ಕಸ ಹಾಕುವ ವಿಷಯಕ್ಕೆ ಕಿರಿಕ್: ನಾಯಿ ಛೂ ಬಿಟ್ಟ ವ್ಯಕ್ತಿ

ಬೆಂಗಳೂರು, ಮಾರ್ಚ್ 2: ಮನೆ ಮುಂದೆ ಕಸ ಹಾಕಬೇಡಿ ಎಂದು ಹೇಳಿದ್ದಕ್ಕೆ ನಾಯಿಯನ್ನು ಛೂ ಬಿಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸುರೇಶ್ ಎಂಬಾತ ಗಲಾಟೆ ಮಾಡಿಕೊಂಡು ನಾಯಿ ಛೂ ಬಿಟ್ಟಿದ್ದಾನೆ.

ಬೆಂಗಳೂರಿನ ಗಿರಿನಗರದ ಈರಣ್ಣ ಗುಡ್ಡದಲ್ಲಿ ಈ ಘಟನೆ ನಡೆದಿದೆ. ರಾತ್ರಿ ವೇಳೆ ಸುರೇಶ್ ತನ್ನ ನಾಯಿಯ ಜೊತೆಗೆ ಬರುತ್ತಿದ್ದು, ಈ ವೇಳೆ ಕಸವನ್ನು ಬಿಸಾಕಿದ್ದಾನೆ. ಆಗ ಇಲ್ಲಿ ಕಸವನ್ನು ಹಾಕಬೇಡಿ ಎಂದು ಸೆಕ್ಯೂರಿಟಿ ಗಾರ್ಡ್ ಹೇಳಿದ್ದಾರೆ.

Neighbour Attacked Security Guard Through Dog For Garbage Issue

ಸೆಕ್ಯೂರಿಟಿ ಗಾರ್ಡ್ ಮಾತನ್ನು ಕೇಳದ ಸುರೇಶ್ ಕಸ ಹಾಕುವ ವಿಚಾರಕ್ಕೆ ಕ್ಯಾತೆ ತೆಗಿದ್ದಾನೆ. ಕೊನೆಗೆ ನಾಯಿಯನ್ನು ಸೆಕ್ಯೂರಿಟಿ ಗಾರ್ಡ್ ಮೇಲೆ ಛೂ ಬಿಟ್ಟಿದ್ದಾನೆ. ಸೆಕ್ಯೂರಿಟಿ ಗಾರ್ಡ್ ಮೇಲೆ ನಾಯಿ ದಾಳಿ ಮಾಡಿದೆ.

ನಾಯಿ ದಾಳಿಗೆ ಒಳಗಾದ ಸೆಕ್ಯೂರಿಟಿ ಗಾರ್ಡ್ ಮೈ ಮೇಲೆ ಗಾಯಗಳು ಆಗಿವೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಸದ ವಿಚಾರಕ್ಕೆ ಮನೆ ಮಾಲೀಕ ಸುರೇಶ್ ನಾಯಿಯಿಂದ ದಾಳಿ ಮಾಡಿಸಿ, ಸೆಕ್ಯೂರಿಟಿ ಗಾರ್ಡ್ ಆಸ್ಪತ್ರೆಗೆ ಸೇರುವಂತೆ ಮಾಡಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+