ಮೋದಿ ಶತ್ರುಗಳು ಬಿಜೆಪಿಯಲ್ಲೇ ಇದ್ದಾರಾ? ಏನಿದು ಕಾಂಗ್ರೆಸ್ ಹೊಸ ಬಾಂಬ್
ಚುನಾವಣೆ ಸಮೀಪವಾಗುತ್ತಿದ್ದಂತೆ ಬಿಜೆಪಿ ಅಬ್ಬರದ ಪ್ರಚಾರಕ್ಕೆ ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಎರಡು ದಿನ ಬೆಂಗಳೂರಿನಲ್ಲಿ ರೋಡ್ ಶೋ ಮಾಡುವ ಮೂಲಕ ಮತ ಯಾಚನೆ ಮಾಡಲು ಮುಂದಾಗಿದ್ದಾರೆ. ಮೋದಿ ರೋಡ್ ಶೋಗೆ ಕೆಲವು ಸಂತಸ ವ್ಯಕ್ತಪಡಿಸಿದ್ದರೆ, ಸಾಮಾನ್ಯ ಮಂದಿ ಮಾತ್ರ ರಸ್ತೆಗಳನ್ನು ಬಂದ್ ಮಾಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಮೋದಿ ರೋಡ್ ಶೋ ಬಗ್ಗೆ ಟೀಕೆ ಮಾಡಿದೆ. ರಾಜಧಾನಿಯಲ್ಲಿ ಜನರಿಗೆ ತೊಂದರೆ ಕೊಟ್ಟು ರೋಡ್ ಶೋ ಮಾಡುವ ಅಗತ್ಯವೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ. ರಾಜ್ಯದಲ್ಲಿ ಸೋಲಿನ ಭಯದಿಂದ ಬಿಜೆಪಿ ಮೋದಿಯನ್ನು ಕರೆದುಕೊಂಡು ಬಂದು ಪ್ರಚಾರ ಮಾಡಿಸುತ್ತಿದೆ ಎಂದು ಕಾಲೆಳೆದಿದೆ.

ಟ್ವೀಟ್ ಮಾಡಿರುವ ಕಾಂಗ್ರೆಸ್ "ಪ್ರಧಾನಿ ಮೋದಿಯನ್ನು ಬೀದಿ ಬೀದಿಯಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಅಲೆಯುವಂತೆ ಮಾಡಿದ್ದು ಕರ್ನಾಟಕ ಬಿಜೆಪಿಗೆ ಸೋಲಿನ ಭಯ ಎಂದು ಹೇಳಿದೆ, ಮೋದಿಯನ್ನು ಈ ಪರಿ ಗೋಳಾಡಿಸುವುದು ಸರಿಯೇ?" ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಪ್ರಧಾನಿ ಮೋದಿಯನ್ನು ಬೀದಿ ಬೀದಿಯಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಅಲೆಯುವಂತೆ ಮಾಡಿದ್ದು @BJP4Karnataka ಯ ಸೋಲಿನ ದಿಗಿಲು!
— Karnataka Congress (@INCKarnataka) May 6, 2023
ಮೋದಿಯನ್ನು ಈ ಪರಿ ಗೋಳಾಡಿಸುವುದು ಸರಿಯೇ?
ಸೋಲುತ್ತೇವೆ ಎಂದು ಗೊತ್ತಿದ್ದೂ ಮೋದಿಯನ್ನು ಕರೆಸುವ ಮೂಲಕ ಮೋದಿಯ ಇಮೇಜ್ ಡ್ಯಾಮೇಜ್ ಮಾಡುವ ಹುನ್ನಾರ ನಡೆಸಿದ ಮೋದಿ ಶತ್ರುಗಳು ಬಿಜೆಪಿಯಲ್ಲೇ ಇದ್ದಾರೆ!!
ನರೇಂದ್ರ ಮೋದಿಗೆ ಪಕ್ಷದಲ್ಲೇ ಶತ್ರುಗಳಿದ್ದಾರಾ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ, "ಸೋಲುತ್ತೇವೆ ಎಂದು ಗೊತ್ತಿದ್ದೂ ಮೋದಿಯನ್ನು ಕರೆಸುವ ಮೂಲಕ ಮೋದಿಯ ಇಮೇಜ್ ಡ್ಯಾಮೇಜ್ ಮಾಡುವ ಹುನ್ನಾರ ನಡೆಸಿದ ಮೋದಿ ಶತ್ರುಗಳು ಬಿಜೆಪಿಯಲ್ಲೇ ಇದ್ದಾರೆ" ಎಂದು ಗಂಭೀರವಾದ ಆರೋಪ ಮಾಡಿದೆ.
ಅಭಿವೃದ್ಧಿಯ ಶೋ ಮಾಡಿ
ಮತ್ತೊಂದು ಟ್ವೀಟ್ ಮಾಡಿರುವ ಕೆಪಿಸಿಸಿ, "ನರೇಂದ್ರ ಮೋದಿಯವರೇ ನೀವು ಮಾಡಬೇಕಿರುವುದು ರೋಡ್ ಶೋ ಅಲ್ಲ, ಅಭಿವೃದ್ಧಿಯ ಶೋ. ಇಲ್ಲಿ ನಿಮ್ಮವರು ಅಧಿಕಾರದುದ್ದಕ್ಕೂ ಭ್ರಷ್ಟಾಚಾರದ ಶೋ ನಡೆಸಿದ್ದರು, ಸಿಡಿ ಶೋ ನಡೆಸಿದ್ದರು, ಬೇಜವಾಬ್ದಾರಿತನದ ಶೋ ನಡೆಸಿದ್ದರು. ಈಗ ನೀವು ರೋಡ್ ಶೋಕಿಗೆ ಬಂದಿದ್ದೀರಿ, ಏಕೆ ನಿಮ್ಮ ಬಾಯಲ್ಲಿ ಒಂದೇ ಒಂದು ಜನಪರ ಯೋಜನೆಗಳ ಹೆಸರು ಬರುತ್ತಿಲ್ಲ?" ಎಂದು ಪ್ರಶ್ನೆ ಮಾಡಿದೆ.
ಬೆಂಗಳೂರಿನಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಮೋದಿ ಎರಡು ದಿನ ರೋಡ್ ಶೋ ಮಾಡುತ್ತಿದ್ದಾರೆ. ಶನಿವಾರ ಬೆಳಗ್ಗೆ 9 ಗಂಟೆಯಿಂದ 1.30ರವರೆಗೆ ರೋಡ್ ಶೋ ಮಾಡಲಿದ್ದು, ಭಾನುವಾ ಬೆಳಿಗ್ಗೆ 9.30 ರಿಂದ 11.30 ರವರೆಗೆ ರೋಡ್ ಶೋ ಮಾಡಲಿದ್ದಾರೆ. ಬೆಂಗಳೂರಿನ 17 ವಿಧಾನಸಭಾ ಕ್ಷೇತ್ರಗಳಲ್ಲಿ ಅವರು ಮತಯಾಚನೆ ಮಾಡಲಿದ್ದಾರೆ.












Click it and Unblock the Notifications