ಜ.26 ರಂದು 'Narendra Modi for 2019' ಪುಸ್ತಕ ಲೋಕಾರ್ಪಣೆ

ಬೆಂಗಳೂರು, ಜನವರಿ 24: ಪ್ರಧಾನಿ ನರೆಂದ್ರ ಮೋದಿಯವರ ಬಗ್ಗೆ ಈಗಾಗಲೇ ಅನೇಕ ಪುಸ್ತಗಳು ಬಂದಿವೆ. ಆ ಸಾಲಿಗೆ ಹೊಸ ಸೇರ್ಪಡೆ ಪ್ರಸನ್ನ್ ಕಾರ್ತಿಕ್ ಅವರು ಬರೆದಿರುವ ಪುಸ್ತಕ 'Narendra Modi for 2019'.

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವುದರಿಂದ ಪ್ರಧಾನಿ ಮೋದಿಯವರು ತಂದಿರುವ ಯೋಜನೆಗಳ ಬಗ್ಗೆ ಈಗಾಗಲೇ ಅನೇಕರು ಜನ ಜಾಗೃತಿ ಮೂಡಿಸುತ್ತಿದ್ದಾರೆ. ಅದೇ ರೀತಿ ಈಗ ಪ್ರಸನ್ನ ಕಾರ್ತಿಕ್ ಕೂಡ ಮೋದಿಯವರು ತಂದಿರುವ ಜನಪ್ರಿಯ ಯೋಜನೆಗಳನ್ನು ಪುಸ್ತಕದಲ್ಲಿ ಉಲ್ಲೇಖಿಸುವುದರ ಜೊತೆಗೆ ವಾರಣಾಸಿಗೆ ಹೋಗಿ ಅಲ್ಲಿನ ಜನರೊಂದಿಗೆ ಮಾತನಾಡಿ, ಅಲ್ಲಿ ಮೋದಿಯವರು ಮಾಡಿರುವ ಪ್ರಗತಿ ಕಾರ್ಯಗಳ ಬಗ್ಗೆಯೂ ದಾಖಲಿಸಿದ್ದಾರೆ.

Narendra Modi for 2019 book will be released on January 26th

ಈ ಪುಸ್ತಕ ಇದೇ ಶನಿವಾರ ಅಂದರೆ ಜ.26ರಂದು ಶ್ರೀರಾಮಪುರದ ಪವನ್ ಇಂಗ್ಲಿಷ್ ಶಾಲೆಯಲ್ಲಿ ಸಂಜೆ ನಾಲ್ಕುವರೆ ಗಂಟೆಗೆ ಲೋಕಾರ್ಪಣೆಯಾಗಲಿದೆ. ಈ ಪುಸ್ತಕದ ಬಗ್ಗೆ ಮಾತಾಡಿದ ಲೇಖಕ ಪ್ರಸನ್ನ್ ಕಾರ್ತಿಕ್, "ಮತ್ತೊಮ್ಮೆ ಮೋದಿಯವರು ಯಾಕೆ ಪ್ರಧಾನಿ ಆಗಬೇಕು? ಅವರಿಗೆ ನಾವು ಏಕೆ ಮತ ನೀಡಬೇಕು?" ಎಂಬುದನ್ನು ಈ ಪುಸ್ತಕದಲ್ಲಿ ವಿಸ್ತಾರವಾಗಿ ಬರೆದಿದ್ದೀನಿ ಎಂದರು.

Narendra Modi for 2019 book will be released on January 26th

ಸಾಕ್ಷ್ಯಚಿತ್ರ ಲೋಕಾರ್ಪಣೆ
ಈ ಪುಸ್ತಕದ ಜೊತೆ "ಶಾರದ ಪೀಠದ ಗುರುಪರಂಪರೆ" ಸಾಕ್ಷ್ಯಚಿತ್ರವೂ ಲೋಕಾರ್ಪಣೆಯಾಗಲಿದೆ. ಈ ಸಾಕ್ಷ್ಯಚಿತ್ರದಲ್ಲಿ ಶಂಕರಚಾರ್ಯರು ಸ್ಥಾಪಿಸಿದ ಶೃಂಗೇರಿ ಶಾರದ ಪೀಠದ ಎಲ್ಲಾ ಜಗದ್ಗುರುಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಸಾಕ್ಷ್ಯಚಿತ್ರಕ್ಕೆ ಈ ಗಾಯಕಿ ಇಂಚರಾ ವಿ ಪಥಾಕ್ ಅವರು ಎಲ್ಲ ಜಗದ್ಗುರುಗಳ ಶ್ಲೋಕಗಳನ್ನು ಹಾಡಿದ್ದಾರೆ. ಈಗಾಗಲೇ ಅನೇಕ ಕಾರ್ಯಕ್ರಮಗಳಲ್ಲಿ ಹಾಡಿರುವ ಇವರು, ಮೊದಲ ಬಾರಿಗೆ ಸಾಕ್ಷ್ಯಚಿತ್ರವೊಂದಕ್ಕೆ ಹಾಡಿದ್ಡಾರೆ. ಸ್ವಯಂಬು ರೆಕಾರ್ಡ್ಸ್ ಎಂಬ ಸಂಸ್ಥೆ ಈ ಸಾಕ್ಷ್ಯಚಿತ್ರಕ್ಕೆ ಹಿನ್ನಲೆ ಸಂಗೀತವನ್ನು ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+