ಇಂದು ತುಂಬಾ ಸಂತೋಷದ ದಿನ: ಇನ್ಫೋಸಿನ್ ನಾರಾಯಣಮೂರ್ತಿ ಹೀಗೆ ಹೇಳಿದ್ಯಾಕೆ?
ಬೆಂಗಳೂರು, ಏಪ್ರಿಲ್, 26: ಕರ್ನಾಟಕದಲ್ಲಿ ಇಂದು (ಏಪ್ರಿಲ್ 26) ಲೋಕಸಭಾ ಚುನಾವಣೆಯ ಮೋದಲ ಹಂತದ ಮತದಾನ ಆರಂಭವಾಗಿದೆ. ಇನ್ನು ಇಂದು (ಏಪ್ರಿಲ್ 26) ಬೆಳ್ಳಂಬೆಳಗ್ಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಜಯನಗರದ ಮತಗಟ್ಟೆಯಲ್ಲಿ ಇನ್ಫೋಸಿಸ್ ನಾರಾಯಣಮೂರ್ತಿ ದಂಪತಿ ಮತ ಚಲಾವಣೆ ಮಾಡಿದ್ದಾರೆ. ಹಾಗಾದರೆ ಈ ವೇಳೆ ಅವರು ಏನು ಹೇಳಿದ್ದಾರೆ ಎಂದು ಇಲ್ಲಿ ನೋಡೋಣ ಬನ್ನಿ.
ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ ಮತ್ತು ಪತ್ನಿ ಸುಧಾ ಮೂರ್ತಿ ಬೆಂಗಳೂರಿನ ಆರಂಭಿಕವಾಗಿ ಮತದಾನ ಮಾಡಿದವರ ಪಟ್ಟಿಗೆ ಸೇರಿದ್ದಾರೆ. ಜಯನಗರದಲ್ಲಿ ಮತ ಚಲಾಯಿಸಿದ ಬಳಿಕ ಮಾತನಾಡಿದ ಅವರು, ಇತರರು ಕೂಡ ತಮ್ಮ ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಚಲಾಯಿಸುವಂತೆ ಒತ್ತಾಯಿಸಿದರು.

"ನಮ್ಮನ್ನು ಆಳಲು ಬರುವ ಯಾವುದೇ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ನಮ್ಮ ಸಂವಿಧಾನವು ನೀಡಿರುವ ಹಕ್ಕನ್ನು ಚಲಾಯಿಸಲು ಇದು ನಮಗೆ ಒಳ್ಳೆಯ ಅವಕಾಶವಾಗಿದೆ. ಇಂದು ಬಹಳ ಸಂತೋಷದ ದಿನ. ನಾವೆಲ್ಲರೂ ನಮ್ಮ ಹಕ್ಕನ್ನು ಚಲಾಯಿಸಲು ಉತ್ಸಾಹದಿಂದ ಇರಬೇಕಾದ ದಿನ ಇದಾಗಿದೆ," ಎಂದು ಹೇಳಿದರು.
ಇಂದು (ಏಪ್ರಿಲ್ 26) ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗೆ ಮೊದಲ ಹಂತದವಾಗಿ 14 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಒಳಪಡುವ ಜಯನಗರದ ಮತಗಟ್ಟೆಯಲ್ಲಿ ಇನ್ಫೋಸಿಸ್ ನಾರಾಯಣ ಮೂರ್ತಿ ದಂಪತಿ ಮತದಾನ ಮಾಡಿ ಇತರ ಮತದಾರರಿಗೆ ತಮ್ಮ ಹಕ್ಕನ್ನು ಚಲಾಯಿಸುವಂತೆಯೂ ಹೇಳಿದರು.












Click it and Unblock the Notifications