆ ಇತ್ತೀಚೆಗೆ ಎಚ್ 1ಎನ್ 1, ಡೆಂಗ್ಯೂ ಪ್ರಕರಣಗಳು ವರದಿ ಆಗಿವೆ. ಇದರ ಬೆನ್ನಲ್ಲೆ ವರ್ಷಕ್ಕೆ ಎರಡು ಬಾರಿ ಎದುರಾಗುವ ಜ್ವರ, ಕೆಮ್ಮು, ಉಸಿರಾಟ ತೊಂದರೆ ಇನ್ನಿತರ(ಇನ್ಪೂಯೆಂಜಾ) ಸಾಂಕ್ರಾಮಿಕ ಆರೋಗ್ಯ ಸಮಸ್ಯೆ ತಡೆಯಲು, ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಜೊತೆಗೆ ಸಾರ್ವನಿಕರಿಗೆ ಒಂದಷ್ಟು ಸಲಹೆ, ಮಾರ್ಗಸೂಚಿ ನೀಡಿದೆ.
ರಾಜ್ಯದಲ್ಲಿ ಋತುಮಾನದ ಜ್ವರ (ಇನ್ಪೂಯೆಂಜಾ) ನಿಯಂತ್ರಣಕ್ಕೆ ಸನ್ನದ್ಧವಾಗಿದ್ದು, ಪ್ರತಿಕ್ರಿಯಾ ಕ್ರಮಗಳ ಬಲಪಡಿಸಲಾಗುತ್ತದೆ. ಇನ್ನುಯೆಂಜಾ ವೈರಸ್‌ಗಳಿಂದ ಉಂಟಾಗುವ ಸಾಂಕ್ರಾಮಿಕ ಉಸಿರಾಟದ ಕಾಯಿಲೆಯಾಗಿದೆ. ಜನವರಿಯಿಂದ ಮಾರ್ಚ್ ಮತ್ತು ಜುಲೈನಿಂದ ಸೆಪ್ಟೆಂಬರ್ ವರೆಗೆ ಈ ವೈರಸ್‌ಗಳ ಹಾವಳಿ ಹೆಚ್ಚಿರುತ್ತದೆ. ರಾಜ್ಯಾದ್ಯಂತ ಇನ್ನುಯೆಂಜಾ ಪತ್ತೆಹಚ್ಚಲಾಗುತ್ತಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕರು ಸಾಮಾನ್ಯ ಜ್ವರ, ಕೆಮ್ಮು ಎಂದು ಸುಮ್ಮನಾಗಬಾರದು. ಅದು ಇತರ ಕಾಯಿಲೆಗಳಿಗೆ ದಾರಿ ಮಾಡಿಕೊಡುವ ಸಾಧ್ಯತೆ ಇರುತ್ತದೆ. ಅದ್ದರಿಂದ ಅನಾರೋಗ್ಯ ನಿರ್ಲಕ್ಷಿಸದಂತೆ ಎಚ್ಚರಿಕೆ ಕೊಡಲಾಗಿದೆ.
ಆರೋಗ್ಯ ಸಚಿವರ ಯು.ಟಿ.ಖಾದರ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಎಲ್ಲಾ ಹಿರಿಯ ಆರೋಗ್ಯ ಅಧಿಕಾರಿಗಳೊಂದಿಗೆ ಸಮಗ್ರ ಪರಿಶೀಲನಾ ಸಭೆ ನಡೆಸಲಾಯಿತು. ಈ ಇನ್ಪೂಯೆಂಜಾ ಪ್ರಕರಣಗಳ ಹೆಚ್ಚಾಗಿವೆ. ಮುಂದೆ ಯಾವುದೇ ಪರಿಸ್ಥಿತಿ ಎದುರಾದರೂ ನಿಭಾಯಿಸಲು ರಾಜ್ಯದ ಆರೋಗ್ಯ ವ್ಯವಸ್ಥೆಯು ಸಾಕಷ್ಟು ಮೂಲಸೌಕರ್ಯ ಹಾಗೂ ಅಗತ್ಯ ಔಷಧಿಗಳೊಂದಿಗೆ ಸಂಪೂರ್ಣವಾಗಿ ಸಜ್ಜಾಗಿದೆ ಎಂದು ಸಚಿವರು ತಿಳಿಸಿದರು.
ಸದ್ಯ ಇನ್‌ಫ್ಲುಯೆಂಜಾ ಪರಿಸ್ಥಿತಿ ಹೇಗಿದೆ?
ಇಂಟಿಗ್ರೇಟೆಡ್ ಹೆಲ್ತ್ ಇನ್ನಾರ್ಮೇಷನ್ ಪ್ಲಾಟ್‌ಫಾರ್ಮ್ (IHIP) ನ ಕಾವಲು ಮಾಹಿತಿ ಪ್ರಕಾರ, ಕರ್ನಾಟಕದಲ್ಲಿ 22ನೇ ಆಗಸ್ಟ್ 2026 ರವರೆಗೆ 31 ಜಿಲ್ಲೆಗಳಲ್ಲಿ ಒಟ್ಟು 4,212 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. 2025ರಲ್ಲಿ 4,583 ಪ್ರಕರಣಗಳು ಮತ್ತು 2024 ರಲ್ಲಿ 3,903 ಕೇಸ್ ವರದಿಯಾಗಿದ್ದವು.
