Namma Metro passengers: ಭಾನುವಾರವು ಬೆಳಗ್ಗೆ ಒಂದು ಗಂಟೆ ಬೇಗ ರೈಲು ಆರಂಭಿಲು ಒತ್ತಾಯ

ಬೆಂಗಳೂರು, ಡಿಸೆಂಬರ್ 17: ಬೆಂಗಳೂರು ನಮ್ಮ ಮೆಟ್ರೋ ರೈಲುಗಳು ಭಾನುವಾರ ಮಾತ್ರ ಬೆಳಗ್ಗೆ 7ಗಂಟೆಗೆ ಸಂಚಾರ ಆರಂಭಿಸುತ್ತಿವೆ. ಇದರಿಂದ ಕೆಲವು ಉದ್ಯೋಗಿಗಳಿಗಳಿಗೆ ಸೇರಿದಂತೆ ಊರಿನಿಂದ ಬರುವ ಸಾರ್ವಜನಿಕರಿಗೂ ತೊಂದರೆ ಆಗುತ್ತಿದೆ. ಬೇರೆ ಬೇರೆ ಕಡೆಯಿಂದ ನಗರಕ್ಕೆ ಇಲ್ಲಿನ ದೂರದ ಪ್ರದೇಶಗಳಿಗೆ ತೆರಳುವವರು ಮೆಟ್ರೋಗಾಗಿ ಬೆಳಗ್ಗೆ 5.30ರಿಂದಲೇ ಕಾಯುವ ದೃಶ್ಯ ಸಾಮಾನ್ಯವಾಗಿರುತ್ತದೆ.

ಸಾಮಾನ್ಯ ದಿನಗಳಲ್ಲಿ ನಮ್ಮ ಮೆಟ್ರೋ ಬೆಳಗ್ಗೆ 5 ಗಂಟೆಗೆ ತೆರೆದಿರುತ್ತದೆ. ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಸೇರಿದಂತೆ ಇನ್ನುಳಿದ ರಜಾ ದಿನಗಳಲ್ಲಿ ನಮ್ಮ ಮೆಟ್ರೋ ಬೆಳಗ್ಗೆ 6 ಗಂಟೆಗೆ ತೆರೆದಿರುತ್ತದೆ. ಈ ಸಂಚಾರ ಸಮಯವನ್ನು ಭಾನುವಾರಕ್ಕೂ ವಿಸ್ತರಣೆ ಮಾಡಬೇಕು ಎಂದು ಭಾನುವಾರ ರಜೆ ಇರದ ಉದ್ಯೋಗಿಗಳು ಮನವಿ ಮಾಡಿದ್ದಾರೆ ಎಂದು 'ಪ್ರಜಾವಾಣಿ' ವರದಿ ಮಾಡಿದೆ.

Namma Metro Passengers Demands To Metro Rail Start To Early on Monday 6am

ನಾವು ಬೇರೆ ಬೇರೆ ಶಿಫ್ಟ್‌ಗಳಲ್ಲಿ ಕೆಲಸ ಮಾಡುತ್ತೇವೆ. ಕೆಲವು ದಿನಗಳು ಸಮಸ್ಯೆ ಇರದಿದ್ದರೂ ತಿಂಗಳಲ್ಲಿ ಒಂದು ವಾರ ಬೆಳಗ್ಗೆ 7 ಗಂಟೆಗೆ ಕಚೇರಿಯಲ್ಲಿರುವಂತೆ ಶೀಫ್ಟ್ ಇರುತ್ತದೆ. ಭಾನುವಾರವು ಕಚೇರಿ ತೆರಳಬೇಕಾಗುತ್ತದೆ. ಈ ವೇಳೆ ಮೆಟ್ರೋ ಸಿಗದ ಹಿನ್ನೆಲೆಯಲ್ಲಿ ಸಾಕಷ್ಟು ತೊಂದರೆ ಆಗುತ್ತಿದೆ.

ಟ್ಯಾಕ್ಸಿ, ಆಟೋಗೆ ಅಧಿಕ ಖರ್ಚು

ಮೆಟ್ರೋ ಸಿಗದೇ, ಆಟೋ ಇಲ್ಲವೇ ಟ್ಯಾಕ್ಸಿಗೆ ದುಬಾರಿ ಹಣ ನೀಡಿ ತೆರಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಖಾಸಗಿ ಕಂಪನಿ ಮಹಿಳಾ ನೌಕರರೊಬ್ಬರು ಬೇಸರ ವ್ಯಕ್ತಪಡಿಸಿದರು.

