ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೆಲಮಂಗಲ- ದೇವಿಹಳ್ಳಿ ನಡುವಿನ ಹೆದ್ದಾರಿ ಸಿದ್ಧ: ನಿತಿನ್ ಗಡ್ಕರಿ

|
Google Oneindia Kannada News

ಬೆಂಗಳೂರು, ಜನವರಿ 2: ರಾಷ್ಟ್ರೀಯ ಹೆದ್ದಾರಿ- 75ರ ಅಡಿಯಲ್ಲಿ ಕರ್ನಾಟಕದ ನೆಲಮಂಗಲ ಮತ್ತು ದೇವಿಹಳ್ಳಿ ನಡುವಿನ ರಸ್ತೆಯನ್ನು ನಿರ್ಮಿಸಲಾಗಿದೆ. ಈ ರಸ್ತೆಯು ರಾಜ್ಯ ರಾಜಧಾನಿ ಮತ್ತು ಮೈಸೂರು, ಹಳೇಬೀಡು, ಸಕಲೇಶಪುರ ಮತ್ತು ಧರ್ಮಸ್ಥಳದಂತಹ ಪ್ರವಾಸಿ ಸ್ಥಳಗಳ ನಡುವಿನ ಸಂಪರ್ಕವನ್ನು ಹೆಚ್ಚಿಸುತ್ತದೆ ಎಂದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಈ ಬಗ್ಗೆ ಸಚಿವ ನಿತಿನ್ ಗಡ್ಕರಿ ಅವರು ಟ್ವೀಟ್ ಮಾಡಿ, ಎನ್‌- 75ನಲ್ಲಿ ನೆಲಮಂಗಲ- ದೇವಿಹಳ್ಳಿ ನಡುವಿನ ವಿಭಾಗವನ್ನು ಯಶಸ್ವಿಯಾಗಿ ನಿರ್ಮಿಸಲಾಗಿದೆ. ಈ ವಿಭಾಗವು ಮೈಸೂರು, ಸಕಲೇಶಪುರ, ಹೆಳೇಬೀಡು, ಧರ್ಮಸ್ಥಳ ಮುಂತಾದ ಪ್ರವಾಸಿ ಸ್ಥಳಗಳಿಗೆ ವೇಗದ ಸಂಪರ್ಕವನ್ನು ಸುಗಮಗೊಳಿಸುತ್ತದೆ. ವಾರಾಂತ್ಯದಲ್ಲಿ ಸುಮಾರು 30,000 ವಾಹನಗಳ ಸಂಚಾರಕ್ಕೂ ನೆರವಾಗಲಿದೆ. ಇದು ಬೆಂಗಳೂರು- ಮಂಗಳೂರು, ಬೆಂಗಳೂರು-ಮೈಸೂರು, ಬೆಂಗಳೂರು-ಹಾಸನ, ಸಕಲೇಶಪುರ, ಧರ್ಮಸ್ಥಳವನ್ನು ಸಂಪರ್ಕಿಸುವ ಮಾರ್ಗವಾಗಿಯೂ ಕಾರ್ಯನಿರ್ವಹಿಸುತ್ತದೆ.

ನೆಲಮಂಗಲ-ತುಮಕೂರು ಹೆದ್ದಾರಿ ಕಾಮಗಾರಿ 2025ಕ್ಕೆ ಮುಕ್ತಾಯ, ನಿತಿನ್‌ ಗಡ್ಕರಿನೆಲಮಂಗಲ-ತುಮಕೂರು ಹೆದ್ದಾರಿ ಕಾಮಗಾರಿ 2025ಕ್ಕೆ ಮುಕ್ತಾಯ, ನಿತಿನ್‌ ಗಡ್ಕರಿ

