Yellow Line Namma Metro: ರೈಲಿನಲ್ಲಿ ಮತ್ತೆ ತಾಂತ್ರಿಕ ಲೋಪ, BMRLCಗೆ ನೆಟ್ಟಿಗರ ಮಹತ್ವದ ಸಲಹೆ

ಬೆಂಗಳೂರು, ನವೆಂಬರ್ 12: ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗವು ಸಾರ್ವಜನಿಕರಿಗೆ ಮುಕ್ತವಾದ ನಂತರ ಆಗಾಗ ರೈಲುಗಳಲ್ಲಿ ತಾಂತ್ರಿಕ ತೊಂದರೆ ಉಂಟಾಗುತ್ತಲೇ ಇದೆ. ಇವತ್ತು ಬುಧವಾರವು ಸಹ ಬೆಳ್ಳಗ್ಗೆ ತಾಂತ್ರಿಕ ತೊಂದರೆ ಉಂಟಾಗಿ ರೈಲು ಸಂಚಾರ ವಿಳಂಬವಾದ ಬಗ್ಗೆ ಸ್ವತಃ ಬೆಂಗಳೂರು ಮೆಟ್ರೋ ರೈಲು ನಿಗಮ (BMRLC) ಮಾಹಿತಿ ನೀಡಿದೆ. ಬಳಿಕ ಸರಿ ಮಾಡಿದ ಕಾರ್ಯಾಚರಣೆ ಮಾಡಲಾಯಿತು. ಈ ವಿಚಾರ ಹಂಚಿಕೊಂಡ ಅಧಿಕಾರಿಗಳಿಗೆ ಜಾಲತಾಣದಲ್ಲಿ ಮಹತ್ವದ ಸಲಹೆ ನೀಡಲಾಗಿದೆ.

ಆರ್‌.ವಿ.ರಸ್ತೆಯಿಂದ ಬೊಮ್ಮಸಂದ್ರ ವರೆಗಿನ 19 ಕಿಲೋ ಮೀಟರ್ ಉದ್ದದ ಹಳದಿ ಮಾರ್ಗದಲ್ಲಿ ಡ್ರೈವರ್‌ಲೆಸ್ ಮೆಟ್ರೋ ರೈಲುಗಳು ಚಾಲಕ ಸಹಿತವಾಗಿ ಓಡಾಡುತ್ತಿವೆ. ನವೆಂಬರ್ 01ರಿಂದ ಐದನೇ ರೈಲು ಸಹ ಕಾರ್ಯಾಚರಣೆಗೆ ಇಳಿದಿದೆ. ಹೀಗಿರುವಾಗ ಇಂದು ಬುಧವಾರ ರೈಲೊಂದರಲ್ಲಿ ತಾಂತ್ರಿಕ ತೊಂದರೆ ಉಂಟಾಗಿದೆ. ರೈಲು ಸಂಚಾರದಲ್ಲಿ ವಿಳಂಬವಾಗುವ ಸಾಧ್ಯತೆಯಿದೆ. ನಮ್ಮ ಮೆಟ್ರೋ ಪ್ರಯಾಣಿಕರ ಮಾಹಿತಿಗಾಗಿ ತಿಳಿಸಲಾಗಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ವಿಷಾದಿಸುತ್ತೇವೆ ಎಂದು ಬಿಎಂಆರ್‌ಸಿಎಲ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ.

Namma Metro Yellow Line Train Faces Technical Glitch Service Restored After Short Delay

