Namma Metro: ಹಳದಿ ಲೈನ್ ಪ್ರಯಾಣಿಕರಿಗೆ ಗುಡ್‌ನ್ಯೂಸ್: 4ನೇ ಸಂಚಾರ ಶುರು, ಬದಲಾವಣೆ ಗಮನಿಸಿ
ಬೆಂಗಳೂರು, ಸೆಪ್ಟಂಬರ್ 10: ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಮೂರು ರೈಲುಗಳನ್ನು ಕಾರ್ಯಾಚರಣೆ ಮಾಡುತ್ತಿದ್ದ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (BMRCL) 4ನೇ ರೈಲು ಸೆಟ್ ಅನ್ನು ಕಾರ್ಯಾಚರಣೆಗೆ ಸೇರಿಸಿದೆ. ಈ ಸಂಬಂಧ ಮೆಟ್ರೋ ರೈಲುಗಳ ಆವರ್ತನ ಸಮಯವನ್ನು ಈ ಕೆಳಗಿನಂತೆ ಪರಿಷ್ಕರಿಸಿದೆ. ಆರ್.ವಿ.ರಸ್ತೆ-ಬೊಮ್ಮಸಂದ್ರ ಪ್ರಯಾಣಿಕರಿಗೆ ಮೆಟ್ರೋ ಗುಡ್‌ನ್ಯೂಸ್ ನೀಡಿದೆ.
ಹೌದು, ಆಗಸ್ಟ್ 14ರಂದು ಬೆಂಗಳೂರಿಗೆ ಹೆಬ್ಬಗೋಡಿ ಡಿಪೋಗೆ ಆಗಮಿಸಿದ್ದ ಹಳದಿ ಮಾರ್ಗ ಡ್ರವೈರ್‌ಲೆಸ್ ನಾಲ್ಕನೇ ರೈಲಿನ ಪರೀಕ್ಷಗಳು ಪೂರ್ಣಗೊಂಡಿವೆ. ಇಂದು ಸೆಪ್ಟಂಬರ್ 10ರಿಂದ ನಾಲ್ಕನೇ ರೈಲು ಸಹ ಪ್ರಯಾಣಿರಿಗೆ ಸೇವೆ ನೀಡಲಿದೆ. ಇದರಿಂದಾಗಿ ಆ.10ರಿಂದ ಮೂರು ರೈಲುಗಳ ಸಂಚಾರ ಪ್ರತಿ 25ಕ್ಕೆ ಒಂದರಂತೆ ಇತ್ತು. ಅದೀಗ 19ನಿಮಿಷಿಗಳಿಗೆ ಇಳಿಕೆ ಆಗಲಿದೆ ಎಂದು BMRCL ಅಧಿಕೃತ ಮಾಹಿತಿ ನೀಡಿದೆ. ಇದರಿಂದ ಪ್ರಯಾಣಿಕರಿಗೆ ಈವರೆಗೆ ಇದ್ದ ಕಿರಿಕಿರಿ ಕೊಂಚ ಕಡಿಮೆ ಆಗಿದೆ.

ರೈಲುಗಳ ಸಂಚಾರ, ಆವರ್ತನ ಸಮಯ ಪರಿಷ್ಕರಣೆ
ಹಳದಿ ಮಾರ್ಗದ ರೈಲುಗಳು ಆವರ್ತನ ನೊಡುವುದಾದರೆ ಎಲ್ಲಾ ದಿನಗಳಲ್ಲಿ ರೈಲುಗಳು ಈಗ 19 ನಿಮಿಷಗಳ ಮಧ್ಯಂತರದಲ್ಲಿ ಚಲಿಸುತ್ತವೆ. ಸೆಪ್ಟಂಬರ್ 09ರವರೆಗೆ 25 ನಿಮಿಷಗಳ ಮಧ್ಯಂತರದಲ್ಲಿ ಚಲಿಸುತ್ತಿದ್ದವು. ಈ ಮಾರ್ಗದಲ್ಲಿ ಮೊದಲ ರೈಲು ಸೋಮವಾರದಿಂದ ಶನಿವಾರವರೆಗೆ ಮೊದಲು ರೈಲು ಬೆಳಗ್ಗೆ 6.30 ಗಂಟೆಗೆ ಬದಲಾಗಿ ಬೆಳಗ್ಗೆ 06:00 ಕಾರ್ಯಾಚರಣೆ ಆರಂಭಿಸಲಿದೆ. ಭಾನುವಾರದಂದು ಮಾತ್ರವೇ ಮೊದಲ ಮೆಟ್ರೋ ಬೆಳಗ್ಗೆ 07 ಗಂಟೆಗೆ ಸಂಚಾರ ಆರಂಭಿಸಲಿದೆ.
