Namma Metro Pass: ರಿಯಾಯಿತಿ 'ಮಾಸಿಕ ಪಾಸ್' ವ್ಯವಸ್ಥೆ ಜಾರಿಗೆ ಸಂಸದರ ಸಲಹೆ

ಬೆಂಗಳೂರು, ಸೆಪ್ಟಂಬರ್ 06: ರಾಜಧಾನಿಯಲ್ಲಿ ಒಟ್ಟು 73 ಕಿಲೋ ಮೀಟರ್ ವ್ಯಾಪ್ತಿ ಹೊಂದಿದೆ. ದೈನಂದಿನ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಬಿಎಂಟಿಸಿ ಮಾಸಿಕ ಬಸ್‌ ಪಾಸ್‌ಗಳಂತೆ ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರಿಗೆ ಮಾಸಿಕ ಪಾಸ್ ವ್ಯವಸ್ಥೆ ಪರಿಚಿಸಬೇಕು ಎಂದು ಬೆಂಗಳೂರು ಕೇಂದ್ರ ಸಂಸದ ಪಿಸಿ ಮೋಹನ್ ಅವರು ಪ್ರತಿಪಾದಿಸಿದ್ದಾರೆ. ಇದರಿಂದ ಬಿಎಂಆರ್‌ಸಿಎಲ್‌ಗೆ ಮತ್ತಷ್ಟು ಆದಾಯ ಬರುತ್ತದೆ ಎಂದಿದ್ದಾರೆ.

ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (BMRCL) ಸಂಸದರ ಪಿಸಿ ಮೋಹನ್ ಅವರು ಪತ್ರ ಮುಖೇನ ಒತ್ತಾಯಿಸಿದ್ದಾರೆ. ನೇರಳೆ ಮಾರ್ಗ ಮತ್ತು ಹಸಿರು ಮಾರ್ಗದಲ್ಲಿ ನಿತ್ಯ ಸುಮಾರು ಎಂಟು ಲಕ್ಷನ ಜನ ಓಡಾಡುತ್ತಾರೆ. ಈಗಾಗಲೇ ಸ್ಮಾರ್ಟ್ ಕಾರ್ಡ್, ಕಾಯಿನ್ ಟಿಕೆಟ್ ನೀಡುತ್ತಿರುವ ನಮ್ಮ ಮಟ್ರೋ ಪ್ರಮುಖ ಸಂದರ್ಭದಲ್ಲಿ ಪೇಪರ್ ಟಿಕೆಟ್ ಸಹ ವಿತರಣೆ ಮಾಡುತ್ತಿದೆ. ಇದೀಗ ಬಂದ ಮಾಸಿಕ ಪಾಸ್ ವ್ಯವಸ್ಥೆ ಜಾರಿ ಸಲಹೆಯನ್ನು ಹೇಗೆ ಪರಿಗಣಿಸುತ್ತದೆ ಎಂದು ನೋಡಬೇಕಿದೆ.

Namma Metro Should Introduce Monthly Pass System for Passengers MP PC Mohan says Benefits

ನಿತ್ಯ ರೂ.2ಕೋಟಿಯಷ್ಟು ಆದಾಯ ಸಂಗ್ರಹ?

ಬೆಂಗಳೂರಿನ ಲಕ್ಷಾಂತರ ಮಂದಿ ಈ ನಮ್ಮ ಮೆಟ್ರೋ ಸಾರಿಗೆ ಅವಲಂಬಿಸಿದ್ದಾರೆ. ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು, ಹಿರಿಯನಾಗರಿಕರು ಹೀಗೆ ಎಲ್ಲರು ಹೆಚ್ಚಿನ ಪ್ರಯಾಣದಲ್ಲಿ ಮೆಟ್ರೋದಲ್ಲಿ ಓಡಾಡುತ್ತಾರೆ. ಬಿಎಂಟಿಸಿಯಂತೆ ವಿದ್ಯಾರ್ಥಿಗಳಿಗೆ ಮತ್ತು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ರಿಯಾಯಿತಿ ದರದಲ್ಲಿ ಮಾಸಿಕ ಪಾಸ್ ವಿತರಣೆ ಆದರೆ, ನಿತ್ಯ ನಮ್ಮ ಮೆಟ್ರೋಗೆ 2 ಕೋಟಿ ರೂ. ನಷ್ಟು ಅದಾಯ ಬರಲಿದೆ ಎಂದು ಸಂಸದರು ಅಭಿಪ್ರಾಯಪಟ್ಟಿದ್ದಾರೆ ಎಂದು TOI ವರದಿ ಮಾಡಿದೆ.