ಕೆಲ ಹೊತ್ತಿನ ಬಳಿಕ ಮೆಟ್ರೋ ರೈಲಿನಲ್ಲಿ ಆಗಿದ್ದ ತಾಂತ್ರಿಕ ಸಮಸ್ಯೆ ಸರಿಪಡಿಸಿ ಎಂದಿನಂತೆ ಸಂಚಾರ ಮುಂದುವರಿಸಲಾಗಿದೆ. ಬೆಳಿಗ್ಗೆ 08:47 ಗಂಟೆಗೆ ಸಮಸ್ಯೆ ಪರಿಹರಿಸಲಾಗಿದೆ. ದೈನಂದಿನ ವೇಳಾಪಟ್ಟಿಯಂತೆ ರೈಲುಗಳು ಈ ಮಾರ್ಗದಲ್ಲಿ ಓಡಾಡಲಿವೆ. ಹಳದಿ ಮಾರ್ಗದ ಎಲ್ಲ ರೈಲುಗಳು ಎಂದಿನಂತೆ ಸೇವೆಯಲ್ಲಿದ್ದು, ಸೇವೆಗಳು ಪುನರಾರಂಭಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆಯು ಎರಡು ಮೂರು ಭಾರಿ ಇದೇ ಮಾರ್ಗದ ರೈಲಿನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿತ್ತು. ಆಗಲೂ ಕೆಲ ಹೊತ್ತು ಪ್ರಮಾಣಿಕರು ಕಾದು ಕುಳಿತ ನಂತರ ಪ್ರಯಾಣಿಸಬೇಕಾಯಿತು. ಅರಂಭದಲ್ಲಿ ಇಂಟರ್‌ಚೇಂಜ್ ನಿಲ್ದಾಣವಾದ ಆರ್‌.ವಿ.ರಸ್ತೆಯಲ್ಲಿ ಜನ ದಟ್ಟಣೆ ಹೆಚ್ಚಾಗಿತ್ತು. ಸೂಕ್ತ ವ್ಯವಸ್ಥೆ ಇರಲಿಲ್ಲ ಎಂಬ ಆರೋಪ ಸಹ ಕೇಳಿ ಬಂದಿತ್ತು.

ಇಂದಿನ ಸಮಸ್ಯೆ ಕುರಿತು ಮಾಹಿತಿ ನೀಡಿದ ಮೆಟ್ರೋ ಅಧಿಕಾರಿಗಳಿಗೆ ಮೆಚ್ಚುಗೆ ವ್ಯಕ್ತವಾಗಿದೆ. "ಕೊನೆಗೆ ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಉಂಟಾಗಿರುವ ಸಮಸ್ಯೆ ಬಗ್ಗೆ ನೈಜ ಸಮಯದ ಮಾಹಿತಿ ಹಂಚಿಕೊಂಡಿದೆ ಎಂದು ನೆಟ್ಟಿಗರೊಬ್ಬರು ಶ್ಲಾಘಿಸಿದ್ದಾರೆ. ಆದರೆ ಎಷ್ಟು ಮೆಟ್ರೋ ಸವಾರರು "X" ಜಾಲತಾಣ ಬಳಸುತ್ತಾರೆ? ಅಲ್ಲದೇ ಎಷ್ಟು "X" ಬಳಕೆದಾರರು ಕನ್ನಡವನ್ನು ಓದುತ್ತಾರೆ? ಈ ಸಂದೇಶಗಳನ್ನು ಪ್ರಸಾರ ಮಾಡಲು ನಮ್ಮ ಮೆಟ್ರೋ ವಾಟ್ಸಾಪ್ ಚಾನಲ್ ಅನ್ನು ಬಳಸುವುದು ಉತ್ತಮ' ಎಂದು ಸಲಹೆ ನೀಡಿದ್ದಾರೆ.

ಈ ನೆಲದಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನವಿದೆ. ಕನ್ನಡ ಭಾಷೆ ಇಲ್ಲಿ ನೆಲೆಸಿರುವವರ ದೈನಂದಿನ ಚಟುವಟಿಕೆಯ ಭಾಗವಾಗಿ ಕನ್ನಡ ಭಾಷೆ ನಿಲ್ಲುತ್ತದೆ. ಕನ್ನಡ ಎಷ್ಟು ಜನ ಓದುತ್ತಾರೆ ಎಂಬುದು ಮುಖ್ಯ ವಿಷಯವಾಗಿರದೇ, ಬಿಎಂಆರ್‌ಸಿಎಲ್ ರೈಲು ಸೇವೆ ಕುರಿತು ಮಾಹಿತಿಯನ್ನು ವಾಟ್ಸಾಪ್ ಚಾನಲ್‌ನಲ್ಲಿ ಹಂಚಿಕೊಂಡರೆ ಒಳಿತು ಎನ್ನಬಹುದು. ಯಾವುದೇ ಭಾಷೆಯಲ್ಲಾದರೂ ವಾಟ್ಸಾಪ್ ಚಾನಲ್ ಮೂಲಕ ಹಂಚಿಕೊಂಡರೆ ಹೆಚ್ಚಿನ ಪ್ರಯಾಣಿಕರಿಗೆ ತಲುಪುತ್ತದೆ ಎಂಬ ಸಲಹೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+