Namma Metro: ಪ್ರತಿ 3.5 ನಿಮಿಷಗಳ ಅಂತದದಲ್ಲಿ ಮೆಟ್ರೋ ಸಂಚಾರ, ಎಲ್ಲಿ? ವೇಳಾಪಟ್ಟಿ
ಬೆಂಗಳೂರು, ಜುಲೈ 07: ವೇಗದ ಹಾಗೂ ಸುರಕ್ಷಿತ ಮೇಟ್ರೋ ಸೇವೆ ನೀಡುತ್ತಿರುವ 'ಬೆಂಗಳೂರು ಮೆಟ್ರೋ ರೈಲು ನಿಗಮ' ವು (BMRCL) ಪ್ರಯಾಣಿಕರ ಅನುಕೂಲಕ್ಕಾಗಿ ಮೆಟ್ರೋ ರೈಲುಗಳನ್ನು ಹೆಚ್ಚಿಸುವ ಜೊತೆಗೆ, ರೈಲು ಆವರ್ತನ ಸಮಯವನ್ನು ಕಡಿಮೆ ಮಾಡಿದೆ.
ಹಸಿರು ಮೆಟ್ರೋ ಲೈನ್ ಮತ್ತು ನೇರಳೆ ಮೆಟ್ರೋ ಲೈನ್ ಹೊಂದಿದೆ. ಆರ್.ವಿ ರಸ್ತೆ- ಬೊಮ್ಮಸಂದ್ರವರೆಗಿನ ಹಳದಿ ಮಾರ್ಗ ಇನ್ನೇನು ಸಂಚಾರಕ್ಕೆ ತೆರೆದುಕೊಳ್ಳಲಿದೆ. ಸದ್ಯ ಹೆಚ್ಚುವರಿ ರೈಲುಗಳನ್ನು ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ನಿಯೋಜಿಸಲಾಗಿದೆ. ಈ ಮೂಲಕ ಅತೀ ಉದ್ದದ ಮೆಟ್ರೋ ಮಾರ್ಗ ಎನಿಸಿಕೊಂಡಿರುವ 'ಚಲ್ಲಘಟ್ಟ-ವೈಟ್‌ಫಿಲ್ಡ್' (Purple line metro) ವರೆಗಿನ ಮಾರ್ಗದಲ್ಲಿ 15 ಹೆಚ್ಚುವರಿ ರೈಲುಗಳನ್ನು ಬಿಡಲಾಗಿದೆ.

ಪ್ರಯಾಣಿಕರ ದಟ್ಟಣೆ ಕಾರಣಕ್ಕಾಗಿ ಈ ನಿಲ್ದಾಣದಿಂದ ಹೆಚ್ಚುವರಿ ರೈಲುಗಳು ಕಾರ್ಯಾಚರಣೆ ನಡೆಸಲಿವೆ. ವಿಶೇಷವೆಂದರೆ ಈ ಮೊದಲು ಐದು ನಿಮಿಷಗಳಿಗೆ ಸಂಚಾರ ನಡೆಸುತ್ತಿದ್ದ ಮೆಟ್ರೋ ರೈಲುಗಳು ಇದೀಗ 3.5 ನಿಮಿಗಳಲ್ಲೆ ಪ್ರಯಾಣಿಕರ ಮುಂದೆ ಬಂದು ನಿಲ್ಲಲಿವೆ.
ಈ ಮೂಲಕ ಮೆಜೆಸ್ಟಿಕ್ ನಲ್ಲಿನ ದಟ್ಟಣೆ ಕಡಿಮೆ ಮಾಡುವ ಜೊತೆಗೆ ಕೊನೆ ಮೈಲಿ ಕಡೆಗೆ (ನಾಗಸಂದ್ರ, ರೇಷ್ಮೆ ಸಂಸ್ಥೆ, ಚಲ್ಲಘಟ್ಟ ಮತ್ತು ವೈಟ್‌ಫಿಲ್ಡ್) ಕಡೆಗೆ ಹೋಗುವವರಿಗೆ ಬಹಳಷ್ಟು ಸಹಾಯವಾಗಲಿದೆ.