ಚಾಲ್ತಿಯಲ್ಲಿರುವ ಟಿಕೆಟ್ ವ್ಯವಸ್ಥೆ

2011 ರಲ್ಲಿ ನಮ್ಮ ಮೆಟ್ರೋ ವಾಣಿಜ್ಯ ಕಾರ್ಯಾಚರಣೆ ಆರಂಭಿಸಿತು. ಸದ್ಯ BMRCL ಸ್ಮಾರ್ಟ್ ಕಾರ್ಡ್‌ಗಳನ್ನು ಬಳಸುವವರಿಗೆ ಪ್ರಯಾಣದ ನಿಗದಿತ ದರದ ಮೇಲೆ ಶೇಕಡಾ 15 ರಿಯಾಯಿತಿ ನೀಡುತ್ತಾ ಬಂತು. ಕಾರ್ಡ್ ಬಳಕೆ ಹೆಚ್ಚಾದಂತೆ 2020ರಲ್ಲಿ ರಿಯಾಯಿತಿ ದರವನ್ನು ಶೇಕಡಾ 15ರಿಂದ ಶೇಕಡಾ 5ಕ್ಕೆ ಇಳಿಸಿತು.

ಸದ್ಯ ಸ್ಮಾರ್ಟ್ ಕಾರ್ಡ್ ಹೊಂದಿರುವ ಪ್ರಯಾಣಿಕರು ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ಗಳನ್ನು (NCMC) ಬಳಸುವವರು ಶೇಕಡಾ 5ರಷ್ಟು ರಿಯಾಯಿತಿಯನ್ನು ಪಡೆಯುತ್ತಿದ್ದಾರೆ. ಇನ್ನೂ ಕ್ಯೂಆರ್‌ ಕೋಡ್, ಸ್ಕ್ಯಾನ್ ಟಿಕೆಟ್‌ಗಳ ಮೂಲಕವು ರಿಯಾಯಿತಿಯಲ್ಲಿ ಪ್ರಯಾಣಿಕರು ಓಡಾಡುತ್ತಾರೆ.

Namma Metro Should Introduce Monthly Pass System for Passengers MP PC Mohan says Benefits

ವಿದ್ಯಾರ್ಥಿಗಳು ಅವಲಂಬಿಸುಂತೆ ಮಾಡಬೇಕು

ವಯಸ್ಕರು ಮತ್ತು ಮಕ್ಕಳಿಗೆ ಟಿಕೆಟ್ ಶುಲ್ಕ ಸಮನಾಗಿರುತ್ತದೆ. ಸಣ್ಣ ಮಕ್ಕಳಿಗೂ (3 ಅಡಿ ಮೆಲ್ಪಟ್ಟ) ವಯಸ್ಕರಂತೆ ಟಿಕೆಟ್ ದರ ನಿಗದಿ ಮಾಡಿದೆ. ಆದರೆ ನಿಎಂಟಿಸಿ 7ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಶಾಲೆಗೆ ಪ್ರಯಾಣಿಸುವಾಗ ಯಾವುದೇ ಶುಲ್ಕ ವಿಧಿಸುವುದಿಲ್ಲ. ಅದೇ ರೀತಿಯ ಒಂದಷ್ಟು ರಿಯಾಯಿತಿ ಅಳವಡಿಕೆ ಸಹಿತ ಮಾಸಿಕ ವಿತರಣೆಯ ಪ್ರಸ್ತಾಪ ಮಾಡಲಾಗಿದೆ.

ಮಾಸಿಕ ಪಾಸ್ ವ್ಯವಸ್ಥೆ ಪರಿಚಯಿಸಿದರೆ ನೂರಾರು ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳುವವರು ಮೆಟ್ರೋ ಅವಲಂಬಿಸುತ್ತಾರೆ. ವಾರಾಂತ್ಯದಲ್ಲಿ ಪ್ರಯಾಣಿಕರಿಗೆ ಸಾರ್ವಜನಿಕ ಸಾರಿಗೆ ಬಳಸುವಂತೆ ಉತ್ತೇಜಿಸಿದಂತಾಗುತ್ತದೆ. ಅಲ್ಲದೇ ಈಗಾಗಲೇ ಆಟೋ ಹಾಗೂ ಬಿಎಂಟಿಸಿ ಬಸ್‌ಗಳ ಜೊತೆ ಬಿಎಂಆರ್‌ಸಿಎಲ್ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ನಿಲ್ದಾಣಗಳಿಗೆ ಇವು ಪ್ರಯಾಣಿಕರಿಗೆ ಫಿಡರ್ ಆಗಿ ಕಾರ್ಯ ನಿರ್ವಹಿಸುತ್ತಿವೆ.

ಈ ಮಾಸಿಕ ಪಾಸ್ ಸಲಹೆಗೆ ಉತ್ತರಿಸಿದ ಬಿಎಂಆರ್‌ಸಿಎಲ್ ಸದ್ಯ ಜಾರಿಯಲ್ಲಿರುವ ನಿಯಮಗಳ ಆಧಾರದಲ್ಲಿ ಮೆಟ್ರೋ ಪ್ರಯಾಣ ದರ ನಿಗದಿ ಮಾಡಲಾಗಿದೆ. ಸದ್ಯದ ಸ್ಥಿತಿಯ ಯಥಾಸ್ಥಿತಿಯಲ್ಲಿ ಇರಲಿದ್ದು, ಸಂಸದರ ಪತ್ರಕ್ಕೆ ಸೂಕ್ತ ಸಮಯದಲ್ಲಿ ಉತ್ತರ ನೀಡಲಾಗುವುದು ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+