Namma Metro: ನೇರಳೆ ಮಾರ್ಗ ತೆರೆದ ಬಳಿಕವೂ ಪ್ರಯಾಣಿಕರ ಸಂಖ್ಯೆ ನಿರೀಕ್ಷೆಯ 7 ಲಕ್ಷ ಮುಟ್ಟಿಲ್ಲ, ಅಂಕಿ-ಸಂಖ್ಯೆಗಳು

ಬೆಂಗಳೂರು, ಡಿಸೆಂಬರ್ 17: ಬೆಂಗಳೂರಿನ ಜನರು ನಿತ್ಯ ಬಳಸುವ ನಮ್ಮ ಮೆಟ್ರೋ (namma metro) ರೈಲುಗಳಲ್ಲಿ ಓಡಾಡುವವರ ಸಂಖ್ಯೆ ಅಧಿಕಾರಿಗಳು ನಿರೀಕ್ಷಿಸಿದಷ್ಟು ಏರಿಕೆ ಆಗಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಮೆಟ್ರೋ ವಿಸ್ತರಣೆ, ನೇರಳೆ ಪೂರ್ಣ ಮಾರ್ಗ ತೆರೆದ ನಂತರವು ಪ್ರಯಾಣಿಕರಲ್ಲಿ ಹೇಳಿಕೊಳ್ಳುಷ್ಟರಮಟ್ಟಿಗೆ ಏರಿಕೆ ಆಗಿಲ್ಲ ಎಂದು 'ಡಿಎಚ್‌' ವರದಿ ಮಾಡಿದೆ.

ಕಂಗೇರಿ- ಚಲ್ಲಘಟ್ಟವರೆಗೆ ವಿಸ್ತರಣೆ, ಸಂಪರ್ಕ ಕೊಂಡಿಯಾಗಿದ್ದ ಬೈಯಪ್ಪನಹಳ್ಳಿ-ಕೆ.ಆರ್.ಪುರಂ ಮಾರ್ಗ ಜೋಡಣೆ ಮೂಲಕ ಐಟಿ ಕಾರಿಡಾರ್ (ವೈಟ್‌ಫೀಲ್ಡ್‌ಗೆ) ಸಂಪರ್ಕದ ಹೊರತಾಗಿಯೂ ನಿರೀಕ್ಷಿತ ಮಟ್ಟದಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ಏರಿಕೆ ಆಗಿಲ್ಲ.

Namma Metro Purple Line Open After, Expected 7-7.5 Lakh Passenger Numbers Have Not Increased

ಸದ್ಯ ರಾಜಧಾನಿಯಲ್ಲಿ ಸದ್ಯ 73 ಕಿಲೋ ಮೀಟರ್ ಜಾಲ ಹೊಂದಿರುವ ನಮ್ಮ ಮೆಟ್ರೋ ರೈಲು ನವೆಂಬರ್‌ ತಿಂಗಳಲ್ಲಿ ನಿತ್ಯ ಸರಾಸರಿ 6,64,048 ಲಕ್ಷ ಪ್ರಯಾಣಿಕರಿಗೆ ಸೇವೆ ನೀಡಿದೆ. ಅದರ ಹಿಂದಿನಿಂದ ತಿಂಗಳಷ್ಟೇ ಬಹುನಿರೀಕ್ಷೆಯ ಮೆಟ್ರೋ ನೇರಳೆ ಮಾರ್ಗವು (Namma Metro Purple line) ಸಂಪೂರ್ಣವಾಗಿ ವಾಣಿಜ್ಯ ಕಾರ್ಯಾಚರಣೆ ಆರಂಭಿಸಿದ ಬಳಿಕವೂ ಅಂದಾಜು ಮಾಡಲಾಗಿದ್ದ 7-7.5 ಲಕ್ಷದಷ್ಟು ಜನರ ಓಟಾಟ ಕಂಡು ಬಂದಿಲ್ಲ.

