• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಮ್ಮ ಮೆಟ್ರೋ ಸ್ಮಾರ್ಟ್‌ ಕಾರ್ಡ್ ಆನ್‌ಲೈನ್ ರೀಚಾರ್ಜ್ ಏಕಾಏಕಿ ಸ್ಥಗಿತ

|

ಬೆಂಗಳೂರು, ಆಗಸ್ಟ್ 8: ಆನ್‌ಲೈನ್‌ ಮೂಲಕ ನಮ್ಮ ಮೆಟ್ರೋ ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಮಾಡಿಸಿಕೊಳ್ಳುವ ವ್ಯವಸ್ಥೆಯನ್ನು ಬಿಎಂಆರ್‌ಸಿಎಲ್ ಸ್ಥಗಿತಗೊಳಿಸಿದೆ.

ತಾಂತ್ರಿಕ ದೋಷದಿಂದ ಆನ್‌ಲೈನ್ ಮೂಲಕ ಮೆಟ್ರೋ ಕಾರ್ಡ್ ರೀಚಾರ್ಜ್ ಆಗುತ್ತಿಲ್ಲ. ಸಾಕಷ್ಟು ಮೆಟ್ರೋ ಸ್ಟೇಷನ್‌ಗಳಲ್ಲಿ ದುಡ್ಡು ಕೊಡಿ ರೀಚಾರ್ಜ್ ಮಾಡ್ತೀವಿ, ಯಂತ್ರ ಸರಿ ಇಲ್ಲ ಎನ್ನುವ ಸಬೂಬು ಹೇಳುತ್ತಿದ್ದರು.

3 ದಿನ ನಮ್ಮ ಮೆಟ್ರೋ ಸಂಚಾರ ಭಾಗಶಃ ರದ್ದು

ಹೀಗಾಗಿ ಸದ್ಯಕ್ಕೆ ಆನ್‌ಲೈನ್ ವ್ಯವಹಾರ ಬಂದ್ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಸದ್ಯಕ್ಕೆ ಆನ್‌ಲೈನ್ ಮೂಲಕ ಟಾಪ್‌ ಅಪ್ ವ್ಯವಸ್ಥೆ ಜಾರಿಪಡಿಸುವ ಕಾರ್ಯ ನಡೆಯುತ್ತಿದ್ದು, ಆದ್ದರಿಂದ ಬಿಎಂಆರ್‌ಸಿಎಲ್ ವೆಬ್‌ಸೈಟ್‌ ಮೂಲಕ ರೀಚಾರ್ಜ್ ಮಾಡಬಹುದು.

ಜುಲೈ 29 ಆ.3 ಮತ್ತು ಆಗಸ್ಟ್ 5 ರಂದು ರೀಚಾರ್ಜ್ ರೀಚಾರ್ಜ್ ಮಾಡಿದ್ದ ಒಂಭತ್ತು ಸಾವಿರಕ್ಕೂ ಹೆಚ್ಚು ಕಾರ್ಡ್‌ಗಳು ರೀಚಾರ್ಜ್ ಆಗಿರಲಿಲ್ಲ. ಅಂತಹ ಕಾರ್ಡ್ ಹೊಂದಿರುವ ಪ್ರಯಾಣಿಕರಿಗೆ ಎಲ್ಲಾ ನಿಲ್ದಾಣಗಳಲ್ಲೂ ರೀಚಾರ್ಜ್ ವ್ಯವಸ್ಥೆ ಮಾಡಲಾಗಿದೆ.

ಆನ್‌ಲೈನ್ ಮೂಲಕ ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಮಾಡಿಕೊಳ್ಳುವ ಕುರಿತು ಮೆಟ್ರೋ ನಿಗಮ ಮುಂದಿನ ಪ್ರಕಟಣೆ ಹೊರಡಿಸುವವರೆಗೂ ಕಾಯಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಬಿಎಂಆರ್‌ಸಿಎಲ್ ಇದುವರೆಗೂ ಸುಮಾರು 15 ಲಕ್ಷ ಸ್ಮಾರ್ಟ್ ಕಾರ್ಡ್‌ಗಳನ್ನು ಮಾರಾಟ ಮಾಡಿದೆ. ಪ್ರತಿ ದಿನ ಸರಾಸರಿ 3.75 ಲಕ್ಷ ಮಂದಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ.

ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣ, 1 ವರ್ಷ ಬಂದ್, ಇಲ್ಲಿದೆ ಕಾರಣ

ಈ ಪೈಕಿ ಶೇ. 65ರಿಂದ 70 ರಷ್ಟು ಮಂದಿ ಸ್ಮಾರ್ಟ್ ಕಾರ್ಡ್ ಬಳಸುತ್ತಿದ್ದಾರೆ. ಸ್ಮಾರ್ಟ್ ಕಾರ್ಡ್ ಬಳಸುವ ಮೆಟ್ರೋ ಪ್ರಯಾಣಿಕರಿಗೆ ಟಿಕೆಟ್ ದರದಲ್ಲಿ ಶೇ. 15 ರಷ್ಟು ರಿಯಾಯಿತಿ ಇದ್ದು, ಸ್ಮಾರ್ಟ್ ಕಾರ್ಡ್ ಬಳಕೆ ಹೆಚ್ಚಾಗಲು ಕಾರಣವಾಗಿದೆ. ಜೊತೆಗೆ ಸ್ಮಾರ್ಟ್‌ ಕಾರ್ಡ್‌ಗೆ ಮೂರು ಸಾವಿರ ರೂ ಗಳಷ್ಟು ಗರಿಷ್ಠ ಮೊತ್ತದ ರೀಚಾರ್ಜ್ ಮಾಡಿಸಬಹುದಾಗಿದೆ.

ಇದರಿಂದ ಪ್ರತಿ ಬಾರಿಗೂ ಟಿಕೆಟ್ ಕೌಂಟರ್ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ಪ್ರಮೇಯವೇ ಇರುವುದಿಲ್ಲ. ಸಂಚರಿಸುತ್ತಿದ್ದ ಮೆಟ್ರೋ ರೈಲಿಗೆ ಕಿಡಿಗೇಡಿಗಳು ಕಲ್ಲು ಎಸೆದು ರೈಲಿನ ಕಿಟಕಿಗೆ ಹಾನಿಗೊಳಿಸಿರುವ ಘಟನೆ ಮಹಾಕವಿ ಕುವೆಂಪು ಮೆಟ್ರೋ ಸ್ಟೇಷನ್ ಮಾರ್ಗದಲ್ಲಿ ನಡೆದಿದೆ. ಈ ಸಂಬಂಧ ಮೆಟ್ರೋ ಸಿಬ್ಬಂದಿ ಮಲ್ಲೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಯಾಣಿಕರಿದ್ದ ಮೆಟ್ರೋ ರೈಲು ಮಹಾ ಕವಿ ಕುವೆಂಪು ಮೆಟ್ರೋ ನಿಲ್ದಾಣದಿಂದ ಶ್ರೀರಾಂಪುರ ಮೆಟ್ರೋ ನಿಲ್ದಾಣಕ್ಕೆ ಹೋಗುತ್ತಿತ್ತು. ಮೂರನೇ ಬೋಗಿಯ ಬಾಗಿಲು ಕಿಟಕಿ ಗ್ಲಾಸ್‌ಗೆ ಕಲ್ಲಿನಿಂದ ಹೊಡೆದು ಹಾನಿಗೊಳಿಸಿದ್ದಾರೆ.

English summary
BMRCL give statement that Namma Metro TopUp card Online Recharge Has Been Stopped.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X