• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಾಲಮನ್ನಾ ವಿಚಾರದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಪಾಲಿಟಿಕ್ಸ್; ಎಚ್ಡಿಕೆ ಬಾಂಬ್

|

ಬೆಂಗಳೂರು, ಅಕ್ಟೋಬರ್ 11: ರಾಜ್ಯದ ಅನ್ನದಾತನ ಜೀವನದ ಜತೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಚೆಲ್ಲಾಟವಾಡುತ್ತಿವೆಯೇ? ಹೀಗೊಂದು ಆಘಾತಕಾರಿ ವಿಚಾರವನ್ನು ಸ್ವತಃ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಹಿರಂಗಪಡಿಸಿದ್ದಾರೆ.

ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯ ಸರ್ಕಾರ 6 ಸಾವಿರ ಕೋಟಿ ರೂ.ಗಳನ್ನು ತುಂಬಿ ರೈತರ ಬೆಳೆಸಾಲ ಮನ್ನಾ ಮಾಡಲು ಈಗಾಗಲೇ ಹಣ ತೆಗೆದಿರಿಸಿದ್ದರೂ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲದ ಮಾಹಿತಿಯನ್ನೇ ನೀಡದೇ ರಾಜಕಾರಣ ಮಾಡುತ್ತಿವೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಕುಮಾರಸ್ವಾಮಿ ಸರ್ಕಾರದಿಂದ ಮತ್ತೊಂದು ಸಾಲಮನ್ನಾಕ್ಕೆ ಯೋಜನೆ

ಎಷ್ಟೇ ಮನವಿ ಮಾಡಿದರೂ ಬ್ಯಾಂಕ್‌ಗಳು ರೈತರ ಸಾಲದ ಡೇಟಾಗಳನ್ನು ಸರ್ಕಾರಕ್ಕೆ ಸಲ್ಲಿಸುತ್ತಿಲ್ಲ. ಇದರಿಂದ ನಮಗೆ ಬ್ಯಾಂಕ್‌ಗಳ ಮೇಲೆ ಸಂಶಯ ಬರುತ್ತಿದೆ. ಬ್ಯಾಂಕ್‌ಗಳು ಹೀಗೆ ವರ್ತಿಸಲು ಏನು ಕಾರಣ ಇರಬಹುದು ಎಂಬುದೇ ತಿಳಿಯುತ್ತಿಲ್ಲ.

ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

ಸಾಲಮನ್ನಾ ಯೋಜನೆಗಾಗಿ ಅಭಿವೃದ್ಧಿ ಬಲಿ ಕೊಡಲ್ಲ: ಎಚ್ಡಿಕೆ ಅಭಯ

ರಾಜ್ಯದ ರೈತರ ಹಿತದೃಷ್ಟಿಯಿಂದ ರಾಜ್ಯದ ಬಿಜೆಪಿ ನಾಯಕರು ಪ್ರಧಾನಿ ಮೋದಿ ಮೇಲೆ ಒತ್ತಡ ಹೇರಿ ಸರ್ಕಾರಕ್ಕೆ ಸಾಲದ ಡೇಟಾ ಕೊಡಿಸಿದರೆ ನಾನು ಅವರಿಗೆ ಆಭಾರಿಯಾಗಿರುತ್ತೇನೆ. ನಮಗೆ ಹಣ ಕೊಡಿಸುವುದು ಬೇಡ, ಡೇಟಾ ಕೊಡಿಸಿದರೆ ಸಾಕು ಎಂದು ಪರಿಪರಿಯಾಗಿ ಕೋರಿದರು.

ಸಾಲಮನ್ನಾ ಅರ್ಜಿ, ರೈತರು ಆತಂಕ ಪಡಬೇಕಿಲ್ಲ:ಕುಮಾರಸ್ವಾಮಿ ಅಭಯ

ರಾಷ್ಟ್ರೀಕೃತ ಬ್ಯಾಂಕ್‌ಗಳು ಒಂದು ಸಲ ಸಾಲ ತೀರುವಳಿ ಯೋಜನೆಗೆ ದೊಡ್ಡದಾಗಿ ಜಾಹೀರಾತು ನೀಡಿದ್ದವು. ಆದರೆ ರಾಜ್ಯ ಸರ್ಕಾರ ಪದೇ ಪದೇ ಸಾಲದ ವಿವರ ಕೊಡಿ ಎಂದು ಕೇಳಿದರೂ ಕೊಡುತ್ತಿಲ್ಲ. ನಮ್ಮ ಸರ್ಕಾರ ಅಧಿಕಾರಿಗಳ ದೊಡ್ಡ ತಂಡವನ್ನೇ ಬ್ಯಾಂಕ್‌ಗಳಿಗೆ ಬಿಟ್ಟಿದೆ. ಎಲ್ಲ ಮಾಹಿತಿ ಕೊಡಲು, ಜೊತೆಗೆ ಹಣ ಕೊಡಲು ನಾವು ತಯಾರಿದ್ದೇವೆ. ಆದರೆ ಬ್ಯಾಂಕ್‌ಗಳು ತುಟಿ ಎರಡು ಮಾಡುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

English summary
In a shocking revelation Chief minister H.D. Kumaraswamy has alleged nationalized banks were playing politics in crop loan waiver scheme by delaying farmers loan data with the state government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X