44 ಕಿಮೀ ನೇರಳೆ ಮಾರ್ಗ ಓಪನ್: ನಿರೀಕ್ಷೆ ಹುಸಿ
ಅಕ್ಟೋಬರ್ ಎರಡನೇ ವಾರದಂದು ಸುಮಾರು 44 ಕಿಲೋ ಮೀಟರ್‌ ಉದ್ದದ ನೇರಳೆ ಮಾರ್ಗದ 1.8-ಕಿಮೀ ನಿರ್ಮಾಣದ ಬೈಯಪನಹಳ್ಳಿ-ಕೆಆರ್ ಪುರ ಮಾರ್ಗ ಹಾಗೂ 2.1-ಕಿಮೀ ಉದ್ದದ ಕೆಂಗೇರಿ-ಚಲ್ಲಘಟ್ಟ ವಿಸ್ತರಣೆ ಮಾರ್ಗಗಳನ್ನು ತೆರೆಯಲಾಯಿತು. ಈ ವೇಳೆ ಅಧಿಕಾರಿಗಳು ಇನ್ನು ಮುಂದಿನ ದಿನಗಳಲ್ಲಿ ಸರಾಸರಿ ದೈನಂದಿನ ಪ್ರಯಾಣಿಕರ ಸಂಖ್ಯೆ 7ಲಕ್ಷದಿಂದ 7.5 ವರೆಗೆ ಹೆಚ್ಚಾಗುತ್ತದೆ ಎಂದು ಅಧಿಕಾರಿಗಳು ಭಾವಿಸಿದ್ದರು. ಆದರೆ ಇಂದಿನ ಅಂಕಿ ಅಂಶಗಳನ್ನು ನೋಡಿದರೆ ಅದು ಸಾಧ್ಯವಾಗಿಲ್ಲ.

ನೇರಳೆ ಮಾರ್ಗ ಪೈಕಿ ಬೈಯಪ್ಪನಹಳ್ಳಿ-ಕೆಆರ್ ಪುರ ವಿಭಾಗವು ನಿರ್ಣಾಯಕ ಪ್ರಾಮುಖ್ಯತೆ ಹೊಂದಿದೆ. ಈ ಮಾರ್ಗವು ಸ್ವತಂತ್ರವಾಗಿ ವೈಟ್‌ಫೀಲ್ಡ್ ಮಾರ್ಗವನ್ನು ಇಡೀ ಮೆಟ್ರೋ ಜಾಲವನ್ನು ಸಂಪರ್ಕಿಸುತ್ತದೆ. ಈ ಎರಡು ಸಣ್ಣ ವಿಭಾಗಗಳನ್ನು ತೆರೆದ ಬಳಿಕ ಮೆಟ್ರೋ ನೇರಳೆ ಮಾರ್ಗವು 44 ಕಿಮೀವರೆಗೆ ವಿಸ್ತರಣೆ ಆಯಿತು. ಪಶ್ಚಿಮದಲ್ಲಿ ಚಲ್ಲಘಟ್ಟವನ್ನು ಪೂರ್ವದಲ್ಲಿ ವೈಟ್‌ಫೀಲ್ಡ್ (ಕಾಡುಗೋಡಿ)ಗೆ ಈ ಲೈನ್ ಸಂಪರ್ಕ ಕಲ್ಪಿಸುತ್ತದೆ.

Namma Metro Purple Line Open After, Expected 7-7.5 Lakh Passenger Numbers Have Not Increased

ಮೊದಲು ಎಷ್ಟಿತ್ತು ಪ್ರಯಾಣಿಕರ ಸಂಖ್ಯೆ
ಮೆಟ್ರೋ ನೇರಳೆ ಮಾರ್ಗ ಪೂರ್ಣ ತೆರೆಯುವ ಮೊದಲು ನಮ್ಮ ಮೆಟ್ರೋದ ನಿತ್ಯ ಸರಾಸರಿ ಪ್ರಯಾಣಿಕರ ಸಂಖ್ಯೆ 6.2 ಲಕ್ಷದಷ್ಟಿತ್ತು. ಈ ಸಂಖ್ಯೆ ಅಕ್ಟೋಬರ್‌ನಲ್ಲಿ 6,40,441 ಕ್ಕೆ ಹೆಚ್ಚಾಯಿತು. ಆ ತಿಂಗಳು ಒಟ್ಟು 1,98,53,691 ಪ್ರಯಾಣಿಕರು ಮೆಟ್ರೋದಲ್ಲಿ ಓಡಾಡಿದ್ದಾರೆ. ಅಕ್ಟೋಬರ್ 9 ರಂದು 7,66,880 ಅತೀ ಹೆಚ್ಚು ಪ್ರಯಾಣಿಕರು ಸಂಚರಿಸಿದ್ದು ಕಂಡು ಬಂದಿದೆ.

