ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದಿನಿಂದ ರಾತ್ರಿ 12 ಗಂಟೆವರೆಗೂ ಮೆಟ್ರೋ ರೈಲು ಓಡಾಡುತ್ತೆ

|
Google Oneindia Kannada News

Recommended Video

ರಾತ್ರಿ 12 ಗಂಟೆವರೆಗೂ ಮೆಟ್ರೋ ರೈಲು | METRO | BENGALURU | ONEINDIA KANNADA

ಬೆಂಗಳೂರು, ಜನವರಿ 1: ನಮ್ಮ ಮೆಟ್ರೋ ಪ್ರಯಾಣಿಕರ ಬಹುದಿನಗಳ ಬೇಡಿಕೆ ಇಂದು ನನಸಾಗಿದೆ. ಇಂದಿನಿಂದ ನಮ್ಮ ಮೆಟ್ರೋ ಸಂಚಾರ ಅವಧಿ ರಾತ್ರಿ 12 ಗಂಟೆವರೆಗೂ ವಿಸ್ತರಣೆಯಾಗಲಿದೆ.

ಬೆಂಗಳೂರಿನ ಕೇಂದ್ರ ಭಾಗವಾದ 'ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಎಲ್ಲ ನಾಲ್ಕು ದಿಕ್ಕುಗಳಿಗೂ(ಯಲಚೇನಹಳ್ಳಿ, ನಾಗಸಂದ್ರ, ಬಯ್ಯಪ್ಪನಹಳ್ಳಿ, ಮೈಸೂರು ರಸ್ತೆ) ರಾತ್ರಿ 12 ಗಂಟೆಗೆ ಆ ದಿನದ ಕೊನೇ ಮೆಟ್ರೋ ರೈಲಿಉ ಹೊರಡಲಿದೆ. ಜನವರಿ 1 ರಿಂದಲೇ ಪರಿಷ್ಕೃತ ವೇಳೆ ಜಾರಿಯಾಗಲಿದೆ.

ಹೊಸ ವರ್ಷಕ್ಕೆ ನಮ್ಮ ಮೆಟ್ರೋದಲ್ಲಿ ಪಾಲಿಸಬೇಕಾದದ್ದು ಏನು?ಹೊಸ ವರ್ಷಕ್ಕೆ ನಮ್ಮ ಮೆಟ್ರೋದಲ್ಲಿ ಪಾಲಿಸಬೇಕಾದದ್ದು ಏನು?

ಪ್ರಸ್ತುತ ಬೆಳಗ್ಗೆ 5 ಗಂಟೆ ದಿನದ ಮೊದಲ ಮೆಟ್ರೋ ರೈಲು ಆರಂಭವಾಗುತ್ತದೆ. ಬೆಳಗ್ಗೆ 5ರಿಂದ 8 ಗಂಟೆವರೆಗೆ ಹಾಗೂ ರಾತ್ರಿ 9ರಿಂದ 12 ಗಂಟೆವರೆಗೂ ಪ್ರತಿ 15 ನಿಮಿಷಕ್ಕೆ ಒಂದರಂತೆ ಮೆಟ್ರೋ ರೈಲುಗಳಿವೆ.

Namma Metro Train Timings To Be Extended To 12 O Clock From Today

ಉಳಿದ ಅವಧಿಯಲ್ಲಿ ಪ್ರತಿ 10 ನಿಮಿಷಕ್ಕೆ ಒಂದರಂತೆ ಮೆಟ್ರೋ ರೈಲುಗಳಿವೆ. 2020ರ ಡಿಸೆಂಬರ್‌ನಿಂದ ಗ್ರೀನ್‌ಲೈನ್‌ ಮಾರ್ಗದಲ್ಲೂ 6 ಕೋಚ್‌ ಟ್ರೈನುಗಳ ಸಂಖ್ಯೆ ಹೆಚ್ಚಿಸಲಾಗುತ್ತದೆ.

ಪ್ರಸ್ತುತ ರಾತ್ರಿ 11 ಗಂಟೆವರೆಗೆ ಮಾತ್ರ ಮೆಟ್ರೋ ಸಾರಿಗೆ ಸೇವೆ ಲಭ್ಯವಿದೆ. ನಗರದೊಳಗೆ ಬರುವ ಹಾಗೂ ನಗರದಿಂದ ಬೇರೆಡೆ ಹೋಗುವ ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗಲಿದೆ.

English summary
Namma Metro Train Timings Will be extended to 12 o clock From January 1st.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X