ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣಾ ಅಭಿಯಾನ, ಮಿಷನ್ 272+ಗೆ ಪ್ರಶಸ್ತಿ

By Mahesh
|
Google Oneindia Kannada News

ಬೆಂಗಳೂರು, ನ.18: ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಸಾಮಾಜಿಕ ಜಾಲತಾಣಗಳನ್ನು ಬಳಸಿ ಜನರನ್ನು ಸೆಳೆದಿದ್ದು ಎಲ್ಲರಿಗೂ ಗೊತ್ತೇ ಇದೆ. ಮೋದಿ ಅವರ ಐತಿಹಾಸಿಕ ಜಯಕ್ಕೆ ಕಾರಣವಾದ ಡಿಜಿಟಲ್ ಹಾಗೂ ಸಮೂಹ ಮಾಧ್ಯಮ ತಂಡಕ್ಕೆ ಡೇಟಾಕ್ವೆಸ್ಟ್ ಪಾಥ್ ಬ್ರೇಕರ್ ಪ್ರಶಸ್ತಿ ಸಿಕ್ಕಿದೆ.

ದೇಶದ ಎಲ್ಲಾ ಸಾರ್ವಜನಿಕರಿಗೂ ಮಾಹಿತಿ ಮತ್ತು ತಂತ್ರಜ್ಞಾನದ ಲಾಭ ಸಿಗಬೇಕು ಎಂಬುದು ಪ್ರಧಾನಿ ಕನಸಾಗಿದೆ. ಸರ್ಕಾರದ ಕನಸು ಹಾಗೂ ಆಶೋತ್ತರಗಳನ್ನು ಜನರಿಗೆ ತಲುಪಿಸಿ ಅವರ ಪ್ರತಿಕ್ರಿಯೆ ಪಡೆಯುವುದು ಆಡಳಿತದಲ್ಲಿ ಮಹತ್ವದ ಪಾತ್ರವಹಿಸಲಿದೆ ಎಂದು ನಮ್ಮ ಸರ್ಕಾರ ನಂಬಿದೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಡಾ. ಅರವಿಂದ್ ಗುಪ್ತಾ ಅವರು ಯುಎಸ್ ನಿಂದ ವಿಡಿಯೋ ಮೂಲಕ ಸಂದೇಶ ಕಳಿಸಿದ್ದರು.

Narendra Modi’s Digital Team for Mission272+ bags Dataquest Pathbreaker Award

ಮೋದಿ ಅವರ ಐಟಿ ಕ್ರಾಂತಿ : ಸಾಮಾಜಿಕ ಜಾಲ ತಾಣ ಟ್ವಿಟ್ಟರ್, ಫೇಸ್ ಬುಕ್, ಇದೀಗ ಇನ್ಸ್ಟಾ ಗ್ರಾಮ್ ನಲ್ಲಿ ಮೋದಿ ಅವರು ಸಕ್ರಿಯರಾಗಿದ್ದಾರೆ. ಆಲ್ ಇಂಡಿಯಾ ರೇಡಿಯೋ ಮೂಲಕ ಪ್ರತಿ ತಿಂಗಳು ಮನ್ ಕಿ ಬಾತ್ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಪ್ರಧಾನಿ ಅವರ ಕನಸಿನ ಯೋಜನೆಯಾದ 'ಜನ್ ಧನ್ ಯೋಜನೆ' ಕೂಡಾ ಆನ್ ಲೈನ್ ಮೂಲಕವೇ ಲೋಕಾರ್ಪಣೆಗೊಂಡಿದ್ದು ವಿಶೇಷ.

ಮೋದಿ ಅವರು ಡಿಜಿಟಲ್ ಕ್ರಾಂತಿಗೆ ನಾಂದಿ ಹಾಡುವುದಕ್ಕೂ ಮುನ್ನ ಚುನಾವಣೆಯಲ್ಲಿ ಕ್ರಾಂತಿ ಮಾಡಲು ಕಾರಣವಾದ ಮಿಷನ್ 272+ ಗೆ ಡೇಟಾಕ್ವೆಸ್ಟ್ ಪಾಥ್ ಬ್ರೇಕರ್ ಪ್ರಶಸ್ತಿ ಲಭಿಸಿದೆ.

ನಿತಿ ಡಿಜಿಟಲ್ ಸಿಇಒ ಶಶಿ ಶೇಖರ್ ಹಾಗೂ ಒನ್ ಇಂಡಿಯಾ ಸ್ಥಾಪಕ, ವ್ಯವಸ್ಥಾಪಕ ನಿರ್ದೇಶಕ ಬಿ.ಜಿ ಮಹೇಶ್ ಅವರು ಮಿಷನ್ 272+ ತಂಡದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.

ವಿವಿಧ ಪ್ರಶಸ್ತಿಗಳನ್ನು ನೀಡಿ ಮಾತನಾಡಿದ ಇನ್ಫೋಸಿಸ್ ನ ಸಹ ಸ್ಥಾಪಕ ಎನ್.ಆರ್ ನಾರಾಯಣ ಮೂರ್ತಿ, 'ಭಾರತದ ಐಟಿ ಕ್ಷೇತ್ರಕ್ಕೆ ಡೇಟಾ ಕ್ವೇಸ್ಟ್ ತನ್ನದೇ ಆದ ರೀತಿಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದೆ. ಸಾಧಕರನ್ನು ಗುರುತಿಸಿ ಸನ್ಮಾನಿಸುವ ಮೂಲಕ ತಂತ್ರಜ್ಞಾನದಲ್ಲಿನ ಬದಲಾವಣೆ, ಬೆಳವಣಿಗೆ, ಅಭಿವೃದ್ಧಿಗೆ ಕಾರಣವಾಗಿದೆ ಎಂದರು. ಎನ್.ಆರ್ ನಾರಾಯಣ ಮೂರ್ತಿ ಅವರು 1996ರಲ್ಲಿ ಡೇಟಾ ಕ್ವೆಸ್ಟ್ ಐಟಿ ವರ್ಷದ ವ್ಯಕ್ತಿ ಪ್ರಶಸ್ತಿ ಪಡೆದಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

English summary
Prime Minister Narendra Modi's digital and social media team for 2014 general elections that played an important role in the historical win for the Bhartiya Janta Party, bagged the Dataquest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X