ಇದೆಲ್ಲ ಅಂಕಿ ಸಂಖ್ಯೆಗಳನ್ನು ಗಮನಿಸಿರುವ ಬೆಂಗಳೂರು ಮೆಟ್ರೋ ರೈಲ್ ನಿಗಮದ (BMRCL) ಅಧಿಕಾರಿಗಳು ಪೂರ್ಣ ಮಾರ್ಗ (ವೈಟ್‌ಫಿಲ್ಡ್-ಚಲಘಟ್ಟ) ಆರಂಭವಾದ ನಂತರ ಎದುರಾಗುವ ಮೊದಲ ಪೂರ್ಣ ತಿಂಗಳು ನವೆಂಬರ್‌ನಲ್ಲಿ ದೈನಂದಿನ ಸರಾಸರಿ ಪ್ರಯಾಣಿಕರ ಸಂಖ್ಯೆ ಸುಲಭವಾಗಿ 7 ಲಕ್ಷ ದಾಟುತ್ತದೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದರು.

ದೈನಂದಿನ ಪ್ರಯಾಣಿಕರಲ್ಲಿ ಕೇವಲ 25,000 ಏರಿಕೆ
ನವೆಂಬರ್ ಸವಾರರ ಮಾಹಿತಿಯು ಸರಾಸರಿ ದೈನಂದಿನ ಸಂಖ್ಯೆಗಳು ಕೇವಲ 25,000 ರಷ್ಟು ಹೆಚ್ಚಾಗಿದೆ. ಮೆಟ್ರೋ ನವೆಂಬರ್‌ ಒಟ್ಟು ತಿಂಗಳಲ್ಲಿ 551.22 ಕೋಟಿ ರೂಪಾಯಿ ಆದಾಯ ಗಳಿಸಿದ್ದರೆ, ನವೆಂಬರ್ 2 ರಂದು ಒಂದೇ ದಿನ 2.08 ಕೋಟಿ ರೂ.ಹಣ ಸಂಗ್ರಹಿಸಿದೆ. ಪ್ರಯಾಣಿಕರ ನಿರೀಕ್ಷಿತ ಏರಿಕೆ ಆಗದಿರಲು, ದೀಪಾವಳ ರಜಾ ದಿನಗಳು, ನಗರದಿಂದ ಬಹುತೇಕ ಮಂದಿ ಹೊರಗಿದ್ದರು ಎಂದು ಹೇಳಲಾಗುತ್ತಿದೆ.

ಇದೇ ನೇರಳೆ ಮಾರ್ಗದಲ್ಲಿ ಜನರು ಕಿಕ್ಕಿರಿದು ತುಂಬಿರುತ್ತಾರೆ. ಬೆಳಗ್ಗೆ ಮತ್ತು ಸಂಜೆ ಪೀಕ್ ಹವರ್‌ ನಲ್ಲಿ ಜನಸಂದಣಿ ಕಂಡು ಬರುತ್ತಿದೆ. ಹೀಗಂತ ನಮ್ಮ ಮೆಟ್ರೊ ಅಧಿಕಾರಿಗಳು ನೇರಳೆ ಮಾರ್ಗದಲ್ಲಿ ಆರು ಬೋಗಿಗಳ 33 ರೈಲ್ವೆ ಸೆಟ್‌ಗಳನ್ನು ಈ ಮಾರ್ಗದ ಜನರ ಓಟಾಟಕ್ಕೆ ಮೀಸಲಿಟ್ಟಿದೆ. ಹೆಚ್ಚುತ್ತಿರುವ ಬೇಡಿಕೆಗನುಗುಣವಾಗಿ ರೈಲು ಒದಗಿಸಲಾಗಿದ್ದು, ಹಸಿರು ಮಾರ್ಗ ರೈಲುಗಳು ಈ ನೇರಳೆ ಮಾರ್ಗದಲ್ಲಿ ಓಡಾಡುತ್ತವೆ.

ಚೀನಾ ಮೂಲದ ಕಂಪನಿಯಿಂದ ಬಿಎಂಆರ್‌ಸಿಎಲ್ ಹೊಸ ಮೆಟ್ರೋ ಕೋಚ್ ಪಡೆಯಲಿದೆ. ಅವುಗಳಲ್ಲಿ ಕೆಲವು ಬೇಡಿಕೆಗೆ ಅನುಗುಣವಾಗಿ 2024 ರ ಅಂತ್ಯಕ್ಕೆ ನೇರಳೆ ಮಾರ್ಗದಲ್ಲಿ ನಿಯೋಜಿಸಬಹುದು ಎಂದು ಹೇಳಲಾಗಿತ್ತು. ಆದರೆ ಅದು ಸಾಧ್ಯವಿಲ್ಲ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+