ನ್ಯಾಷನಲ್ ಕಾಲೇಜು-ಪುಟ್ಟೇನಹಳ್ಳಿ ಮೆಟ್ರೋ ಮಾರ್ಗ ಪ್ರಾಯೋಗಿಕ ಸಂಚಾರಕ್ಕೆ ಸಿದ್ಧ
ಬೆಂಗಳೂರು, ಮೇ 8 : ಕಳೆದ ವಾರ ಪೀಣ್ಯ ಇಂಡಸ್ಟ್ರಿ-ನಾಗಸಂದ್ರದ ನಡುವೆ ಮೆಟ್ರೋ ರೈಲು ಸಂಚಾರ ಆರಂಭಿಸಿದ್ದ ಬಿಎಂಆರ್‌ಸಿಎಲ್ ಈಗ ರೀಚ್ 4 ಮತ್ತು 4ಎನತ್ತ ಗಮನಹರಿಸಿದೆ. 8 ಕಿ.ಮೀ. ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸಲು ಉದ್ದೇಶಿಸಿದೆ.
ನಮ್ಮ ಮೆಟ್ರೋ ರೀಚ್ 4 ಮತ್ತು 4ಎ ಮಾರ್ಗ ನ್ಯಾಷನಲ್ ಕಾಲೇಜು-ಪುಟ್ಟೇನಹಳ್ಳಿ ನಡುವೆ ಸಂಪರ್ಕ ಕಲ್ಪಿಸುತ್ತದೆ. ಈ ಮಾರ್ಗದಲ್ಲಿ ಹಳಿಗಳ ಜೋಡಣೆ ಕಾರ್ಯ ಮುಕ್ತಾಯವಾಗಿದ್ದು, ಪ್ರಾಯೋಗಿಕ ಸಂಚಾರ ಆರಂಭಿಸಲು ಬಿಎಂಆರ್‌ಸಿಎಲ್ ಟೆಂಡರ್ ಆಹ್ವಾನಿಸಿದೆ. [ಪೀಣ್ಯ-ನಾಗಸಂದ್ರ ದರವೆಷ್ಟು?]

ರೀಚ್ 4 ಮತ್ತು 4ಎ 8 ಕಿ.ಮೀ. ಮಾರ್ಗ ಫ್ಲೈಓವರ್ ಮೂಲಕ ಸಾಗುತ್ತದೆ. ಈ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಸುರಂಗ ಮಾರ್ಗ ಪೂರ್ಣಗೊಳ್ಳದ ಕಾರಣ ನೆಲದಿಂದ ಮೆಟ್ರೋ ರೈಲನ್ನು ಕ್ರೇನ್ ಸಹಾಯದಿಂದ ಫ್ಲೈಓವರ್ ಮೇಲೆ ಇಡಬೇಕಾಗಿದೆ. [ಪೂರ್ಣಗೊಳ್ಳುವುದೇ ಡಿಸೆಂಬರೊಳಗೆ ನಮ್ಮ ಮೆಟ್ರೋ?]
ಪ್ರಾಯೋಗಿಕ ಸಂಚಾರಕ್ಕಾಗಿ ಸುಮಾರು 10 ಕೋಟಿ ರೂ. ಮೌಲ್ಯದ ಎರಡು ರೈಲುಗಳನ್ನು ನೆಲದಿಂದ ಎತ್ತಿ ಹಳಿಯ ಮೇಲೆ ಇಡಬೇಕಾಗಿದೆ. ಇದಕ್ಕಾಗಿ ಬಿಎಂಆರ್‌ಸಿಎಲ್ ಟೆಂಡರ್ ಆಹ್ವಾನಿಸಿದೆ. ಸುಮಾರು ಒಂದು ತಿಂಗಳಿನಲ್ಲಿ ಈ ಪ್ರಕ್ರಿಯೆ ಮುಕ್ತಾಯಗೊಳ್ಳಲಿದ್ದು, ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ.
ಎಂಟು ನಿಲ್ದಾಣಗಳು : ನಮ್ಮ ಮೆಟ್ರೋ ರೀಚ್ 4 ಮತ್ತು 4ಎ ಮಾರ್ಗದಲ್ಲಿ ನ್ಯಾಷನಲ್ ಕಾಲೇಜು, ಲಾಲ್‌ಬಾಗ್, ಸೌತ್ ಅಂಡ್ ವೃತ್ತ, ಜಯನಗರ, ರಾಷ್ಟ್ರೀಯ ವಿದ್ಯಾಲಯ ರಸ್ತೆ, ಬನಶಂಕರಿ, ಜೆಪಿ ನಗರ ಮತ್ತು ಪುಟ್ಟೇನಹಳ್ಳಿ ಸೇರಿ ಎಂಟು ನಿಲ್ದಾಣಗಳಿವೆ.












Click it and Unblock the Notifications