• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನ ಜನತೆಗೆ ವರವಾಗಿ ಬಂದಿದೆ ನ್ಯಾನೋ ಟ್ಯಾಕ್ಸಿ

By Prasad
|

ಬೆಂಗಳೂರು, ಡಿ. 6 : ಬೆಂಗಳೂರಿನ ರಸ್ತೆಗಳನ್ನು ಅಕ್ಷರಶಃ ಆಳುತ್ತಿದ್ದ ಆಟೋ ರಿಕ್ಷಾಗಳಿಗೆ ಸಣ್ಣಗೆ ನಡುಕ ಶುರುವಾಗಿದೆ. ಬಂದ್ ಇರುವಾಗ, ನಸುಕಿನಲ್ಲಿ ಮತ್ತು ರಾತ್ರಿಯಾಗುತ್ತಿದ್ದಂತೆ ಪ್ರಯಾಣಿಕರಿಂದ ಜಾಸ್ತಿ ದುಡ್ಡು ಕಿತ್ತುತ್ತಿರುವ ಆಟೋ ಚಾಲಕರ ಮುಂದೆ ರಾಜಾರೋಶವಾಗಿ ನ್ಯಾನೋ ಟ್ಯಾಕ್ಸಿ ಬಂದು ನಿಂತಿದೆ.

ಆಟೋ ಚಾಲಕರ ದರ್ಬಾರು, ಕರೆದಾಗ ಬಾರದಿರುವುದು, ಮೀಟರಿಗಿಂತ ಜಾಸ್ತಿ ತೆತ್ತು ಬೇಸತ್ತಿದ್ದ ಬೆಂಗಳೂರಿನ ನಿವಾಸಿಗಳಿಗೆ ಟ್ಯಾಕ್ಸಿ ಫಾರ್ ಶೂರ್ ಕಂಪನಿಯ ನ್ಯಾನೋ ಟ್ಯಾಕ್ಸಿ ವರವಾಗಿ ಬಂದಿದೆ. ವಾಹನನಿಬಿಡ ರಸ್ತೆಗಳಲ್ಲಿ ನಿಂತಲ್ಲೇ 360 ಡಿಗ್ರಿ ತಿರುಗುವ ತಾಕತ್ತು ಇರುವ ಆಟೋಗಳಿಗೆ ಪರ್ಯಾಯವಾಗಿ ಬಂದಿರುವ ನ್ಯಾನೋ ಯಶಸ್ಸು ಕಾಣುವುದಾ? ಕಾಲವೇ ನಿರ್ಧರಿಸಲಿದೆ.

ಬೆಂಗಳೂರು ಅಗಾಧವಾಗಿ ಬೆಳೆಯುತ್ತಿದ್ದಂತೆ ಹಲವಾರು ಬದಲಾವಣೆಗಳಿಗೆ ತೆರೆದುಕೊಳ್ಳುತ್ತಿದೆ. ಮೆಟ್ರೋ ಪಾದಾರ್ಪಣೆ ಮಾಡಿ ಸರಸರ ಅಡ್ಡಾಡಲು ಆರಂಭಿಸಿದೆ. ಜನಸಂಖ್ಯೆ ಜಾಸ್ತಿಯಾಗುತ್ತಿದ್ದಂತೆ ಬಸ್ಸಿನಲ್ಲಿ ಅಡ್ಡಾಡಲು ಕಷ್ಟವೆನಿಸಿದಾಗ ಹಲವರು ಕಾರ್ ಪೂಲಿಂಗ್ ಶುರುಮಾಡಿದ್ದರೂ, ಅದನ್ನೇ ನೆಚ್ಚುವ ಹಾಗಿಲ್ಲ. ಜಾಸ್ತಿ ಹಣವೂ ಖರ್ಚಾಗಬಾರದು, ಸಮಯವೂ ಉಳಿಯಬೇಕು ಎಂದು ಚಿಂತನೆ ಮಾಡಿದಾಗ ನ್ಯಾನೋ ಟ್ಯಾಕ್ಸಿ ಸಹಜವಾಗಿ ಜನರ ಆಯ್ಕೆಯಾದರೂ ಅಚ್ಚರಿಯಿಲ್ಲ.

