ಫೆ.26ರಂದು ವಿಜಯ್ ಪ್ರಕಾಶ್ ಸಂಗೀತ ಸಂಜೆ, ತಪ್ಪದೇ ಬನ್ನಿ
ನಿರಂತರಂ-2017- ರಾಷ್ಟ್ರೀಯ ಸಂಗೀತ ಮತ್ತು ನೃತ್ಯೋತ್ಸವದ ಅಂಗವಾಗಿ ಫೆಬ್ರವರಿ 26ರಂದು ಗಾಯಕ ವಿಜಯ್ ಪ್ರಕಾಶ್ ಅವರ ಸಂಗೀತಯಾನ ವಿಶಿಷ್ಟ ಕಾರ್ಯಕ್ರಮವನ್ನು ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದೆ.
ಬೆಂಗಳೂರು, ಫೆಬ್ರವರಿ 21: ನಿರಂತರಂ-2017- ರಾಷ್ಟ್ರೀಯ ಸಂಗೀತ ಮತ್ತು ನೃತ್ಯೋತ್ಸವದ ಅಂಗವಾಗಿ ಫೆಬ್ರವರಿ 26ರಂದು ಗಾಯಕ ವಿಜಯ್ ಪ್ರಕಾಶ್ ಅವರ ಸಂಗೀತಯಾನ ವಿಶಿಷ್ಟ ಕಾರ್ಯಕ್ರಮವನ್ನು ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದೆ.
ಈ ಸಂಗೀತ ಸಂಜೆಯಲ್ಲಿ ವಿಜಯ್ ಪ್ರಕಾಶ್ ಅವರು ಭಕ್ತಿಗೀತೆ, ಭಾವಗೀತೆ, ಜಾನಪದ, ಸಿನಿಮಾ ಸಂಗೀತದ ರಸಧಾರೆಯನ್ನು ಸಂಗೀತಾಸಕ್ತರಿಗೆ ಉಣ ಬಡಿಸಲಿದ್ದಾರೆ.

ವಿಜಯ್ ಪ್ರಕಾಶ್ ಅವರ ಕಾರ್ಯಕ್ರಮ ಸೇರಿದಂತೆ ದಿನಾಂಕ 24.02.2017 ರಿಂದ ದಿನಾಂಕ 26.02.2017 ರವರೆಗೆ ವೈಯ್ಯಾಲಿಕಾವಲ್ ಬಡಾವಣೆಯಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ವಿವಿಧ ಸಂಗೀತ ಕಾರ್ಯಕ್ರಮ ಆಯೋಜನೆಗೊಂಡಿದೆ.
24.02.2017 - 2017ನೇ ಇಸವಿಯು ಜಗದಾಚಾರ್ಯ ಶ್ರೀ ರಾಮಾನುಜಾಚಾರ್ಯರ ಸಹಸ್ರಮಾನ ವರ್ಷವಾದುದರಿಂದ ಅವರ ಜೀವನ ಮತ್ತು ಸಾಧನೆಗಳನ್ನು ಕುರಿತು 'ಶ್ರೀ ರಾಮಾನುಜ ವೈಭವಂ' ಎಂಬ ಸಂಗೀತ - ನೃತ್ಯ - ನಾಟಕವನ್ನು ಏರ್ಪಡಿಸಲಾಗಿದೆ. ಈ ನಾಟಕದಲ್ಲಿ 35 ಕಲಾವಿದರುಗಳು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತ.
25.02.2017 - ಪ್ರಖ್ಯಾತ ವೀಣಾ ವಿದ್ವಾಂಸರಾದ ಚೆನ್ನೈನ ರಾಜೇಶ್ ವೈದ್ಯ ರವರು ನಾಲ್ಕು ಪ್ರಖ್ಯಾತ ಸಹ ಕಲಾವಿದರುಗಳೊಂದಿಗೆ 'ಸಂಗೀತ ಸಂಜೆ' ಕಾರ್ಯಕ್ರಮವನ್ನು ನೀಡಲಿದ್ದಾರೆ. ಈ ಕಾರ್ಯಕ್ರಮದ ಪ್ರವೇಶ ದರ ರೂ.300/-

26.02.2017 - ನಾಡಿನ ಹೆಸರಾಂತ ಹಿನ್ನೆಲೆ ಗಾಯಕರಾದ ವಿಜಯ್ ಪ್ರಕಾಶ್ ಮತ್ತು ಸಂಗಡಿಗರಿಂದ ಭಕ್ತಿ ಗೀತೆ, ಸುಗಮಸಂಗೀತ ಮತ್ತು ಚಿತ್ರಗೀತೆಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಪ್ರವೇಶ ದರ ರೂ.800/- ರೂ.500/- ಮತ್ತು ರೂ.300/-
ದಿನಾಂಕ 25.02.2017 ಮತ್ತು ದಿನಾಂಕ 26.02.2017ರ ಕಾರ್ಯಕ್ರಮಗಳ ಟಿಕೆಟ್‍ಗಳನ್ನು ಮೊಬೈಲ್ ಸಂಖ್ಯೆ +91 80959 04455 ಮತ್ತು 07407 65292 ಮತ್ತು 'ಟಾಕ್ ಆಫ್ ದಿ ಟೌನ್' ಜಾಲವನ್ನು ಸಂಪರ್ಕಿಸಬಹುದಾಗಿದೆ.
ವಿದುಷಿ ಟಿ.ರಮಾ ಅವರ ನಿರಂತರಂ ಸಂಸ್ಥೆ ಬಗ್ಗೆ ವಿಜಯ್ ಪ್ರಕಾಶ್ ಅವರ ಮಾತುಗಳು:
(ಒನ್ಇಂಡಿಯಾ ಸುದ್ದಿ)
-
ದ್ವಿತೀಯ ಪಿಯುಸಿ 'ಕಲಾ' ವಿಭಾಗದಲ್ಲಿ ಶೇ.72.86 ರಷ್ಟು ಫಲಿತಾಂಶ: ಟಾಪರ್ಸ್ ಲಿಸ್ಟ್ ಇಲ್ಲಿದೆ -
2nd PUC ಫಲಿತಾಂಶದಲ್ಲಿ ಶೇ. 13ರಷ್ಟು ಏರಿಕೆ; ಕಲಿಕೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಫಸ್ಟ್: ಮಧು ಬಂಗಾರಪ್ಪ -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
2025ರ ದ್ವಿತೀಯ PUC ಪರೀಕ್ಷೆಯಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಲ್ಲಿ ಮಿಂಚಿದ ಪ್ರತಿಭೆಗಳು; ಇಲ್ಲಿದೆ ಟಾಪರ್ಗಳ ಪಟ್ಟಿ -
Gold Rate April 9: ಚಿನ್ನ - ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ: ಬಂಗಾರ ಖರೀದಿದಾರರಿಗೆ ಸಂತೋಷದ ಸುದ್ದಿ -
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ? -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
Rain in Karnataka: ಕರ್ನಾಟಕದ ಕರಾವಳಿಯಲ್ಲಿ ಭಾರೀ ಬಿಸಿಲು; ಬೆಂಗಳೂರು ಸೇರಿ ಈ ಭಾಗಗಳಲ್ಲಿ ಮಳೆ: ಐಎಂಡಿ











Click it and Unblock the Notifications