ಜುಲೈ 06ರಿಂದ ಹೆಚ್ಚುವರಿ ರೈಲು ಸೇವೆ ಲಭ್ಯ
ಈ ಮೊದಲು ನೇರಳೆ ಮಾರ್ಗದಲ್ಲಿ 09 ರೈಲುಗಳು ಮಾತ್ರವೇ ಶಾರ್ಟ್‌ಲೂಪ್ ಆಗಿ ಕಾರ್ಯಾಚರಣೆ ಮಾಡುತ್ತಿದ್ದವು. ಇದೀಗ ಶನಿವಾರ ಜುಲೈ 06ರಿಂದ ರೈಲುಗಳ ಸಂಖ್ಯೆ ಏರಿಕೆ ಮಾಡಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ನೇರಳೆ ಮಾರ್ಗ ಸಂಪೂರ್ಣವಾಗಿ ತೆರದ ಬಳಿಕ ಆರಂಭದಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಪ್ರಯಾಣಿಕರು ಹಂತ ಹಂತವಾಗಿ ಏರಿಕೆ ಆಗಿದ್ದರು. ಈ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರಿಂದಾಗಿ ಇಂಟರ್‌ಚೇಂಜ್ ನಿಲ್ದಾಣ ಮೆಜೆಸ್ಟಿಕ್ ನಲ್ಲಿ ಭಾರೀ ಜನದಟ್ಟಣೆ ಕಂಡು ಬರುತ್ತಿತ್ತು. ಅದಕ್ಕೀಗ ತುಸು ಬ್ರೇಕ್ ಬೀಳುತ್ತಿದೆ.
ಹೀಗಾಗಿಯೇ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ- ಮೆಜೆಸ್ಟಿಕ್ ನಲ್ಲಿ ಪ್ರಯಾಣಿಕರ ದಟ್ಟಣೆ ನಿವಾರಣೆಗೆ ಹೊಸ ನಿರ್ಗಮನ ವ್ಯವಸ್ಥೆ ಮಾಡಲಾಗಿತ್ತು. ಹೊರ ಹೋಗಲು ಇದ್ದ ಎರಡು ಎಕ್ಸಿಟ್ ಡೋರ್ ಜೊತೆಗೆ ಮತ್ತೊಂದು ಎಕ್ಸಿಟ್ ವ್ಯವಸ್ಥೆಯನ್ನು BMRCL ಇತ್ತೀಚೆಗೆ ಕಲ್ಪಿಸಿತ್ತು.
ಹೆಚ್ಚುವರಿ 15ರೈಲುಗಳ ವೇಳಾಪಟ್ಟಿ, ಸಂಚಾರದ ಮಾಹಿತಿ
ಈ ಹೆಚ್ಚುವರಿ ರೈಲುಗಳಲ್ಲಿ ನಾಲ್ಕು ರೈಲು ವೈಟ್ ಫೀಲ್ಡ್ ಮತ್ತು ಒಂದು ರೈಲು ಬೈಯಪ್ಪನಹಳ್ಳಿ ನಿಲ್ದಾಣದ ಹಾಗೂ ಹತ್ತು ರೈಲುಗಳು ಪಟ್ಟಂದೂರು ಅಗ್ರಹಾರದ (ITPL) ವರೆಗೆ ಪ್ರಯಾಣಿಕರನ್ನು ಹೊತ್ತೊಯ್ಯಲಿವೆ.
ಇನ್ನೂ ಇವುಗಳ ಸಮಯ ನೋಡುವುದಾದರೆ, ನಿತ್ಯ ಮೆಜೆಸ್ಟಿಕ್ ನಿಂದ ಬೆಳಗ್ಗೆ 8.48, 8.58, 9.08, 9.18, 9.29, 9.39, 9.50, 10.00, 10.11, 10.21, 10.39, 10.50, 11.00, 11.22 ಪೂರ್ವಕ್ಕೆ ಹೊರಡುತ್ತವೆ. ಈ ರೈಲುಗಳು ಬೆಳಗ್ಗೆ 10.25 ಗಂಟೆಯವರೆಗೆ ನಿಯಮಿತವಾಗಿ ಸಂಚಾರ ಸೇವೆಗೆ ಲಭ್ಯ ಇರುತ್ತವೆ.












Click it and Unblock the Notifications