ಮಾಟಾಗಿದ್ದರೂ ಅತ್ಯಂತ ಮುದ್ದಾಗಿರುವ ಮತ್ತೆ ಹೆಚ್ಚು ಮೈಲೇಜ್ ಕೊಡುವ ನ್ಯಾನೋ ಬೆಂಗಳೂರಿನ ವಾಹನನಿಬಿಡ ರಸ್ತೆಗಳಲ್ಲಿ ಸರಸರನೆ ಸಾಗಬಲ್ಲದು. ಬುಕ್ ಮಾಡುವುದು ಸುಲಭ ಮತ್ತು ಹತ್ತಿರದ ಗಮ್ಯಕ್ಕೆ ಸಾಗುವುದಿದ್ದರೆ ನ್ಯಾನೋ ಹೇಳಿ ಮಾಡಿಸಿದ ಟ್ಯಾಕ್ಸಿ. ಎಲ್ಲಕ್ಕಿಂತ ಹೆಚ್ಚಾಗಿ ಆಟೋದರಕ್ಕಿಂತ ನ್ಯಾನೋ ಟ್ಯಾಕ್ಸಿ ದರ ಸೋವಿ. ಇನ್ನೇನು ಬೇಕು? [ಬೆಂಗಳೂರಲ್ಲಿ ಆಟೋ ಪ್ರಯಾಣ ದರ ಕಡಿಮೆ?]

ಸುಲಭವಾಗಿ ಸಿಗುತ್ತದೆ

ಸ್ಮಾರ್ಟ್ ಫೋನಲ್ಲಿ ಜಿಪಿಎಸ್ ಬಳಸುವ ಮುಖಾಂತರ ನಾವಿರುವ ಪ್ರದೇಶದ ಮೂರು ಕಿ.ಮೀ. ವಿಸ್ತೀರ್ಣದಲ್ಲಿ ನ್ಯಾನೋ ಟ್ಯಾಕ್ಸಿಯನ್ನು ಸುಲಭವಾಗಿ ತರಿಸಿಕೊಳ್ಳಬಹುದು. ಕೇವಲ ಹದಿನೈದು ನಿಮಿಷದ ಅವಧಿಯಲ್ಲಿ ನೀವಿದ್ದ ಸ್ಥಳದಲ್ಲಿ ನ್ಯಾನೋ ಬಂದು ನಿಲ್ಲಲಿದೆ.

ದುಬಾರಿಯಲ್ಲದ ನ್ಯಾನೋ ಟ್ಯಾಕ್ಸಿ

ಆಟೋ ರಿಕ್ಷಾ ಎರಡು ಕಿ.ಮೀ.ಗೆ ಕನಿಷ್ಠ 25 ರು. ಮತ್ತು ಪ್ರತಿ ಕಿ.ಮೀ.ಗೆ 13 ರು. ಚಾರ್ಜ್ ಮಾಡಿದರೆ, ನ್ಯಾನೋ ಟ್ಯಾಕ್ಸಿ ಎರಡು ಕಿ.ಮೀ.ಗೆ 25 ರು. ಚಾರ್ಜ್ ಮಾಡಿದರೂ ಮುಂದಿನ ಪ್ರತಿ ಕಿ.ಮೀ.ಗೆ ಕೇವಲ 10 ರು. ಶುಲ್ಕ ವಿಧಿಸುತ್ತದೆ. ಅಲ್ಲದೆ, ರಾತ್ರಿಯ ಮತ್ತು ಕಾಯುವ ಹೆಚ್ಚುವರಿ ಶುಲ್ಕವೂ ಇರುವುದಿಲ್ಲ ಎಂದು ಟ್ಯಾಕ್ಸಿ ಫಾರ್ ಶೂರ್ ಹೇಳಿದೆ.

ನ್ಯಾನೋ ಟ್ಯಾಕ್ಸಿ ಬುಕ್ ಮಾಡುವುದು ಹೇಗೆ?

ಬೆರಳ ತುದಿಯಲ್ಲಿ ನ್ಯಾನೋ ಟ್ಯಾಕ್ಸಿ ಬುಕ್ ಮಾಡಬಹುದು. TaxiForSure App ಇನ್‌ಸ್ಟಾಲ್ ಮಾಡಿಕೊಂಡು, ಜಿಪಿಎಸ್ ಆನ್ ಮಾಡಿಕೊಂಡು ಪಿಕ್ ನೌ ಬಟನ್ ಒತ್ತಿ ನ್ಯಾನೋ ಟ್ಯಾಕ್ಸಿ ಬುಕ್ ಮಾಡಬಹುದು. ಸ್ಮಾರ್ಟ್ ಫೋನ್ ಬಳಸುವವರಿಗೆ ಇದು ಅತಿ ಸುಲಭ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Nano Taxi chellanges Auto on Bengaluru road. TaxiForSure has started Nano taxi service in Bengaluru. When boarding an auto has become a headache for the people, cost effective and easy to find Nano taxi has come as welcome option to the passengers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more