ಬೆಂಗಳೂರಿನ ಹೃದಯ ಭಾಗದಿಂದ ಇನ್ನಿತರ ಭಾಗಗಳಿಗೆ ಕೆಲಸ ಕಾರ್ಯಗಳಿಗೆ ತೆರಳಲು ಈ ಮೆಟ್ರೋ ಸೇವೆ ಸಾಕಷ್ಟು ಅನುಕೂವಾಗಿದೆ. ಸಂಚಾರ ದಟ್ಟಣೆ ಕಡಿಮೆ ಮಾಡುವ ಜೊತೆಗೆ ಜನರಿಗೆ ವೇಗದ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ. ಆದರೆ ಭಾನುವಾರ ತಡವಾಗಿ ಅಂದರೆ 7 ಗಂಟೆಗೆ ಮೆಟ್ರೋಗಳು ಸಂಚಾರ ಆರಂಭಿಸುವುದರಿಂದ ನಿತ್ಯ ಕೆಲಸಗಳಿಗೆ ಅಡಚಣೆ ಆಗಿದೆ.

Namma Metro Passengers Demands To Metro Rail Start To Early on Monday 6am

ಭಾನುವಾರ ಬೆಳಗ್ಗೆ 6 ಮೆಟ್ರೋ ಸಂಚಾರ ಆರಂಭಕ್ಕೆ ಮನವಿ

ಆದ್ದರಿಂದ ಭಾನುವಾರ ಬೆಳಗ್ಗೆ 6 ಗಂಟೆಗೆ ಸಂಚಾರ ಆರಂಭಿಸಬೇಕು. ಈ ವೇಳೆ ಜನರು ಓಡಾಡುವುದಿಲ್ಲ ಎಂದಾದರೆ ರೈಲುಗಳ ಮಧ್ಯೆದ ಅವಧಿ ಹೆಚ್ಚು ಮಾಡಿದರೂ ಪರವಾಗಿಲ್ಲ, ಒಂದು ಗಂಟೆ ಬೇಗ ರೈಲು ಆರಂಭಿಸಬೇಕು ಎಂದು ಉದ್ಯೋಗಿಗಳು ಬೆಂಗಳೂರು ಮೆಟ್ರೋ ರೈಲ್ ನಿಗಮ (BMRCL)ಕ್ಕೆ ಒತ್ತಾಯಿಸಿದ್ದಾರೆ.

ಬೆಂಗಳೂರಿಗೆ ಸೋಮವಾರ ಬೆಳಗ್ಗೆ ಆಗಮಿಸಿದರೆ ತಮ್ಮ ಮನೆಗೆ ತೆರಳಿ ಮತ್ತೆ ಕಚೇರಿ ಬೆಳಗ್ಗೆ 9 ಇಲ್ಲವೇ 10ಗಂಟೆಗೆ ತೆರಳುವುದು ಕಷ್ಟವಾಗುತ್ತದೆ. ಹೀಗಾಗಿ ಕೆಲವರು ಶನಿವಾರವೇ ಉತ್ತರ ಕರ್ನಾಟಕ, ಕರಾವಳಿ ಭಾಗ ಸೇರಿದಂತೆ ಬೇರೆ ಬೇರೆ ಕಡೆಯಿಂದ ಹೊರಟು ಬೆಂಗಳೂರಿಗೆ ಭಾನುವಾರ ಬೆಳಗ್ಗೆ ಆಗಮಿಸುತ್ತಾರೆ. ಆದರೆ ಅವರಿಗೆ ಬೆಳಗ್ಗೆ ಬೇಗ ಮೆಟ್ರೋ ಸಿಗದೇ ಮೆಜೆಸ್ಟಿಕ್, ಸಿಟಿ ರೈಲು ನಿಲ್ದಾಣಗಳ ಗೇಟ್‌ಗಳ ಮುಂದೆ ಗಂಟೆಗಳ ವರೆಗೂ ಕಾಯುತ್ತಿರುತ್ತಾರೆ.

ಮನವಿ ಪರಿಶೀಲಿಸಿ ನಿರ್ಧಾರ: ಮೆಟ್ರೋ ಎಂಡಿ

ಭಾನುವಾರ ಒಂದು ಗಂಟೆ ಬೇಗ ರೈಲು ಸಂಚಾರ ಆರಂಭಿಸಿದರೆ ಉದ್ಯೋಗಿಗಳಿಗೆ ಮಾತ್ರವಲ್ಲದೇ ಸಾರ್ವಜನಿಕರಿಗೂ ಅನುಕೂಲವಾಗಲಿದೆ. ಈ ಕುರಿತ ಮನವಿಗೆ ಸ್ಪಂದಿಸಿರುವ ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಅವರು ಈ ಮನವಿ ಪರಿಶೀಲಿಸಿ ನಿರ್ಧರಿಸಲಾಗುವುದು. ಅನೇಕ ಕಂಪನಿಗಳು ಭಾನುವಾರ ರಜೆ ಇರುತ್ತವೆ. ಆಗ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುತ್ತದೆ. ಹಾಗಾಗಿ ಬೆಳಗ್ಗೆ 7 ಗಂಟೆಗೆ ಸಂಚಾರ ಆರಂಭಿಸಿದ್ದೇವೆ ಎಂದರೆಂದು ವರದಿ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+