ರೋಗ ಪತ್ತೆ, ಕಣ್ಣಾವಲು ವ್ಯವಸ್ಥೆ ಬಲವರ್ಧನೆ
ರಾಜ್ಯದಲ್ಲಿ ಇನ್ನುಯೆಂಜಾ ಕಾಯಿಲೆ (ILI) ಮತ್ತು ತೀವು ಉಸಿರಾಟದ ಸೋಂಕು (SARI) ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಮತ್ತು ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿಗದಿತ ಕಣಾವಲು ಕೇಂದ್ರಗಳಾಗಿ ಗುರುತಿಸಲಾಗಿದೆ. ಇದರ ಜೊತೆಗೆ ICMR-NCDC ಲ್ಯಾಬ್ ಮೂಲಕ ಪ್ರಯೋಗಾಲಯ ಆಧಾರಿತ ಕಣ್ಣಾವಲು ಕೈಗೊಳ್ಳಲಾಗುತ್ತಿದೆ. ಅಗತ್ಯ ಅನ್ನಿಸುವ ಕಡೆಗಳಲ್ಲಿ ಮಾದರಿ ಸಂಗ್ರಹಣೆ, ಪ್ರಯೋಗಾಲಯ ಬಳಕೆಯ ಸಾಮಗ್ರಿಗಳ ಲಭ್ಯತೆ ಹಾಗೂ ಸಕಾಲಿಕ ಪರೀಕ್ಷೆಗೆ ಕ್ರಮವಹಿಸಲಾಗಿದೆ.
ಆರೋಗ್ಯ ಕೇಂದ್ರಗಳಿಗೆ ಮಹತ್ವದ ಸೂಚನೆ
ರಾಜ್ಯದಾದ್ಯಂತದ ಎಲ್ಲಾ ಆರೋಗ್ಯ ಕೇಂದ್ರಗಳಿಗೆ ಅಗತ್ಯವಾದ -PPE ಕಿಟ್, N95 ಮಾಸ್ಕ್ ಮತ್ತು ಒಸೆಮಿವಿರ್ ಔಷಧಿಗಳನ್ನು ಸಮರ್ಪಕ ಪ್ರಮಾಣದಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ILI/SARI ಪ್ರಕರಣಗಳನ್ನು ಆರಂಭಿಕ ಹಂತದಲ್ಲೇ ಗುರುತಿಸುವುದು, ನಿರ್ಣಯಿಸುವುದು ಹಾಗೂ ಅಗತ್ಯ ಚಿಕಿತ್ಸೆಯನ್ನು ಒದಗಿಸುವ ಕುರಿತು ಆರೋಗ್ಯ ಸಿಬ್ಬಂದಿಗೆ ಅರಿವು ಮತ್ತು ತರಬೇತಿ ನೀಡಲಾಗಿದೆ.
ಸಾರ್ವಜನಿಕರಿಗೆ ಆರೋಗ್ಯ ಸಲಹೆ/ಸಂದೇಶ
ಋತುಮಾನದ ಜ್ವರದ ಹರಡುವಿಕೆಯನ್ನು ತಡೆಯಲು ಸಾರ್ವಜನಿಕರು ಈ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು:
ಜನರು ಮಾಡಬೇಕಾದದ್ದು ಏನು?
* ಸೀನುವಾಗ ಮತ್ತು ಕೆಮ್ಮುವಾಗ ಮೂಗು ಮತ್ತು ಬಾಯಿಯನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳಬೇಕು.
* ಸೋಪು ಮತ್ತು ನೀರಿನಿಂದ ಕೈಗಳನ್ನು ನಿಯಮಿತವಾಗಿ ತೊಳೆಯಬೇಕು.
* ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು
* ರೋಗಲಕ್ಷಣಗಳಿರುವ ವ್ಯಕ್ತಿಗಳು ಇತರರಿಂದ ಪ್ರತ್ಯೇಕವಾಗಿರುವುದು ಹಾಗೂ ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.
ಮಾಡಬಾರದ್ದು ಏನು?
* ಕಣ್ಣು, ಮೂಗು ಮತ್ತು ಬಾಯಿಯನ್ನು ಕೈಗಳಿಂದ ಪದೇಪದೇ ಮುಟ್ಟಬಾರದು. ಸ್ವಯಂ-ಔಷಧೋಪಚಾರ (Self-Medication) ಮಾಡಬಾರದು.
* ರೋಗಲಕ್ಷಣಗಳಿರುವ ಸಂದರ್ಭದಲ್ಲಿ ಕೈಕುಲುಕುವುದನ್ನು ತಪ್ಪಿಸಬೇಕು.
* ರೋಗಲಕ್ಷಣಗಳಿರುವಾಗ ಜನಸಂದಣಿ ಇರುವ ಸ್ಥಳಗಳಿಗೆ ತೆರಳಬಾರದು.
* ಬಳಸಿದ ಕರವಸ್ತ್ರ/ನ್ಯಾಪ್ಟಿನ್ ಗಳನ್ನು ಮರುಬಳಕೆ ಮಾಡಬಾರದು.
* ಇನ್‌ಫ್ಲುಯೆಂಜಾ ಸಂಬಂಧಿತ ರೋಗಲಕ್ಷಣಗಳು ಕಂಡುಬಂದಲ್ಲಿ ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ವೈದ್ಯಕೀಯ ಸಲಹೆ ಪಡೆಯುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.


Click it and Unblock the Notifications