ಇನ್ನೂ ಕೊನೆಯ ರೈಲು ಸಂಚಾರ ಸಮಯ ನೋಡುವುದಾದರೆ, ಆರ್.ವಿ. ರಸ್ತೆಯಿಂದ ರಾತ್ರಿ 11:55 (ಬದಲಾವಣೆ ಇಲ್ಲ)
ಗಂಟೆಗೆ ಸಂಚಾರ ಆರಂಭಿಸಿದರೆ, ಬೊಮ್ಮಸಂದ್ರ ನಿಲ್ದಾಣದಿಂದ ರಾತ್ರಿ 10:42 (ಬದಲಾವಣೆ ಇಲ್ಲ) ಗಂಟೆಗೆ ಸಂಚಾರ ಆರಂಭಿಸಿತ್ತು. ಪ್ರಯಾಣಿಕರು ಈ ಬದಲಾವಣೆಗಳನ್ನು ಗಮನಿಸಿ ಸುಧಾರಿತ ಸೌಲಭ್ಯವನ್ನು ಪಡೆದುಕೊಳ್ಳುವಂತೆ BMRCL ತಿಳಿಸಿದೆ.
ಪ್ರಯಾಣಿಕರ ಸಮಯ ಉಳಿತಾಯ
ಪ್ರಯಾಣಿಕರು ಒಂದು ರೈಲಿನಿಂದ ಮತ್ತೊಂದು ರೈಲಿಗೆ ಸುಮಾರು 25 ನಿಮಿಷ ಕಾರ್ಯಬೇಕಿತ್ತು. ಅದೀಗ 19 ನಿಮಿಷಕ್ಕೆ ಇಳಿಕೆ ಆಗಿದೆ. ಹಸಿರು ಮಾರ್ಗದಿಂದ ಬಂದು ಆರ್‌ವಿ ರಸ್ತೆಯಲ್ಲಿ ಹಳದಿ ಮಾರ್ಗಕ್ಕೆ ಪ್ರಯಾಣ ಬದಲಿಸುವವರಿಗೆ, ಉದ್ಯೋಗಿಗಳಿಗೆ, ಈ ಭಾಗದ ಸಾವಿರಾರು ಜನರಿಗೆ ಕೊಂಚ ರಿಲೀಫ್ ಸಿಕ್ಕಿದೆ. ಅಕ್ಟೋಬರ್‌ನಿಂದ ಪ್ರತಿ ತಿಂಗಳು ಎರಡು ರೈಲು ಪೂರೈಕೆ ಮಾಡುವುದಾಗಿ ಪಶ್ಚಿಮ ಬಂಗಾಳದ ಟಿಟಾಗಢ ಕಂಪನಿ ತಿಳಿಸಿದೆ. ಎಲ್ಲವು ಅಂದುಕೊಂಡಂತೆ ಆದರೆ ಈ ವರ್ಷಾಂತ್ಯಕ್ಕೆ ಹಲವು ರೈಲುಗಳು ಈ ಹಳದಿ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುವುದು ನಿಶ್ಚಿತ ಎನ್ನಲಾಗಿದೆ.












Click it and Unblock the Notifications