ಹೆದ್ದಾರಿಯನ್ನು ಗುಣಮಟ್ಟದ ರೀತಿಯಲ್ಲಿ ನಿರ್ಮಿಸಲು ನವೀನ ವಿಧಾನಗಳನ್ನು ಬಳಸಿದ್ದೇವೆ. ಮೈಕ್ರೋ-ಸರ್ಫೇಸಿಂಗ್ ಮಿಶ್ರಣದ ಬಾಗುವ ಶಕ್ತಿಯನ್ನು ಹೆಚ್ಚಿಸಲು ಫೈಬರ್ ಬಲವರ್ಧಿತ ಮೈಕ್ರೋ ಸರ್ಫೇಸಿಂಗ್ ಅನ್ನು ಬಳಸುವಂತಹ ಕೆಲವು ನವೀನ ಆಲೋಚನೆಗಳನ್ನು ನಾವು ನಿರ್ಮಾಣದ ಸಮಯದಲ್ಲಿ ಅಳವಡಿಸಿದ್ದೇವೆ. ಇದರಿಂದಾಗಿ ಬಿರುಕು ನಿರೋಧಕತೆ ಮತ್ತು ದೀರ್ಘಾವಧಿಯ ಬಾಳಿಕೆ ಗಮನಾರ್ಹವಾಗಿ ಸುಧಾರಿಸುತ್ತದೆ ಎಂದಿದ್ದಾರೆ.

Nelamangala- Devihalli Highway is ready: Nitin Gadkari

ಈ ಕಾರಿಡಾರ್ ರಾಜ್ಯದ ಸುತ್ತಮುತ್ತಲಿನ ಕೈಗಾರಿಕೆಗಳಿಗೂ ನೆರವಾಗಲಿದೆ. ಪಾದಚಾರಿ ಮಾರ್ಗದ ತೊಂದರೆಗಳನ್ನು ನಿಖರವಾಗಿ ನಿರ್ಧರಿಸಲು ನಾವು ಸ್ಟೇಟ್-ಆಫ್-ದಿ-ಆರ್ಟ್ ಪೇವ್‌ಮೆಂಟ್ ಇನ್ವೆಸ್ಟಿಗೇಶನ್‌ಗಳನ್ನು ಸಹ ಬಳಸಿದ್ದೇವೆ. ಅನೇಕ ಕೈಗಾರಿಕೆಗಳು ಮತ್ತು ಪೆರಿಫೆರಲ್ ರಿಂಗ್ ರಸ್ತೆಗಳನ್ನು ಹೆದ್ದಾರಿಯನ್ನು ಸಂಪರ್ಕಿಸುವ ಉದ್ದೇಶದಿಂದ ಕಾರಿಡಾರ್ ಅನ್ನು ಕಾರ್ಯತಂತ್ರವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯ ಜಗ್ಗೇಶ್‌ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಸಚಿವ ನಿತಿನ್‌ ಗಡ್ಕರಿ ಅವರು, ನೆಲಮಂಗಲ-ತುಮಕೂರು 6 ಲೇನ್‌ನ ಹೆದ್ದಾರಿ ಕಾಮಗಾರಿ 2025ರ ಆಗಸ್ಟ್‌ನಲ್ಲಿ ಪೂರ್ಣಗೊಳ್ಳಲಿದ್ದು, ಹೆದ್ದಾರಿ ಕಾಮಗಾರಿಯಲ್ಲಿ ತುಮಕೂರು ಬೈಪಾಸ್‌ ಕಾಮಗಾರಿಯೂ ಕೂಡ ಒಂದಾಗಿದೆ. ಈ ಕಾಮಗಾರಿಯನ್ನು ಎರಡು ಹಂತಗಳಾಗಿ ವಿಭಜಿಸಲಾಗಿದ್ದು, ಮೊದಲ ಹಂತದಲ್ಲಿ ಸರ್ವಿಸ್‌ ರಸ್ತೆ ಹಾಗೂ ಎರಡನೇ ಹಂತದ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದು ತಿಳಿಸಿದ್ದರು.

Nelamangala- Devihalli Highway is ready: Nitin Gadkari

ಏತನ್ಮಧ್ಯೆ, ಕೇಂದ್ರ ನಿತಿನ್ ಗಡ್ಕರಿ ಅವರು ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ಜನವರಿ 5 ರಂದು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ಪರಿಶೀಲಿಸಲಿದ್ದಾರೆ ಎಂದು ಕರ್ನಾಟಕ ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ಬುಧವಾರ ತಿಳಿಸಿದ್ದಾರೆ.

English summary
A road has been constructed between Nelamangala and Devihalli in Karnataka under National Highway-75. Union Minister Nitin Gadkari said the road will provide connectivity between the state capital and tourist destinations like Mysore, Halebidu, Sakaleshpur and Dharmasthala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X