ಮೆಟ್ರೋ ನಿಲ್ದಾಣಗಳಲ್ಲಿ ಶೀಘ್ರ ಕನ್ನಡ ಪುಸ್ತಕಗಳು ದೊರೆಯಲಿದೆ

ಬೆಂಗಳೂರು, ಜು.20: ನಮ್ಮ ಮೆಟ್ರೋ ನಿಗಮವು ಕನ್ನಡ ಭಾಷೆ ಹಾಗೂ ಸಾಹಿತ್ಯಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ನಮ್ಮ ಮೆಟ್ರೋ ನಿಲ್ದಾಣದಲ್ಲಿ ಶೀಘ್ರದಲ್ಲಿ ಕನ್ನಡ ಪುಸ್ತಕ ಮಳಿಗೆ ತೆರೆಯಲು ಅನುಮತಿ ನೀಡಿದೆ.

ಎಲ್ಲವೂ ನಿಗಮ ಅಂದುಕೊಂಡಂತೆ ನಡೆದರೆ ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ಮೊದಲು ಪುಸ್ತಕ ಮಳಿಗೆಯನ್ನು ಆರಂಭಿಸಲಾಗುತ್ತದೆ ಅಲ್ಲಿ ರಿಯಾಯಿತಿ ದರದಲ್ಲಿ ಪುಸ್ತಕಗಳು ದೊರೆಯಲಿದೆ, ಮೊದಲ ಪ್ರಯತ್ನ ಇದಾಗಿದೆ ಎಂದು ಮೆಟ್ರೋ ಅಧಿಕಾರಿಗಳು ಹೇಳಿದ್ದಾರೆ..

ಕನ್ನಡ ಭಾಷೆ ಹಾಗೂ ಸಾಹಿತ್ಯವನ್ನು ಪ್ರೋತ್ಸಾಹಿಸುವವರಿಗೆ ಇಲ್ಲಿ ಮಳಿಗೆ ತೆರಿಯಲು ಅವಕಾಶ ನೀಡಲಾಗುತ್ತಿದೆ. ವಿಜಯನಗರ ನಿಲ್ದಾಣ ಬರುವ ಮೈಸೂರು- ಯಲಚೇನಹಳ್ಳಿ ನೇರಳೆ ಮಾರ್ಗದಲ್ಲಿ ದಿನನಿತ್ಯ 3.5 ಲಕ್ಷಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಾರೆ.

Namma Metro push to Kannada literature

ವಿಜಯನಗರ ನಿಲ್ದಾಣದಲ್ಲೇ ಅರ್ಜಿಗಳು ದೊರೆಯಲಿದೆ. ಈ ಮಳಿಗೆ 1,925 ಚದರಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗುತ್ತದೆ. ಇಲ್ಲಿ ಕನ್ನಡ ಹಾಗೂ ಕರ್ನಾಟಕಕ್ಕೆ ಸಂಬಂಧಿಸಿದ ಪುಸ್ತಕಗಳು, ಕ್ಯಾಸೆಟ್‌ಗಳು, ಸಿಡಿಗಳು ದೊರೆಯಲಿದೆ.

ಹಾಗೆಯೇ ಕೆಲಸಕ್ಕೆ ಮೆಟ್ರೋ ಮೂಲಕ ತೆರಳುವ ಪೋಷಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೆಟ್ರೋ ಸ್ಟೇಷನ್‌ನಲ್ಲಿ ಡೇ ಕೇರ್‌ ಸೆಂಟರ್‌ ತೆರಯಲು ಉದ್ದೇಶಿಸಲಾಗಿತ್ತು, ಮಗುವನ್ನು ಅಲ್ಲಿ ಬಿಟ್ಟು ಮೆಟ್ರೋದಲ್ಲಿ ತೆರಳಬಹುದು ಸಂಜೆ ಮರಳುವಾಗ ಮಗುವನ್ನು ಕರೆದುಕೊಂಡು ಬರಹುದಾದ ವ್ಯವಸ್ಥೆಯನ್ನು ಕಲ್ಪಿಸಲು ಚಿಂತನೆ ನಡೆದಿದೆ ಆದರೆ ಇದುವರೆಗೂ ಈ ಡೇ ಕೇರ್‌ ಸೆಂಟರ್‌ ತೆರೆಯಲು ಮುಂದೆ ಬಂದಿಲ್ಲ, ಈ ಕುರಿತು ಜಾಹಿರಾತನ್ನು ಕೂಡ ನೀಡಲಾಗಿದೆ ಎಂದು ಯು.ಎ. ವಸಂತರಾವ್‌ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+